• Tag results for ಸರು

ಹುಬ್ಬಳ್ಳಿ: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣ: ಆರೋಪಿಗಳಿಗೆ ಮಾ.2 ವರೆಗೆ ನ್ಯಾಯಾಂಗ ಬಂಧನ

ಭಾರತ ಸರ್ಕಾರದ ವಿದ್ಯಾರ್ಥಿ ವೇತನ ಪಡೆದು ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದು ಈ ಸಂಬಂಧ ಕೋರ್ಟ್ ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

published on : 17th February 2020

ದೆಹಲಿಯಲ್ಲಿ ಬೆಳ್ಳಂಬೆಳಗ್ಗೆಯೇ ಎನ್ ಕೌಂಟರ್: ಪೊಲೀಸರಿಂದ ಇಬ್ಬರು ಕ್ರಿಮಿನಲ್ ಗಳ ಹತ್ಯೆ 

ಸೋಮವಾರ ಬೆಳ್ಳಂಬೆಳಗ್ಗೆ ನಡೆದ ಎನ್ ಕೌಂಟರ್ ನಲ್ಲಿ ದೆಹಲಿ ಪೊಲೀಸರು ಇಬ್ಬರು ಕ್ರಿಮಿನಲ್ ಗಳಾದ ರಾಜಾ ಖುರೇಷಿ ಮತ್ತು ರಮೇಶ್ ಬಹದ್ದೂರ್ ಎಂಬುವವರನ್ನು ಕೊಂದು ಹಾಕಿದ್ದಾರೆ.

published on : 17th February 2020

ಲಾರಿ ಮುಖಾಮುಖಿ ಡಿಕ್ಕಿ: ಮೂವರು ಸಾವು

ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಗರಸಂಗಿ ಕ್ರಾಸ್ ಬಳಿ ಸಂಭವಿಸಿದೆ‌.

published on : 16th February 2020

ಪೊಲೀಸರು ಶತ್ರುಗಳಲ್ಲ, ಸ್ನೇಹಿತರಂತೆ ಗೌರವಿಸಿ: ಅಮಿತ್  ಶಾ ಸಾರ್ವಜನಿಕರಿಗೆ ಮನವಿ

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸಲಹೆಯನ್ನು ನೆನಪಿಸಿಕೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪೊಲೀಸರು ನಮ್ಮ ಶತ್ರುಗಳಲ್ಲ, ಸ್ನೇಹಿತರಂತೆ ಅವರಿಗೆ ಗೌರವ ನೀಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ

published on : 16th February 2020

ಹುಬ್ಬಳ್ಳಿಯಲ್ಲಿ ಪಾಕ್ ಪರ ಘೋಷಣೆ: ದೇಶದ್ರೋಹ ಕೇಸ್ ಹಾಕಿದ್ದರೂ ಮೂವರು ವಿದ್ಯಾರ್ಥಿಗಳ ಬಿಡುಗಡೆ!

ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹ ಪ್ರಕರಣದಡಿ ಬಂಧಿಸಲಾಗಿದ್ದ ಹುಬ್ಬಳ್ಳಿಯ ಕೆಎಲ್ಇ ಕಾಲೇಜಿನ ವಿದ್ಯಾರ್ಥಿಗಳನ್ನು ಪೊಲೀಸರು ಬಾಂಡ್ ಬರೆಸಿಕೊಂಡು ಬಿಡುಗಡೆ ಮಾಡಿದೆ.

published on : 16th February 2020

ಸಿಎಎ ವಿರೋಧಿಸಿ ಪ್ರತಿಭಟನೆ: ಪೊಲೀಸ್-ಪ್ರತಿಭಟನಾಕಾರ ನಡುವೆ ಘರ್ಷಣೆ, 170 ಮಂದಿ ಬಂಧನ!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪೊಲೀಸ್ ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ನಡೆಸಿದ್ದು 170ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

published on : 15th February 2020

ದೇಶ ದ್ರೋಹದಡಿ ಶಾಲಾ ಮಕ್ಕಳ ವಿಚಾರಣೆ: ರಾಜ್ಯ ಸರ್ಕಾರ, ಪೊಲೀಸರಿಗೆ ಹೈಕೋರ್ಟ್ ನೋಟಿಸ್

ಬೀದರ್ ನ ಶಾಹಿನ್ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ - ಸಿಎಎ ವಿರೋಧಿಸಿ ನಾಟಕ ಪ್ರದರ್ಶಿಸಿದ್ದ ವಿದ್ಯಾರ್ಥಿಗಳನ್ನು ದೇಶದ್ರೋಹ ಆರೋಪದಡಿ ವಿಚಾರಣೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಶುಕ್ರವಾರ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

published on : 14th February 2020

ಎಚ್ಚರ ಗ್ರಾಹಕರೇ: ಬೆಂಗಳೂರಿಗರನ್ನು ಒಎಲ್ಎಕ್ಸ್​ನಲ್ಲಿ ವಂಚಿಸುತ್ತಿದ್ದ‌ ಐವರು ಹೈಟೆಕ್ ಕಳ್ಳರ ಬಂಧನ

ಒಎಲ್ಎಕ್ಸ್​ನಲ್ಲಿ ದೇಶವ್ಯಾಪಿ ವಂಚಿಸಿದ್ದ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿ, 6‌ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

published on : 14th February 2020

ಆಕಸ್ಮಿಕ ಬೆಂಕಿ‌ ತಗುಲಿ ತಂದೆ-ಮಗ ಸಾವು

ಒಲೆ ಹಚ್ಚುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ತಂದೆ-ಮಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

published on : 14th February 2020

ಅನೈತಿಕ ಸಂಬಂಧ: ಪತ್ನಿಯನ್ನು ನಡುರಸ್ತೆಗೆಳೆದು ಕ್ರೂರವಾಗಿ ಹಲ್ಲೆ, ಪ್ರಶ್ನಿಸಿದ ಜನರಿಗೆ ಪೊಲೀಸಪ್ಪನಿಂದ ಧಮ್ಕಿ, ವಿಡಿಯೋ ವೈರಲ್!

ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿಯ ಕುತ್ತಿಗೆ ಹಿಡಿದು ನಡುರಸ್ತೆಗೆಳೆದುಕೊಂಡು ಬಂದ ಗಂಡ ಕ್ರೂರ ಥಳಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. 

published on : 13th February 2020

20 ದಿನಗಳ ಹಿಂದೆಯೇ ಆಪ್ ಶಾಸಕ ನರೇಶ್ ಯಾದವ್ ಹತ್ಯೆಗೆ ಸಂಚು: ದೆಹಲಿ ಪೊಲೀಸರು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಿಸುತ್ತಿರುವ ಸಮಯದಲ್ಲಿಯೇ ಪಕ್ಷದ ಶಾಸಕ ನರೇಶ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

published on : 12th February 2020

ಅಕ್ರಮ ಸಂಬಂಧ: ಕಾರು ಚಾಲಕನ ಹತ್ಯೆ ಆರೋಪಿ ಸೆರೆ

ಅಕ್ರಮ ಸಂಬಂಧ ಹಿನ್ನಲೆಯಲ್ಲಿ ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಕಾರು ಚಾಲಕನ ಹತ್ಯೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

published on : 10th February 2020

ಬಾಬ್ರಿ ಮಸೀದಿ ಧ್ವಂಸ ಕುರಿತು ಶಾಲೆಯಲ್ಲಿ ಮಕ್ಕಳ ನಾಟಕ: ಪೊಲೀಸರ ವಿರುದ್ಧ ದೂರದಾರರ ಆರೋಪ

ಆರ್'ಎಸ್ಎಸ್ ಮುಖ್ಯಸ್ಥ ಕಲ್ಲಡ್ಕ ಪ್ರಭಾಕರ ಭಟ್ಟರ ಶ್ರೀರಾಮ ವಿದ್ಯಾಕೇಂದ್ರ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಾಬ್ರಿ ಮಸೀದಿ ಧ್ವಂಸ ಕುರಿತು ಮಕ್ಕಳು ಶಾಲೆಯಲ್ಲಿ ಪ್ರದರ್ಶಿಸಿದ್ದ ನಾಟಕ ಪ್ರಕರಣ ಕುರಿತು ಪೊಲೀಸರ ವಿರುದ್ಧ ದೂರುದಾರರು ಆರೋಪ ವ್ಯಕ್ತಪಡಿಸಿದ್ದಾರೆ. 

published on : 8th February 2020

ಕೆಪಿಎಲ್ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣ: ಸಿಎಂ ಗೌತಮ್ ಸೇರಿ 16 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್)ನ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು, 16 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

published on : 7th February 2020

ತಾಯಿಯ ಕತ್ತು ಸೀಳಿ, ಪ್ರಿಯತಮನ ಜೊತೆ ಅಂಡಮಾನ್‍ಗೆ ಎಸ್ಕೇಪ್ ಆಗಿದ್ದ ಬೆಂಗಳೂರು ಟೆಕ್ಕಿ ಮಾಡಿದ್ದು ಬರೋಬ್ಬರಿ 19 ಲಕ್ಷ ಸಾಲ!

ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಅನ್ನುವಂತೆ ಮಗಳೇ ತಾಯಿಯನ್ನು ಬರ್ಬರವಾಗಿ ಹತ್ಯೆ ಮಾಡಿ ನಂತರ ಗೆಳೆಯನ ಜೊತೆ ಅಂಡಮಾನ್ ಮತ್ತು ನಿಕೋಬಾರ್ ಗೆ ತೆರಳಿ ಮೋಜು ಮಸ್ತಿಯಲ್ಲಿ ತೊಡಗಿದ್ದಾಗ ಕೆಆರ್ ಪುರಂನ ಇನ್ಸ್ ಪೆಕ್ಟರ್ ಅಂಬರೀಶ್ ನೇತೃತ್ವದ ತಂಡ ಇಬ್ಬರನ್ನು ಬಂಧಿಸಿದ್ದಾರೆ.

published on : 7th February 2020
1 2 3 4 5 6 >