social_icon
  • Tag results for Hijab

ಹಿಜಾಬ್ ನಿಷೇಧ ವಿವಾದ: ವಿಚಾರಣೆಗೆ ತ್ರಿಸದಸ್ಯ ಪೀಠ ರಚಿಸಲು ಸುಪ್ರೀಂ ಕೋರ್ಟ್ ಪರಿಗಣನೆ

ಕರಾವಳಿಯಲ್ಲಿ ಆರಂಭವಾಗಿ ನಂತರ ರಾಜ್ಯಾದ್ಯಂತ ವ್ಯಾಪಿಸಿ ನ್ಯಾಯಾಲಯ ಮೆಟ್ಟಿಲೇರಿ ವಿಚಾರಣೆ ಹಂತದಲ್ಲಿರುವ ಹಿಜಾಬ್ ವಿವಾದ ಕುರಿತು ವಿಚಾರಣೆ ನಡೆಸಲು ತ್ರಿಸದಸ್ಯ ಪೀಠ ಸ್ಥಾಪಿಸಲು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

published on : 23rd January 2023

ಹಿಜಾಬ್ ವಿವಾದಕ್ಕೆ ಒಂದು ವರ್ಷ, ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತಾರತಮ್ಯ: ವರದಿ

ಕರ್ನಾಟಕದಲ್ಲಿ ಹಿಜಾಬ್ ವಿವಾದ ನಡೆದು ಒಂದು ವರ್ಷವೇ ಕಳೆದಿದೆ. ನಂತರ ಅದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹಿಜಾಬ್ ವಿವಾದ ನಂತರ ಮುಸ್ಲಿಂ ವಿದ್ಯಾರ್ಥಿನಿಯರು, ಯುವತಿಯರಿಗೆ ತಾರತಮ್ಯ ತೋರಲಾಗುತ್ತಿದೆ ಎಂಬ ಅಂಶ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ ಕರ್ನಾಟಕ(PUCL-K) ವರದಿಯಿಂದ ತಿಳಿದುಬಂದಿದೆ.

published on : 10th January 2023

ಹಿನ್ನೋಟ 2022: ಶೈಕ್ಷಣಿಕ ವಲಯದಲ್ಲಿ ಹಲವು ಬದಲಾವಣೆಗಳು, ಕರ್ನಾಟಕಕ್ಕೆ ವಿವಾದದ ವರ್ಷ

ಕಳೆದ ಎರಡು ವರ್ಷಗಳು ಕೋವಿಡ್ ಸೋಂಕಿನ ಕಾರಣದಿಂದ ಸರಿಯಾಗಿ ಶಾಲಾ-ಕಾಲೇಜುಗಳು ಸಾಗದೆ ಆನ್ ಲೈನ್ ಮೂಲಕ ಶಿಕ್ಷಣ ನಡೆದಿದ್ದವು. ಈ ಮಧ್ಯೆ  ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಜಾರಿಗೆ ತಯಾರಿ ನಡೆಸುತ್ತಿದ್ದರೆ, 2022ರಲ್ಲಿ ಕೊರೋನಾ ಸೋಂಕು ಕಡಿಮೆಯಾಗಿ ಶಾಲಾ-ಕಾಲೇಜುಗಳಲ್ಲಿ ದೈಹಿಕ ತರಗತಿಗಳು ಆರಂಭವಾದವು. 

published on : 28th December 2022

ನನ್ನ ಸಮಾಧಿ ಬಳಿ ಕುರಾನ್ ಪಠಿಸಬೇಡಿ, ಸಾವನ್ನು ಸಂಭ್ರಮಿಸಿ', ಇರಾನ್‌ನಲ್ಲಿ ಗಲ್ಲಿಗೇರುವ ಮುನ್ನ 23ರ ಯುವಕನ ಕೊನೆಯ ಆಸೆ

ಇರಾನ್‌ನಲ್ಲಿ ಹಿಜಾಬ್ ಮತ್ತು ಸರ್ಕಾರಿ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಮರಣದಂಡನೆಗೆ ಗುರಿಯಾದ 23 ವರ್ಷದ ಮಜಿದ್ರೇಜಾ ರಹ್ನಾವಾರ್ಡ್ ಅವರ ಕೊನೆಯ ಆಸೆ ಎಂತವರ ಮನಸನ್ನು ಕದಡಿಸಿಬಿಡುತ್ತದೆ.

published on : 16th December 2022

ಹಿಜಾಬ್ ವಿರೋಧಿ ಪ್ರತಿಭಟನೆ: 'ನೈತಿಕತೆ ಪೋಲೀಸ್' ವಿಸರ್ಜಿಸಿದ ಇರಾನ್

ಬೃಹತ್ ಹಿಜಾಬ್ ವಿರೋಧಿ ಪ್ರತಿಭಟನೆಗೆ ಮಣಿದಿರುವ ಇರಾನ್ ಸರ್ಕಾರ ಕೊನೆಗೂ ತನ್ನ ದೇಶದಲ್ಲಿನ 'ನೈತಿಕತೆ ಪೋಲೀಸ್' ವ್ಯವಸ್ಥೆಯನ್ನು ವಿಸರ್ಜಿಸಿದೆ.

published on : 4th December 2022

ಫಿಫಾ ವಿಶ್ವಕಪ್‌‌ನಲ್ಲಿ ಮತ್ತೊಂದು ವಿವಾದ; ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್, ಕಾರಣ ಹಿಜಾಬ್!!

ಕತಾರ್ ನಲ್ಲಿ ಆರಂಭವಾಗಿರುವ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ಇಂದು ಮತ್ತೊಂದು ವಿವಾದಕ್ಕೆ ವೇದಿಕೆಯಾಗಿದ್ದು, ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಲು ಇರಾನ್ ತಂಡದ ಆಟಗಾರರು ನಿರಾಕರಿಸಿದ್ದಾರೆ.

published on : 21st November 2022

ಇರಾನ್‍ನಲ್ಲಿ ಹಿಜಾಬ್ ಪ್ರತಿಭಟನೆ: ಮೆಟ್ರೋದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರ ಗುಂಡಿನ ದಾಳಿ; ಕಾಲ್ತುಳಿತ, ಹಲವರಿಗೆ ಗಾಯ

ಇರಾನ್‍ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ ತಾರಕಕ್ಕೇರಿದ್ದು, ಮೆಟ್ರೋ ನಿಲ್ದಾಣಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಮೇಲೆ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಉಂಟಾದ ಕಾಲ್ತುಳಿತದಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದಾರೆ.

published on : 17th November 2022

ಇರಾನ್ ಹಿಜಾಬ್ ವಿರೋಧಿ ಪ್ರತಿಭಟನೆ: ಭದ್ರತಾ ಪಡೆಗಳಿಂದ ಕನಿಷ್ಠ 326 ಮಂದಿಯ ಬರ್ಬರ ಹತ್ಯೆ!

ನೈತಿಕ ಪೊಲೀಸರ ಕಸ್ಟಡಿಯಲ್ಲಿದ್ದ ಮಹ್ಸಾ ಅಮಿನಿನ ಸಾವಿನ ನಂತರ ತೀವ್ರಗೊಂಡ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ನಿರತವಾಗಿರುವ ಇರಾನ್‌ನ ಭದ್ರತಾ ಪಡೆಗಳು ಕನಿಷ್ಠ 326 ಜನರನ್ನು ಹತ್ಯೆ ಮಾಡಿದೆ ಎಂದು ಇರಾನ್ ಮಾನವ ಹಕ್ಕುಗಳು ತಿಳಿಸಿದೆ.

published on : 13th November 2022

ಭಾರತಕ್ಕೂ ಕಾಲಿಟ್ಟ ಇರಾನ್‌ ಹಿಜಾಬ್ ವಿರುದ್ಧದ ಹೋರಾಟ ಜ್ವಾಲೆ: ಕೇರಳದಲ್ಲಿ ಹಿಜಾಬ್ ಗೆ ಬೆಂಕಿಯಿಟ್ಟ ಮುಸ್ಲಿಂ ಮಹಿಳೆಯರು!

ಕಡ್ಡಾಯ ಹಿಜಾಬ್‌ಗೆ ಸಂಬಂಧಿಸಿದಂತೆ ಇರಾನ್‌ನಲ್ಲಿ ಕೆಲ ದಿನಗಳಿಂದ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಅನೇಕ ಜನರು ಸೈನಿಕರ ಗುಂಡೇಟಿಗೆ ಬಲಿಯಾಗಿದ್ದಾರೆ. ಹಿಜಾಬ್ ವಿರುದ್ಧ ಆರಂಭವಾದ ಈ ಪ್ರತಿಭಟನೆಯ ಜ್ವಾಲೆ ಇದೀಗ ಭಾರತದ ಕೇರಳಕ್ಕೂ ತಲುಪಿದೆ.

published on : 7th November 2022

ಹಿಜಾಬ್ ಧರಿಸಿದ ಮಹಿಳೆಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುತ್ತೇನೆ: ಓವೈಸಿ

ಹಿಜಾಬ್ ಧರಿಸಿರುವ ಮಹಿಳೆಯನ್ನು ಭಾರತದ ಪ್ರಧಾನಮಂತ್ರಿಯಾಗಿ ನೋಡಲು ಬಯಸುತ್ತೇನೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಓವೈಸಿ ಅವರು ಮಂಗಳವಾರ ಹೇಳಿದ್ದಾರೆ.

published on : 26th October 2022

ಹಿಜಾಬ್ ಧರಿಸದೆ ಸ್ಪರ್ಧಿಸಿದ ಅಥ್ಲೀಟ್ ಎಲ್ನಾಜ್ ರೆಕಾಬಿಗೆ ಇರಾನ್‌ನಲ್ಲಿ ಭವ್ಯ ಸ್ವಾಗತ, ವಿಡಿಯೋ ವೈರಲ್!

ಕ್ರೀಡಾಕೂಟದಲ್ಲಿ ಹಿಜಾಬ್ ಧರಿಸದೆ ಸ್ಪರ್ಧಿಸುವ ಮೂಲಕ ಸಂಚಲನ ಮೂಡಿಸಿದ್ದ ಇರಾನ್ ಪರ್ವತಾರೋಹಿಯೊಬ್ಬರು ಕಳೆದ ರಾತ್ರಿ ಟೆಹ್ರಾನ್‌ಗೆ ಆಗಮಿಸಿದ್ದು ಆಟಗಾರ್ತಿಯ ನಡೆಯನ್ನು ಶ್ಲಾಘಿಸಿದ ಬೆಂಬಲಿಗರು ವೀರೋಚಿತ ಸ್ವಾಗತವನ್ನು ನೀಡಿದರು.

published on : 19th October 2022

ಇರಾನ್ ಮಹಿಳೆಯರನ್ನು ಬೆಂಬಲಿಸಿ ತಲೆಗೂದಲು ಕತ್ತರಿಸಿದ್ದೇನೆ ಎಂದ ಊರ್ವಶಿ ರೌಟೇಲಾ, ಕಾಲೆಳೆದ ನೆಟ್ಟಿಗರು

ತನ್ನನ್ನು ಇರಾನ್‌ನ ಯುವತಿ ದಿವಂಗತ ಮಹ್ಸಾ ಅಮಿನಿಗೆ ಹೋಲಿಸಿಕೊಂಡಿದ್ದ ನಟಿ ಊರ್ವಶಿ ರೌಟೇಲಾ ಇದೀಗ ಮಹ್ಸಾ ಸಾವಿನ ವಿರುದ್ಧ ಹಾಗೂ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಇರಾನ್ ಮಹಿಳೆಯರನ್ನು ಬೆಂಬಲಿಸಿ 'ತಲೆ ಕೂದಲು ಕತ್ತರಿಸುವ' ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

published on : 17th October 2022

'ನಮ್ಮ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುತ್ತಾರೆ: ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ'

ಮುಸ್ಲಿಂ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸಲು ಯಾರೂ ಒತ್ತಾಯ ಮಾಡುತ್ತಿಲ್ಲ,  ಅವರ ಇಚ್ಚೆ ಅದು. ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ, ಆದರೆ ನಮ್ಮ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

published on : 15th October 2022

ಶಾಲೆ-ಕಾಲೇಜು ಗೇಟ್ ಬಳಿ ಹಿಜಾಬ್ ತೆಗೆಯಬೇಕೆಂದು ಹೇಳುವುದು ಹೆಣ್ಣಿನ ಖಾಸಗಿತನ ಮತ್ತು ಘನತೆಯ ಮೇಲಿನ ಆಕ್ರಮಣ: ನ್ಯಾಯಮೂರ್ತಿ ಧುಲಿಯಾ

ಶಾಲಾ-ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಶಾಲೆಯ ಗೇಟ್‌ನಲ್ಲಿ ಹಿಜಾಬ್ ಅನ್ನು ತೆಗೆದು ಒಳಗೆ ಹೋಗಬೇಕೆನ್ನುವುದು ಆಕೆಯ ಗೌಪ್ಯತೆ ಮತ್ತು ಘನತೆಯ ಮೇಲಿನ ಆಕ್ರಮಣವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಗುರುವಾರ ಹೇಳಿದ್ದಾರೆ.

published on : 14th October 2022

ಹಿಜಾಬ್ ವಿವಾದ: ಸುಪ್ರೀಂ ಕೋರ್ಟ್ ನ ಭಿನ್ನ ತೀರ್ಪಿನಿಂದ ಉಡುಪಿ ವಿದ್ಯಾರ್ಥಿನಿಯರಲ್ಲಿ ಭರವಸೆಯ ಆಶಾಕಿರಣ

ಹಿಜಾಬ್ ವಿವಾದ ಕುರಿತು ಸುಪ್ರೀಂ ಕೋರ್ಟ್ ನಿನ್ನೆ ಭಿನ್ನ ತೀರ್ಪು ನೀಡಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿರುವುದು ಹಿಜಾಬ್ ನಿಷೇಧ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ವಿದ್ಯಾರ್ಥಿಗಳಲ್ಲಿ ಭರವಸೆಯ ಆಶಾಕಿರಣ ಮೂಡಿಸಿದೆ. 

published on : 14th October 2022
1 2 3 4 5 6 > 

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9