• Tag results for Results

ತಜ್ಞರ ಸಮಿತಿ ತೀರ್ಮಾನಿಸುವವರೆಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ ಬೇಡ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಪ್ರಮುಖ ಬೆಳವಣಿಗೆಯಲ್ಲಿ, ಸರ್ಕಾರವು ರಚಿಸಿದ ತಜ್ಞರ ಸಮಿತಿಯು ಸಮಗ್ರ ನಿರ್ಧಾರವನ್ನು ತೆಗೆದುಕೊಳ್ಳುವವರೆಗೆ ಈ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸದಂತೆ ಕರ್ನಾಟಕ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 

published on : 17th June 2021

ವಿದ್ಯಾರ್ಥಿಗಳ 10, 11 ಮತ್ತು 12ನೇ ತರಗತಿ ಸಾಧನೆ ಆಧರಿಸಿ 12ನೇ ತರಗತಿ ಫಲಿತಾಂಶ ಪ್ರಕಟ: 'ಸುಪ್ರೀಂ'ಗೆ ಸಿಬಿಎಸ್ ಇ ವರದಿ ಸಲ್ಲಿಕೆ

12ನೇ ತರಗತಿ ವಿದ್ಯಾರ್ಥಿಗಳಿಗೆ ಈ ಬಾರಿ ಗ್ರೇಡ್ ಹೇಗೆ ನೀಡಲಾಗುತ್ತದೆ, ವಿದ್ಯಾರ್ಥಿಗಳ ಮೌಲ್ಯಮಾಪನ ಮಾನದಂಡ ಬಗ್ಗೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ ಇ) ಸಮಿತಿ ಅಂತಿಮಗೊಳಿಸಿದ ವರದಿಯನ್ನು ಸುಪ್ರೀಂ ಕೋರ್ಟ್ ಮುಂದೆ ಮಂಡಿಸಿದೆ.

published on : 17th June 2021

ಎಸ್.ಎಸ್.ಎಲ್.ಸಿ ಅಂಕಗಳನ್ನೂ ಪರಿಗಣಿಸಿ ದ್ವಿತೀಯ ಪಿಯುಸಿ ಫಲಿತಾಂಶ ಘೋಷಣೆ: ಸಚಿವ ಸುರೇಶ್ ಕುಮಾರ್

ಇಂದಿನ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವು ಇನ್ನಷ್ಟು ಸಮಗ್ರವಾಗಲು ಹಾಗೂ ಹೆಚ್ಚು ನ್ಯಾಯಯುತವಾಗಲು ಈ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಫಲಿತಾಂಶಗಳನ್ನೂ ಅವಲೋಕಿಸಿ, ಸೂಕ್ತ ಮೌಲ್ಯವನ್ನು ಕಲ್ಪಿಸುವ ಮೂಲಕ ಫಲಿತಾಂಶ ಘೋಷಣೆ ಮಾಡಬೇಕೆಂದು ಸಚಿವ ಸುರೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

published on : 5th June 2021

ಕೋವಿಡ್-19 ಸೋಂಕು ಪತ್ತೆಗೆ ಹೊಸ ಪರೀಕ್ಷೆ: ಒಂದೇ ಕ್ಷಣದಲ್ಲಿ ಬರುತ್ತೆ ಫಲಿತಾಂಶ!

ಕೋವಿಡ್-19 ಸೋಂಕು ಪತ್ತೆಗೆ ಹೊಸ ಪರೀಕ್ಷೆ ಮಾದರಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಒಂದೇ ಕ್ಷಣದಲ್ಲಿ ಫಲಿತಾಂಶ ಬರಲಿದೆ.

published on : 20th May 2021

ಪಕ್ಷ ತೊರೆದವರು ದ್ರೋಹಿಗಳು: ನಾಯಕರ ಸರಣಿ ರಾಜಿನಾಮೆ ಕುರಿತು ಎಂಎನ್‌ಎಂ ವರಿಷ್ಠ ಕಮಲ್‌ ಹಾಸನ್‌ ಆಕ್ರೋಶ

ತಮಿಳುನಾಡಿನಲ್ಲಿ ಸೂಪರ್‌ ಸ್ಟಾರ್‌ ಕಮಲ್ ಹಾಸನ್ ಅವರ ಮಕ್ಕಳ ನೀದಿ ಮಯ್ಯಂ (ಎಂಎನ್ಎಂ) ಪಕ್ಷದಲ್ಲಿ ಈಗ ರಾಜೀನಾಮೆ ಪರ್ವ ಮುಂದುವರೆದಿದೆ.

published on : 8th May 2021

ಕಳಪೆ ಸಾಧನೆ: ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ರಿಪುನ್ ಬೋರ ರಾಜೀನಾಮೆ

ಅಸ್ಸಾಂ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಪಕ್ಷದ ಕಳಪೆ ಸಾಧನೆಗೆ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಅಧ್ಯಕ್ಷ ರಿಪುನ್ ಬೋರ ರಾಜೀನಾಮೆ ನೀಡಿದ್ದಾರೆ. 

published on : 3rd May 2021

ಬಂಗಾಳಕ್ಕೆ ಟಿಎಂಸಿ, ತ.ನಾಡಿನಲ್ಲಿ ಡಿಎಂಕೆ, ಕೇರಳದಲ್ಲಿ ಎಲ್ ಡಿಎಫ್ ಗೆಲುವು; ಅಸ್ಸಾಂ ನಲ್ಲಿ ಬಿಜೆಪಿ ಮತ್ತೆ ಅಧಿಕಾರದತ್ತ

ಕೊರೋನಾ ಭೀತಿಯ ನಡುವೆಯೂ ತೀವ್ರ ಕುತೂಹಲ ಮೂಡಿಸಿದ್ದ ಪಂಚ ರಾಜ್ಯಗಳ ಚುನಾವಣೆಯ ಮತ ಎಣಿಕೆ ಒಂದು ಹಂತಕ್ಕೆ ಬಂದಿದ್ದು, ಗೆಲುವಿನ ಅಂದಾಜು ಲಭ್ಯವಾಗತೊಡಗಿದೆ. 

published on : 2nd May 2021

ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ-2021 ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಮಮತಾಗೆ ಮುನ್ನಡೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಹೈ ಪ್ರೊಫೈಲ್ ಅಖಾಡವಾಗಿರುವ ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. 

published on : 2nd May 2021

ಕರ್ನಾಟಕ ಉಪಚುನಾವಣೆ ಫಲಿತಾಂಶ: ಬಸವಕಲ್ಯಾಣ ವಿಧಾನಸಭೆ, ಬೆಳಗಾವಿ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ

ಕರ್ನಾಟಕದ ಎರಡು ವಿಧಾನಸಭೆ, ಒಂದು ಲೋಕಸಭೆಗೆ ನಡೆದ ಉಪಚುನಾವಣೆಯ ಪೈಕಿ ಬಿಜೆಪಿಗೆ ಒಂದು ಕ್ಷೇತ್ರದಲ್ಲಿ ಮುಖಭಂಗ ಉಂಟಾಗಿದ್ದರೆ, ಉಳಿದ ಎರಡರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 

published on : 2nd May 2021

ತಮಿಳು ನಾಡು ಮುಂದಿನ ಐದು ವರ್ಷ ಯಾರ ಮುಡಿಗೆ? ಸ್ಟಾಲಿನ್-ಪಳನಿಸ್ವಾಮಿ ಭವಿಷ್ಯ ಇಂದು ನಿರ್ಧಾರ 

ತಮಿಳು ನಾಡು ಚುನಾವಣಾ ರಾಜಕೀಯ ಇತಿಹಾಸದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊಸ ಅಧ್ಯಾಯಕ್ಕೆ ನಾಂದಿ ಹಾಡಬಹುದು. ಇಂದು ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. ಇದು ರಾಜ್ಯದ ಮುಂದಿನ 5 ವರ್ಷಗಳ ಆಡಳಿತಕ್ಕೆ ದಿಕ್ಸೂಚಿಯಾಗುವುದು ಮಾತ್ರವಲ್ಲದೆ ದಶಕಗಳವರೆಗೆ ತಮಿಳು ನಾಡಿನ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಹೇಳಬಹುದು.

published on : 2nd May 2021

ಜೂನ್ 20ರ ವೇಳೆಗೆ 10ನೇ ತರಗತಿ ಫಲಿತಾಂಶ ಪ್ರಕಟ: ಇಂಟರ್ನಲ್ಸ್ ಆಧಾರದ ಮೇಲೆ ವಿದ್ಯಾರ್ಥಿಗಳ ಮೌಲ್ಯಮಾಪನ 

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು 10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿರುವ ಸಿಬಿಎಸ್ ಇ, ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲು ನೀತಿಯೊಂದನ್ನು ಅನುಸರಿಸುವುದಾಗಿ ಹೇಳಿದೆ.

published on : 2nd May 2021

ಕೇರಳ: ಚುನಾವಣೆ ಫಲಿತಾಂಶ ಬರುವುದಕ್ಕೂ 2 ದಿನಗಳ ಮುನ್ನ ಯುಡಿಎಫ್ ಅಭ್ಯರ್ಥಿ ವಿವಿ ಪ್ರಕಾಶ್ ನಿಧನ

ಕೇರಳದ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುವುದಕ್ಕೂ ಎರಡು ದಿನಗಳ ಮುನ್ನ ಯುಡಿಎಫ್ ಅಭ್ಯರ್ಥಿಯೊಬ್ಬರು ಮೃತಪಟ್ಟಿದ್ದಾರೆ. 

published on : 29th April 2021

4 ರಾಜ್ಯಗಳ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕಾರಣದ ದಿಕ್ಸೂಚಿ: ಸಂಜಯ್ ರಾವತ್

ನಾಲ್ಕು ರಾಜ್ಯಗಳ, ವಿಶೇಷವಾಗಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶ ರಾಷ್ಟ್ರ ರಾಜಕೀಯದ ಮುಂದಿನ ಹಾದಿಯನ್ನು ನಿರ್ಧರಿಸಲಿದೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ಗುರುವಾರ ಹೇಳಿದ್ದಾರೆ.

published on : 1st April 2021

ಜೆಇಇ(ಮೇನ್ಸ್) ಫಲಿತಾಂಶ ಪ್ರಕಟ: 100ಕ್ಕೆ ನೂರು ಪಡೆದ 6 ವಿದ್ಯಾರ್ಥಿಗಳು

ಜೆಇಇ-ಮೇನ್ಸ್ ಫಲಿತಾಂಶ ಪ್ರಕಟಗೊಂಡಿದ್ದು ಆರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

published on : 8th March 2021

ಮೊದಲ ಹಂತದ ಪ್ರಾಯೋಗಿಕ ಫಲಿತಾಂಶ: ಕೋವಾಕ್ಸಿನ್ ಸುರಕ್ಷಿತ, ಗಂಭೀರ ಅಡ್ಡ ಪರಿಣಾಮ ಇಲ್ಲ

ದೇಶದಲ್ಲಿ ಕೊರೋನಾ ವೈರಸ್ ವಿರುದ್ಧದ ಮೊದಲ ಹಂತದ ಲಸಿಕೆ ಅಭಿಯಾನ ಬಹುತೇಕ ಯಶಸ್ವಿಯಾಗಿ ನಡೆಯುತ್ತಿದ್ದು, ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ನ ಮೊದಲ ಹಂತದ...

published on : 22nd January 2021
1 2 3 >