• Tag results for TRP Scam

ಟಿಆರ್‌ಪಿ ಹೆಚ್ಚಳಕ್ಕೆ ಬಾರ್ಕ್ ಸಿಇಒ ಜೊತೆ ಸೇರಿ ಅರ್ನಾಬ್ ಗೋಸ್ವಾಮಿ ಸಂಚು: ಮುಂಬೈ ಪೊಲೀಸ್

ಹಿರಿಯ ಟಿವಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರು ರಿಪಬ್ಲಿಕ್ ಟಿವಿ ಚಾನೆಲ್‌ಗಳ ರೇಟಿಂಗ್‌ಗಳನ್ನು ಸುಧಾರಿಸಲು ಆಗಿನ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಸಿಇಒ ಪಾರ್ಥೋ ದಾಸ್‌ಗುಪ್ತಾ ಅವರ ಅನುಸಾರವಾಗಿ ಟಿಆರ್‌ಪಿಗಳ ಅಕ್ರಮ ನಡೆಸಿದ್ದಾರೆ

published on : 23rd June 2021

ಟಿಆರ್ ಪಿ ಹಗರಣ: 2ನೇ ಆರೋಪ ಪಟ್ಟಿಯಲ್ಲಿ ಅರ್ನಬ್ ಗೋಸ್ವಾಮಿ ಹೆಸರು

ಟಿಆರ್ ಪಿ ಹಗರಣದ 2ನೇ ಆರೋಪ ಪಟ್ಟಿಯಲ್ಲಿ ರಿಪಬ್ಲಿಕ್ ಚಾನಲ್ ನ ಅರ್ನಬ್ ಗೋಸ್ವಾಮಿ ಹೆಸರನ್ನು ಮುಂಬೈ ಪೊಲೀಸರು ಸೇರಿಸಿದ್ದಾರೆ. 

published on : 22nd June 2021

ಟಿಆರ್‌ಪಿ ಹಗರಣ: ಅರ್ನಾಬ್‌ ಬಂಧಿಸಲು 3 ದಿನಗಳ ಮುಂಗಡ ನೋಟೀಸ್ ಕೊಡಿ; ಪೋಲೀಸರಿಗೆ ಹೈಕೋರ್ಟ್ ಸೂಚನೆ

ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ಹಗರಣ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯವರನ್ನು ಬಂಧಿಸಲು ಬಯಸಿದರೆ ಮೂರು ದಿನಗಳ ಮುಂಗಡ ನೋಟಿಸ್ ನೀಡುವಂತೆ ಬಾಂಬೆ ಹೈಕೋರ್ಟ್ ಬುಧವಾರ ಮುಂಬೈ ಪೊಲೀಸರಿಗೆ ನಿರ್ದೇಶನ ನೀಡಿದೆ.

published on : 24th March 2021

ಟಿಆರ್ ಪಿ ಹಗರಣ: ಸಾಕ್ಷ್ಯವಿದ್ದರೂ ಆರೋಪಿಗಳ ಪಟ್ಟಿಯಲ್ಲಿ ರಿಪಬ್ಲಿಕ್ ಟಿವಿ, ಅರ್ನಬ್ ಹೆಸರು ಏಕಿಲ್ಲ; ಬಾಂಬೆ ಹೈಕೋರ್ಟ್ ಪ್ರಶ್ನೆ

ಟಿಆರ್ ಪಿ ಹಗರಣದಲ್ಲಿ ಸಾಕ್ಷ್ಯವಿದ್ದರೂ ರಿಪಬ್ಲಿಕ್, ಅರ್ನಬ್ ಗೋಸ್ವಾಮಿ ಅವರ ಹೆಸರುಗಳು ಆರೋಪಿಗಳ ಪಟ್ಟಿಯಲ್ಲಿ ಏಕಿಲ್ಲ ಎಂದು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ. 

published on : 17th March 2021

ಟಿಆರ್‌ಪಿ ಹಗರಣ: ಬಾರ್ಕ್ ಮಾಜಿ ಮುಖ್ಯಸ್ಥ ಪಾರ್ಥೊ ದಾಸ್‌ಗುಪ್ತಾಗೆ ಬಾಂಬೇ ಹೈಕೋರ್ಟ್ ಜಾಮೀನು

ಇಡೀ ದೇಶಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌ (ಟಿಆರ್‌ಪಿ) ತಿರುಚಿದ ಪ್ರಕರಣದ ಸಂಬಂಧ ಬಂಧನಕ್ಕೀಡಾಗಿದ್ದ ಬಾರ್ಕ್ ಸಂಸ್ಥೆಯ ಮಾಜಿ ಮುಖ್ಯಸ್ಥ ಪಾರ್ಥೊ ದಾಸ್‌ಗುಪ್ತಾಗೆ ಬಾಂಬೇ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

published on : 2nd March 2021

ನಕಲಿ ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್ಚಂದಾನಿಗೆ ಜಾಮೀನು

ನಕಲಿ ಟಿಆರ್‌ಪಿ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖನ್ಚಂದಾನಿಗೆ ಮುಂಬೈನ ಕೋರ್ಟ್ ಜಾಮೀನು ನೀಡಿದೆ, 50,000 ಬಾಂಡ್ ಮೇಲೆ ಮುಂಬೈನ ಎಸ್ಪ್ಲನೇಡ್  ನಲ್ಲಿರುವ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಖಂಚಂದಾನಿಗೆ ಜಾಮೀನು ಮಂಜೂರು ಮಾಡಿದೆ.

published on : 16th December 2020

ನಕಲಿ ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿಯ ಸಹಾಯಕ ಉಪಾಧ್ಯಕ್ಷ ಬಂಧನ

ನಕಲಿ ಟಿಆರ್‌ಪಿ ಹಗರಣದಲ್ಲಿ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಸಹಾಯಕ ಉಪಾಧ್ಯಕ್ಷ ಘನಶ್ಯಾಮ್ ಸಿಂಗ್ ಅವರನ್ನು ಮುಂಬೈ ಪೊಲೀಸರು ಇಂದು ಬೆಳಿಗ್ಗೆ 7: 40 ಕ್ಕೆ ಬಂಧಿಸಿದ್ದಾರೆ.

published on : 10th November 2020

ನಕಲಿ ಟಿಆರ್ ಪಿ ಕೇಸು: ಎಫ್ಐಆರ್ ರದ್ದು ಕೋರಿ ಮುಂಬೈ ಹೈಕೋರ್ಟ್ ಮೊರೆ ಹೋದ ರಿಪಬ್ಲಿಕ್ ಟಿವಿ

ನಕಲಿ ಟಿಆರ್ ಪಿ ಕೇಸಿನಲ್ಲಿ ದಾಖಲಿಸಿರುವ ಎಫ್ಐಆರ್ ನ್ನು ರದ್ದುಪಡಿಸುವಂತೆ ಕೋರಿ ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮತ್ತು ಟಿವಿಯ ಮಾಲೀಕ ಸಂಸ್ಥೆ ಎಆರ್ ಜಿ ಔಟ್ಲಿಯರ್ ಮೀಡಿಯಾ ಪ್ರೈ.ಲಿಮಿಟೆಡ್ ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದಾರೆ.

published on : 18th October 2020

ಟಿಆರ್ ಪಿ ಹಗರಣ: ಸುದ್ದಿ ವಾಹಿನಿಗಳ ವಾರದ ರೇಟಿಂಗ್ಸ್ ತಾತ್ಕಾಲಿಕ ಸ್ಥಗಿತ- ಬಿಎಆರ್ ಸಿ

ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್(ಟಿಆರ್ ಪಿ) ಹಗರಣ ಹಿನ್ನೆಲೆಯಲ್ಲಿ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ(ಬಿಎಆರ್ ಸಿ) ದೇಶಾದ್ಯಂತ ಸುದ್ದಿ ವಾಹಿನಿಗಳ ವಾರದ ರೇಟಿಂಗ್ಸ್ ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

published on : 15th October 2020

ನಕಲಿ ಟಿಆರ್‌ಪಿ: ರಿಪಬ್ಲಿಕ್ ಟಿವಿಯ ಇಬ್ಬರು ಹಿರಿಯ ಸಂಪಾದಕರು ತನಿಖಾಧಿಕಾರಿಗಳ ಮುಂದೆ ಹಾಜರು

ನಕಲಿ ಟಿಆರ್‌ಪಿ ದಂಧೆ ಪ್ರಕರಣದಲ್ಲಿ ಹೇಳಿಕೆಗಳನ್ನು ದಾಖಲಿಸಲು ರಿಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣಸ್ವಾಮಿ ಮತ್ತು ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಅಭಿಷೇಕ್ ಕಪೂರ್ ಬುಧವಾರ ಮುಂಬೈ ಅಪರಾಧ ಶಾಖೆಯ ಅಧಿಕಾರಿಗಳ ಮುಂದೆ ಹಾಜರಾದರು.  

published on : 14th October 2020

'ಹಾನಿಕಾರಕ ವಿಷಯ' ಉತ್ತೇಜಿಸುವ ಚಾನಲ್ ಗಳಿಗೆ ಜಾಹಿರಾತು ನೀಡದಿರಲು ಪಾರ್ಲೇ-ಜಿ ನಿರ್ಧಾರ: ಹೀಗಿತ್ತು ಟ್ವೀಟಿಗರ ಪ್ರತಿಕ್ರಿಯೆ

ಟಿಆರ್ ಪಿ ಹಗರಣ ಬಹಿರಂಗಗೊಳ್ಳುತ್ತಲೇ ಜಾಹಿರಾತುಗಳನ್ನು ನೀಡುವ ಕಂಪನಿಗಳು ಒಂದಷ್ಟು ಬದಲಾವಣೆಗೆ ಮುಂದಾಗಿವೆ. 

published on : 12th October 2020

ಟಿಆರ್ ಪಿ ಹಗರಣ: ಬಿಎಆರ್ ಸಿ ಬಳಿ ವರದಿ ಕೇಳಿದ ಪ್ರಸಾರ ಖಾತೆ ಸಚಿವಾಲಯ

ಸುದ್ದಿ ವಾಹಿನಿಗಳ ರ್ಯಾಂಕಿಂಗ್ ನಲ್ಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್(ಟಿಆರ್ ಪಿ)ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ, ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ(ಬಿಎಆರ್ ಸಿ)ಯಿಂದ ವರದಿ ಕೇಳಿದೆ.

published on : 11th October 2020

ನಕಲಿ ಟಿಆರ್‌ಪಿ ಹಗರಣ: ಮುಂಬೈ ಪೊಲೀಸರ ಮುಂದೆ ಹಾಜರಾಗದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಿಪಬ್ಲಿಕ್ ಟಿವಿ

ಸಮನ್ಸ್ ಹೊರತಾಗಿಯೂ ಟಿಆರ್‌‌ಪಿ ದಂಧೆಯೆಸಂಬಂಧಿಸಿದಂತೆ ತನ್ನ ಹೇಳಿಕೆಯನ್ನು ದಾಖಲಿಸಲು ರಿಪಬ್ಲಿಕ್ ಟಿವಿಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಶನಿವಾರ ಮುಂಬೈ ಪೊಲೀಸರ ಮುಂದೆ ಹಾಜರಾಗಿಲ್ಲ ಅಲ್ಲದೆ ಈ ಪ್ರಕರಣದಲ್ಲಿ ಚಾನೆಲ್ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 10th October 2020

ರಾಶಿ ಭವಿಷ್ಯ