ಪ್ರವಾಸಿಗರನ್ನು ಸೆಳೆಯಲು ಅಧ್ಯಾತ್ಮಿಕ ಪ್ರವಾಸೋದ್ಯಮ

ಪ್ರವಾಸೋದ್ಯಮ ಮತ್ತು ಅಧ್ಯಾತ್ಮ ಎರಡನ್ನೂ ಒಗ್ಗೂಡಿಸಿ, ಪ್ರವಾಸಿಗರನ್ನು ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಪ್ರವಾಸೋದ್ಯಮ ಮತ್ತು ಅಧ್ಯಾತ್ಮ ಎರಡನ್ನೂ ಒಗ್ಗೂಡಿಸಿ, ಪ್ರವಾಸಿಗರನ್ನು ಸೆಳೆಯಲು ಸರ್ಕಾರ ಹೊಸ ಯೋಜನೆಯೊಂದನ್ನು ತಯಾರಿಸುತ್ತಿದೆ. ಪ್ರತಿ ವರ್ಷ ಪ್ರವಾಸಿಗರು ಹಿಂಡು ಹಿಂಡಾಗಿ ಹೋಗುವ ಇಟಲಿ ಮತ್ತು ಸೌದಿ ಅರೇಬಿಯಾ ದೇಶಗಳ ಪ್ರವಾಸೋದ್ಯಮದ ಅಂಶಗಳನ್ನು ಅಧ್ಯಯನ ಮಾಡಿ ಯೋಜನೆ ತಯಾರಾಗುತ್ತಿದೆ.  

ಈ 'ಆಧ್ಯಾತ್ಮ ಪ್ರವಾಸೋದ್ಯಮ'ದ ಅಡಿ, ದೇಶದ ವಿವಿಧ ಭಾಗಗಳ ಧರ್ಮ ಕ್ಷೇತ್ರಗಳು ಮತ್ತು ಪಾರಂಪರಿಕ ತಾಣಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಹೊಸ ಯೋಜನೆಗಳನ್ನು ಹಾಕಿಕೊಂಡಿದೆ.

"ವಿಶ್ವದಾದ್ಯಂತ ಅಧ್ಯಾತ್ಮಿಕ ಪ್ರವಾಸೋದ್ಯಮವನ್ನು ನೋಡಿದರೆ ಇದು ಬಹಳ ದೊಡ್ಡ ಮಟ್ಟದಲ್ಲಿದೆ. ಇಟಲಿಯ ರೋಮ್ ಗೆ ಸಹಸ್ರಾರು ಪ್ರವಾಸಿಗಳು ಭೇಟಿ ನೀಡುತ್ತಾರೆ. ಮೆಕ್ಕಾ ಮದೀನದಲ್ಲು ಹಾಗೆಯೇ.. ಈ ರೀತಿಯಲ್ಲೆ ನಾವು ಕೂಡ ನಮ್ಮ ಅಧ್ಯಾತ್ಮದ ಅವಕಾಶಗಳನ್ನು ಬಳಸಿಕೊಳ್ಳಬೇಕು" ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಮಹೇಶ್ ಶರ್ಮ ಇಂದು ತಿಳಿಸಿದ್ದಾರೆ.

"ಗಂಗಾ, ಕೃಷ್ಣಾ, ಈಶಾನ್ಯ ಹಾಗೂ ಕೇರಳ ಇವುಗಳನ್ನು ಒಳಗೊಂಡಂತೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಪ್ರಧಾನ ಮಂತ್ರಿಯವರು ೫೦೦ ಕೋಟಿ ನಿಗದಿಪಡಿಸಿದ್ದಾರೆ. ಇವುಗಳಲ್ಲದೆ ಗಯಾ, ಅಮೃತಸರ, ಮಥುರ ಮತ್ತು ವೇಲಂಕಣ್ಣಿ ಯಲ್ಲಿ ಏಳು ತೀರ್ಥ ಕ್ಷೇತ್ರಗಳ ಅಭಿವೃದ್ಧಿ ಯೋಜನೆ ಕೂಡ ಪ್ರಗತಿಯಲ್ಲಿದೆ" ಎಂದಿದ್ದಾರೆ ಸಚಿವರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com