
ನವದೆಹಲಿ: ಬಿಎಸ್‍ಎನ್‍ಎಲ್ ಮತ್ತು ಎಂಟಿಎನ್ಎಲ್‍ಗಳಿಂದ ಬಂಡವಾಳ ಹಿಂತೆಗೆಯುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಬುಧವಾರ ಲೋಕಸಭೆಗೆ ನೀಡಿರುವ ಲಿಖಿತ ಮಾಹಿತಿಯಲ್ಲಿ ಈ ವಿಷಯ ತಿಳಿಸಿರುವ ದೂರ ಸಂಪರ್ಕ ಸಚಿವ ರವಿಶಂಕರ ಪ್ರಸಾದ್, ಈ ಎರಡೂ ಸಂಸ್ಥೆಗಳ ಪುನರುಜ್ಜೀವನವೇ ಸರ್ಕಾರದ ಆದ್ಯತೆಯಾಗಿದೆ. ಅವುಗಳನ್ನು ಇನ್ನಷ್ಟು ಸ್ಪರ್ಧಾತ್ಮಕವಾಗಿ ರೂಪಿಸಲಾಗುವುದು. ಅದಕ್ಕಾಗಿ ಹಲವಾರು ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಬಿಎಸ್ ಎನ್‍ಎಲ್‍ಗೆ ಈ ಹಣಕಾಸು ವರ್ಷದಲ್ಲಿ ದೂರಸಂಪರ್ಕ ಜಾಲ ವಿಸ್ತರಣೆಗಾಗಿ ರು. 7,795.99 ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಕಂಪನಿಗಳ ಹಿತಕಾಯ್ದುಕೊಳ್ಳುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
Advertisement