ಇಟಾಲಿಯನ್ ಸೂಪರ್‍ಬೈಕ್ ಡಿಎಸ್‍ಕೆ ಬೆನೆಲ್ಲಿ ಟಿಎನ್‍ಟಿ 25 ಬಿಡುಗಡೆ

ನೀವು ಎಂದಾದರೂ ಅತ್ಯಂತ ಶಕ್ತಿಶಾಲಿಯಾದ ಹಾಗೂ ನೋಡಲು ಆಕರ್ಷಕ ಹಾಗೂ ಗುಡುಗುವ ಇಟಾಲಿಯನ್ ಸೂಪರ್‍ಬೈಕ್...
ಡಿಎಸ್‍ಕೆ ಬೆನೆಲ್ಲಿ ಟಿಎನ್‍ಟಿ 25 ಬಿಡುಗಡೆ
ಡಿಎಸ್‍ಕೆ ಬೆನೆಲ್ಲಿ ಟಿಎನ್‍ಟಿ 25 ಬಿಡುಗಡೆ
Updated on

ಬೆಂಗಳೂರು: ನೀವು ಎಂದಾದರೂ ಅತ್ಯಂತ ಶಕ್ತಿಶಾಲಿಯಾದ ಹಾಗೂ ನೋಡಲು ಆಕರ್ಷಕ ಹಾಗೂ ಗುಡುಗುವ ಇಟಾಲಿಯನ್ ಸೂಪರ್‍ಬೈಕ್ ಅನ್ನು ಸ್ವಂತವಾಗಿಸಿಕೊಳ್ಳುವ ಕನಸನ್ನು ಕಂಡಿರುವಿರಾ? ನಿಮ್ಮ ಉತ್ತರ ಹೌದಾದಲ್ಲಿ, ನಿಮ್ಮ ಕನಸು ಈಗ ನಿಜವಾಗಲಿದೆ!

ಸೂಪರ್‍ಬೈಕ್ ತಯಾರಿಕೆಯಲ್ಲಿ ಭಾರತದ ಅತ್ಯಂತ-ಸ್ಥಾಪಿತ ಹಾಗೂ ದ್ವಿಚಕ್ರ ವಾಹನ ಮಾರಾಟ ಕ್ಷೇತ್ರದಲ್ಲಿ ಬಲಿಷ್ಠ ಅಸ್ತಿತ್ವವನ್ನು ಹೊಂದಿರುವ ಡಿಎಸ್‍ಕೆ ಮೋಟೊವ್ಹೀಲ್ಸ್ ಹಾಗೂ ಐತಿಹ್ಯವನ್ನು ಹೊಂದಿರುವಂತಹ ಇಟಾಲಿಯನ್ ಸೂಪರ್‍ಬೈಕಿಂಗ್ ಬ್ರ್ಯಾಂಡ್ ಬೆನೆಲ್ಲಿ, ಭಾರತದಲ್ಲಿ ಈವರೆಗಿನ ಅತ್ಯಂತ ಅನುಕೂಲಕರ ದರವುಳ್ಳ ಆಧುನಿಕ ಬೈಕ್ ಡಿಎಸ್‍ಕೆ ಬೆನೆಲ್ಲಿ ಟಿಎನ್‍ಟಿ 25ನ ಬಿಡುಗಡೆಯನ್ನು ಘೋಷಿಸಿತು. ಇದರ ಜೊತೆಗೆ, ಡಿಎಸ್‍ಕೆ ಬೆನೆಲ್ಲಿ ಟಿಎನ್‍ಟಿ 25 ಬೈಕ್‍ಗಾಗಿ ತನ್ನ ಸರಣಿ ಬೈಕಿಂಗ್ ಪರಿಕರಗಳನ್ನೂ ಸಹ ಬಿಡುಗಡೆ ಮಾಡಿತು.

ಆರಾಮದಾಯಕ ಸವಾರಿ ಹಾಗೂ ಅದ್ಭುತ ನೋಟಗಳಿಂದ ಕೂಡಿರುವ ಡಿಎಸ್‍ಕೆ ಬೆನೆಲ್ಲಿ ಟಿಎನ್‍ಟಿ 25, ಒಂದು ಅತ್ಯುತ್ತಮ ಪ್ಯಾಕೇಜ್ ಆಗಿದ್ದು, ಮೋಟಾರ್ ಬೈಕಿಂಗ್‍ಪ್ರಿಯರಿಗೆ ಈ ಹೊಸ ಬೈಕ್ ಖರೀದಸದೇ ಇರಲು ಸಾಧ್ಯವೇ ಆಗದಿರುವಂತಹ ವಾಹನವಾಗಿದೆ. ಕ್ರೀಡಾ ನೋಟ ಹಾಗೂ ವೈಶಿಷ್ಟ್ಯತೆಗಳು ಟಿಎನ್‍ಟಿ 25ನ್ನು ಆರಾಮದಾಯಕ ಸವಾರಿಯ ಅನುಭವ ಒದಗಿಸುವಂತಹ, ಸಾಟಿಯಲ್ಲದ ದ್ವಿಚಕ್ರವಾಹನವನ್ನಾಗಿಸುತ್ತದೆ.

ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಡಿಎಸ್‍ಕೆ ಮೊಟೊವ್ಹೀಲ್ಸ್‍ನ ಅಧ್ಯಕ್ಷ ಶಿರಿಶ್ ಕುಲ್ಕರ್ಣಿ ಅವರು, “ಡಿಎಸ್‍ಕೆ ಬೆನೆಲ್ಲಿ, ಭಾರತದಲ್ಲಿ ಸೂಪರ್‍ಬೈಕಿಂಗ್ ಸಂಸ್ಕøತಿಯ ಬೆಳವಣಿಗೆಯನ್ನು ಸೃಷ್ಟಿಸಲು ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಅತ್ಯಂತ ಅನುಕೂಲಕರ ದರಗಳಲ್ಲಿ, ಸವಾರಿಯ ಅನುಭವದಲ್ಲಿ ಯಾವುದೇ ರಾಜಿಯಿಲ್ಲದಿರುವಂತಹ, ಆಕರ್ಷಕ ಹಾಗೂ ವಿಶೇಷತೆಗಳುಳ್ಳ ಸೂಪರ್ ಬೈಕನ್ನು ಪರಿಚಯಿಸುತ್ತಿದ್ದೇವೆ. ಭಾರತದಲ್ಲಿ ನಮ್ಮ ಉತ್ಪನ್ನಗಳಿಗೆ ದೊರೆತಂತಹ ಅದ್ಭುತ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ, ಡಿಎಸ್‍ಕೆ ಬೆನೆಲ್ಲಿಯ ಈ ಕೊಡುಗೆಯನ್ನೂ ಸಹ ದೇಶದ ಯುವಜನರು ಹಾಗೂ ಬೈಕಿಂಗ್ ಪ್ರಿಯರು ಅತ್ಯಂತ ಉತ್ಸಾಹಿತರಾಗಿ ಪ್ರೋತ್ಸಾಹಿಸುತ್ತಾರೆಂದು ನಂಬಿದ್ದೇವೆ,”ಎಂದರು.

ಈ ಹಿಂದೆ ಉನ್ನತ ದರ್ಜೆಯ ಬೆನೆಲ್ಲಿ ಸೂಪರ್‍ಬೈಕ್‍ಗಳ ಅನುಭವವನ್ನು ಆನಂದಿಸಿರುವ ಆಕಾಂಕ್ಷಿಗಳಿಗೆ, ಅತ್ಯುತ್ತಮ ಮೌಲ್ಯದಲ್ಲಿ, 250 ಸಿಸಿ ಶಕ್ತಿಯುಳ್ಳ ಹಗುರವಾದ ಕ್ರೀಡಾ ಮೋಟಾರ್‍ಸೈಕಲನ್ನು ಕೊಡುಗೆಯಾಗಿ ನೀಡುವ ಮೂಲಕ, ಟಿಎನ್‍ಟಿ 25 ಗೌರವವನ್ನು ಸಲ್ಲಿಸುತ್ತಿದೆ. ಇದು ಅತ್ಯುತ್ತಮ ಇಂಧನ ಕ್ಷಮತೆಯ ಜೊತೆಗೆ, ಉತ್ಕøಷ್ಟ ಹಾಗೂ ಆರಾಮದಾಯಕ ಸವಾರಿಯನ್ನು ಖಾತ್ರಿಪಡಿಸುತ್ತದೆ.

ಟಿಎನ್‍ಟಿ 25ಗೆ ಮತ್ತಷ್ಟು ಶಕ್ತಿ ಒದಗಿಸಲು ಸಿಂಗಲ್ ಸಿಲಿಂಡರ್, 9800 ಆರ್‍ಪಿಎಂ ಹಾಗೂ 8000 ಆರ್‍ಪಿಎಂನಲ್ಲಿ 21.61 ಎನ್‍ಎಂ ಟಾರ್ಕ್ ಶಕ್ತಿ ಒದಗಿಸುವ 4-ಸ್ಟ್ರೋಕ್ ಡಿಒಹೆಚ್‍ಸಿ ಎಂಜಿನ್‍ಗಳನ್ನು ಅಳವಡಿಸಲಾಗಿದೆ. ಈ ಶಕ್ತಿಯನ್ನು 6-ಸ್ಪೀಡ್ ಗೇರ್‍ಬಾಕ್ಸ್ ಮೂಲಕ ಹಿಂಬದಿಯ ಚಕ್ರಕ್ಕೆ ರವಾನಿಸಲ್ಪಡುತ್ತದೆ.

ಈ ಬೈಕ್‍ನ ಚಾಸ್ಸಿಸ್ ಹೆಚ್ಚು ಬಲಿಷ್ಠವಾಗಿದ್ದು, ಇದರ ಸಸ್ಪೆನ್ಷನ್ ಅನ್ನು ಮುಂಬದಿಯಲ್ಲಿರುವ ಚಕ್ರಗಳಿಗೆ ಉಲ್ಟಾ ಫೋರ್ಕ್‍ಗಳೊಂದಿಗೆ ವಿಶೇಷವಾಗಿ ವಿನ್ಯಾಸಪಡಿಸಲಾಗಿದೆ. ಹಿಂಬದಿಯ ಚಕ್ರಗಳಿಗೆ ಮಧ್ಯಭಾಗದಲ್ಲಿ ಷಾಕ್ ಅಬ್ಸಾರ್ಬರ್‍ಗಳಿದ್ದು, ಅತ್ಯಂತ ಆರಾಮದಾಯಕವಾದ ಸವಾರಿಯನ್ನು ಒದಗಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com