ಅಮೆರಿಕದಲ್ಲೂ ತೋಳ ಬಂತು ತೋಳ

ಕರ್ನಾಟಕದ ಮಧುಗಿರಿ ಮತ್ತು ಪಾವಗಡದ ಬೆಟ್ಟಗಳ ನಡುವೆ ಕುರಿ ಕಾಯುವವ 'ತೋಳ ಬಂತು ತೋಳ...'
ತೋಳ ಬಂತು ತೋಳ
ತೋಳ ಬಂತು ತೋಳ

ಕರ್ನಾಟಕದ ಮಧುಗಿರಿ ಮತ್ತು ಪಾವಗಡದ ಬೆಟ್ಟಗಳ ನಡುವೆ ಕುರಿ ಕಾಯುವವ 'ತೋಳ ಬಂತು ತೋಳ...' ಎಂದರೆ ಮುಗಿಯಿತು ಕಥೆ. ಜನ ದಿಕ್ಕಾಪಾಲಾಗಿ ಓಡೋದು ಗ್ಯಾರೆಂಟಿ.

ಇತ್ತ ಅಮೆರಿಕದ ಮಿಷಿಗನ್ ಭಾಗದಿಂದ ನ್ಯೂ ಮೆಕ್ಸಿಕೋ ಮತ್ತು ಅರಿಝೋನಾ ರಾಜ್ಯಗಳವರೆಗೂ 'ತೋಳಗಕರ್ನಾಟಕದ ಮಧುಗಿರಿ ಮತ್ತು ಪಾವಗಡದ ಬೆಟ್ಟಗಳ ನಡುವೆ ಕುರಿ ಕಾಯುವವ 'ತೋಳ ಬಂತು ತೋಳ...' ಎಂದರೆ ಮುಗಿಯಿತು ಕಥೆ. ಜನ ದಿಕ್ಕಾಪಾಲಾಗಿ ಓಡೋದು ಗ್ಯಾರೆಂಟಿ. ಇತ್ತ ಅಮೆರಿಕದ ಮಿಷಿಗನ್ ಭಾಗದಿಂದ ನ್ಯೂ ಮೆಕ್ಸಿಕೋ ಮತ್ತು ಅರಿಝೋನಾ ರಾಜ್ಯಗಳವರೆಗೂ 'ತೋಳಗಳ ಕಥೆ' ನಮ್ಮೂರಿಗಿಂತ ಭಿನ್ನವಾಗೇನೂ ಇಲ್ಲ.

ಇತ್ತೀಚೆಗೆ ಆನ್‌ಲೈನ್ ಪೇಪರ್ ಓದುವಾಗ ಸುದ್ದಿಯೊಂದು ಗಮನ ಸೆಳೆಯಿತು. ಕರ್ನಾಟಕದ ಖ್ಯಾತ, ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ-ಸೇನಾನಿ ತೋಳಗಳ ಬಗ್ಗೆ 'ವಾಕಿಂಗ್ ವಿತ್ ವೂಲ್ವ್ಸ್,' ಎಂಬ ಹೊಸ ಸಾಕ್ಷ್ಯ ಚಿತ್ರವೊಂದನ್ನು ಹೊರತಂದಿದ್ದರ ಸುದ್ದಿ ಅದಾಗಿತ್ತು. ಓದುತ್ತಿದ್ದಂತೆ ತೋಳಗಳನ್ನೂ ನರಭಕ್ಷಕ ಪ್ರಾಣಿ ಎಂದು ಪರಿಗಣಿಸಿ ಅವುಗಳ ಮಾರಣ ಹೋಮ ನಡೆಸಿದ ಪಾಶ್ಚಿಮಾತ್ಯರ ಬಗ್ಗೆ ಚಿಂತಿಸಿದೆ.

ತೋಳಗಳ ಬಗ್ಗೆ ಅದೇನೋ ಅಪನಂಬಿಕೆ ಪಾಶ್ಚಿಮಾತ್ಯ ಜನತೆಗೆ. ತೋಳಗಳು 'ಮ್ಯಾನ್ ಈಟರ್ಸ್‌'. ಅವು ಮಾನ್ಸಟರ್ ರೂಪವನ್ನೂ ತಾಳಬಲ್ಲವು ಎಂದು ಶತಶತಮಾನಗಳಿಂದಲೂ ನಂಬಲಾಗಿದೆ. 18ನೇ ಶತಮಾನದ ಪೂರ್ವಾರ್ಧದಿಂದಲೂ ಅಮೆರಿಕನ್ ಕಥೆಗಾರರು ತೋಳಗಳಿಗೆ ನೆಗೆಟಿವ್ ಪಾತ್ರ ನೀಡಿ ಅವುಗಳ ಅವನತಿಗೆ ಕಾರಣರಾದರು.

ತೋಳಗಳೂ ಮಾಂಸಾಹಾರಿಗಳೇ. ಹಾಗಂತೆ ಮನುಷ್ಯರನ್ನೇ ಗುರಿಯಾಗಿಟ್ಟುಕೊಂಡು ಆಕ್ರಮಣ ನಡೆಸಿ ತಿನ್ನುವಷ್ಟು ಕ್ರೂರಿಗಳಲ್ಲ. ಮನುಷ್ಯರಿಗಿರುವಷ್ಟೇ ಭಯ ತೋಳಗಳಿಗೂ ಇವೆ. ಸಾಧಾರಣವಾಗಿ ಅಮೆರಿಕದಲ್ಲಿ ಇವು ಮನುಷ್ಯರು ವಾಸಿಸುವ ಪ್ರದೇಶಗಳಿಂದ ಬಹುದೂರ ದಟ್ಟಕಾನನದಲ್ಲಿ, ಮಂಜಿನ ಗಡ್ಡೆಗಳ ನಡುವೆ ಬದುಕುತ್ತವೆ. ಸಾರಂಗ, ಜಿಂಕಿ,ೆ ಮೊಲ ಮೊದಲಾದ ಸಣ್ಣ ಹಾಗೂ ಸೂಕ್ಷ್ಮ ಪ್ರಾಣಿಗಳೇ ಇವುಗಳಿಗೆ ಆಹಾರ.

ನಿಯತ್ತು, ವಿಧೇಯತೆ ನಮಗೂ ಇದೆ...

ಬಹುತೇಕರ ಮನೆ ಮುಂದೆ ಅಥವಾ ಮನೆಯೊಳಗಿನ ಸೋಫಾ ಮೇಲೆ ಮಲಗಿ ಯಜಮಾನನನ್ನು ನೋಡಿ ಬಾಲ ಅಲ್ಲಾಡಿಸೋ ಜರ್ಮನ್ ಷಪರ್ಡ್ ನಾಯಿಗೂ, ತೋಳಕ್ಕೂ ನಡುವೆ ಮಹತ್ತರ ವ್ಯತ್ಯಾಸಗಳಿಲ್ಲ. ತೋಳಗಳು ಸಹ ನಾಯಿಗಳ ಥಳಿಗಳ ಪಟ್ಟಿಯಲ್ಲಿ ಬರುವ ಪ್ರಾಣಿ.

ಗುಂಪಿನಲ್ಲಿ ವಾಸಿಸುತ್ತವೆ. ಗುಂಪು ಚದುರಿದಾಗ ಪರಸ್ಪರ ಸಂಪರ್ಕಿಸಲು ಊಳಿಡುವುದನ್ನು ರೂಢಿಸಿಕೊಂಡಿರುತ್ತವೆ. ಮನುಷ್ಯರು ಹೆಂಡತಿಯನ್ನೋ ಗಂಡನನ್ನೋ ಬಿಟ್ಟು ಮತ್ತೊಬ್ಬರನ್ನು ಕಟ್ಟಿಕೊಳ್ಳಬಹುದು. ಆದರೆ ತೋಳಗಳು ಹಾಗಲ್ಲ. ವಯಸ್ಸಿಗೆ ಬಂದ ನಂತರ ಒಂದು ಗಂಡು ತೋಳ, ಒಂದು ಹೆಣ್ಣು ತೋಳದೊಂದಿಗೆ ಕೂಡಿದರೆ ಅವು ಗಂಡಹೆಂಡಿರಂತೆ ಸಾಯುವವರೆಗೂ ಜೋಡಿಯಾಗುತ್ತವೆ.

ಹೆಣ್ಣು ತೋಳದ ರಕ್ಷಣೆಯನ್ನೂ ಅದರ ಜೊತೆಗಾರ ಗಂಡು ತೋಳವೇ ವಹಿಸಿಕೊಂಡಿರುತ್ತದೆ! ಆದರೆ ಅಮೆರಿಕನ್ನರಿಗೆ ತೋಳ ಅಂದರೆ ದುಃಸ್ವಪ್ನ. ಇಂದಿಗೂ ಜರ್ಮನ್ ಷಫರ್ಡ್ ನಾಯಿಯನ್ನು ಸಾಕಿಕೊಂಡವನನ್ನು ಕ್ರೂರವ್ಯಕ್ತಿ ಎಂದೋ ಅಥವಾ ಮನುಷ್ಯರ ನಡುವೆ ವನ್ಯ ಜೀವಿಯೊಂದನ್ನು ಸಾಕಿಕೊಂಡಿರುವ ವಿಚಿತ್ರ ವ್ಯಕ್ತಿ ಎಂದೇ ನೋಡಲಾಗುತ್ತದೆ. ಅಪಾರ್ಟ್‌ಮೆಂಟ್‌ಗಳ ಕಮ್ಯೂನಿಟಿಯಲ್ಲಿ ಬಾಡಿಗೆಮನೆ ಪಡೆದವರು ಜರ್ಮನ್ ಷಪರ್ಡ್ ನಾಯಿ ಸಾಕಿಕೊಂಡಲ್ಲಿ ನೋಟಿಸ್ ನೀಡಿ ಮನೆ ಖಾಲಿ ಮಾಡಿ, ಇಲ್ಲವನೇ ನಾಯಿಯನ್ನು ಹೊರಹಾಕಿ ಎನ್ನುತ್ತಾರೆ!

ಸಿನಿಮಾ ಮಾಡಿದ ಅಧ್ವಾನ

ಕಳೆದ ವರ್ಷ ತೆರೆ ಕಂಡ 'ವ್ಯಾನ್ ಹೆಲ್ಸಿಂಗ್‌' ಚಿತ್ರ ಜಗತ್ತಿನಾದ್ಯಾಂತ ಹೆಸರು ಮಾಡಿತು. ಮನುಷ್ಯನೊಬ್ಬ ತೋಳವಾಗಿ ಜನರನ್ನು ಹಿಂಸಿಸುವುದೇ ಈ ಸಿನಿಮಾ ಕಥೆ. ಇದೊಂದೇ ಅಲ್ಲ. ಇದುವರೆಗೂ ತೋಳಗಳನ್ನು ಲಯನ್‌ಗಳನ್ನಾಗಿ ತೋರಿಸಿ ಭಾರಿ ಯಶಸ್ಸು ಕಂಡ ನೂರಾರು ಸಿನಿಮಾಗಳು ಹಾಲಿವುಡ್‌ನಲ್ಲಿ ತಯಾರಾಗಿವೆ. ಮೂನ್ ಆಫ್ ದಿ ವೂಲ್ಫ್, ವೂಲ್ಫ್ ಬ್ಲಡ್, ವ್ಯಾನ್ ಹೆಲ್ಸಿಂಗ್, ವೂಲ್ಫ್ ಚಿಲ್ಡ್ರನ್, ವೇರ್ ವೂಲ್ಫ್, ವೂಲ್ಫ್ ಮ್ಯಾನ್, ವೂಲ್ಫ್ ಉಮನ್ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. 1925ರಲ್ಲಿ ಮೊದಲು ತೆರೆ ಕಂಡ 'ವೂಲ್ಫ್ ಬ್ಲಡ್‌' ಸಿನಿಮಾ ತೋಳಗಳ ಬಗ್ಗೆ ನೆಗೆಟಿವ್ ಶೇಡ್ ಹೊಂದಿತ್ತು. ಇಲ್ಲಿಂದ ಶುರುವಾದ ತೋಳದ ಬಗೆಗಿನ ಕಾಲ್ಪನಿಕ ಕಥೆಗಳ ಸಿನಿಮಾಗಳು, ಇಂದಿಗೂ ನಿರ್ಮಾಣವಾಗುತ್ತಲೇ ಇವೆ.

ಇತ್ತ ತೋಳಗಳ ಕಥೆಗಳಿಗೆ ರೆಕ್ಕೆಪುಕ್ಕ ಬಂದು ಅದು ಸತ್ಯ ಎಂದು ನಂಬಿದರು ಸಾಮಾನ್ಯ ಜನ. ಕಂಟ್ರಿಗಳಲ್ಲಿ (ಅರಣ್ಯದಲ್ಲಿನ ಪುಟ್ಟಪುಟ್ಟ ಗ್ರಾಮಗಳು) ವಾಸಿಸುತ್ತಿದ್ದ ಜನ ಪೊದೆಗಳ ನಡುವೆ ತೋಳ ಕಂಡರೆ ಸಾಕು, ಅವುಗಳನ್ನು ಶೂಟ್ ಮಾಡಲಾರಂಭಿಸಿದರು.

ಈ ಅತಿರೇಕ ಎಲ್ಲಿವರೆಗೂ ಮುಟ್ಟಿತು ಎಂದರೆ ನಮ್ಮ ಭಾರತದ ಕೆಲ ಅರಸರು ಹುಲಿಸಿಂಹಗಳ ಬೆಲೆ ಗೊತ್ತಿಲ್ಲದೇ ಅವನ್ನು ಕೊಂದು ಮುಂದೆ ನಿಂತು ಪೋಸ್ ಕೊಟ್ಟು ಫೋಟೋ ತೆಗೆಸಿಕೊಂಡಂತೆ, ಅಮೆರಿಕದಲ್ಲಿ ತೋಳ ಹೊಡೆದು ಮುಂದೆ ನಿಂತು ಫೋಟೋ ತೆಗೆಸಿಕೊಳ್ಳುವ ಹುಚ್ಚು ಶುರುವಾಯ್ತು. ಚರ್ಮಕ್ಕಾಗಿ ಅವನ್ನು ಕೊಂದರು. ತೋಳಗಳ ತಲೆಯನ್ನು ಟೋಪಿಯಂತೆ ಧರಿಸಿಕೊಳ್ಳುವ ಫ್ಯಾಷನ್ ಸಹ ಚಾಲ್ತಿಯಲ್ಲಿತ್ತು.

ಪರಿಣಾಮ 1980ರ ಹೊತ್ತಿಗೆ ತೋಳಗಳೆಂದರೆ ಏನು...ಎಂದು ಕೇಳುವ ಮಟ್ಟಕ್ಕೆ ಇವುಗಳ ಸಂತತಿ ಕ್ಷೀಣಿಸಿತು. ಎಚ್ಚೆತ್ತುಕೊಂಡ ಸರ್ಕಾರ ತೋಳಗಳ ಬಗೆಗಿನ ಅಪಪ್ರಚಾರಕ್ಕೆ ಕಡಿವಾಣ ಹಾಕಿತು. ತೋಳಗಳ ಸಂತತಿ ಉಳಿಸುವ ಸಲುವಾಗಿ ಇತರೆಡೆಗಳಿಂದ ತೋಳಗಳನ್ನು ತಂದು ಕೆಲವು ರಕ್ಷಿತ ಪ್ರದೇಶಗಳಲ್ಲಿ ಬಿಡಲಾಯ್ತು. ಆ ಮೂಲಕ ಅವುಗಳ ಸಂತತಿ ಬೆಳೆಸಲು ಅವಕಾಶ ಕಲ್ಪಿಸಲಾಯ್ತು. ಆದರೂ ಅಮೆರಿಕದ ಕೆಲ ರಾಜ್ಯಗಳಲ್ಲಿ ಬೇಟೆಗೆ ಅವಕಾಶ ಇರುವ ಹಿನ್ನೆಲೆಯಲ್ಲಿ ಇವುಗಳನ್ನು ಮೋಜಿಗಾಗಿ ಕೊಲ್ಲಲಾಗುತ್ತಿದೆ. ಇನ್ನು ಕೆಲವೆಡೆಗಳಲ್ಲಿ ಸ್ನೋಕಾರ್ಟ್‌ಗಳನ್ನು ಎಳೆಯುವ ಸಲುವಾಗಿಯೇ ಇವುಗಳನ್ನು ಸಾಕಿಕೊಳ್ಳಲಾಗುತ್ತಿದೆ.

ಅನಿಲ್ ಭಾರದ್ವಾಜ್
ಫೀನಿಕ್ಸ್, ಯುಎಸ್‌ಎ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com