ಮಾರುತಿ, ಮಹೀಂದ್ರಾ, ಟಾಟಾ ಸಂಸ್ಥೆಗಳಿಂದ ಜಂಟಿ ಕಾರು ಉತ್ಪಾದನೆ

ದೇಶದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಾದ ಮಾರುತಿ, ಮಹೀಂದ್ರಾ, ಟಾಟಾ ಸಂಸ್ಥೆಗಳು ಜಂಟಿಯಾಗಿ ವಿಭಿನ್ನ ಕಾರು ಉತ್ಪಾದನೆಗೆ ಮುಂದಾಗಿದ್ದು, ಸಂಪೂರ್ಣ ದೇಶಿಯ ನಿರ್ಮಿತ ಎಲೆಕ್ಟ್ರಿಕ್ ಹೈಬ್ರಿಡ್ ಕಾರು ತಯಾರಿಸಲು ನಿರ್ಧರಿಸಿವೆ...
ಮಾರುತಿ, ಮಹೀಂದ್ರಾ, ಟಾಟಾ ಸಂಸ್ಥೆಗಳಿಂದ ಜಂಟಿ ಕಾರು ಉತ್ಪಾದನೆ (ಸಾಂದರ್ಭಿಕ ಚಿತ್ರ)
ಮಾರುತಿ, ಮಹೀಂದ್ರಾ, ಟಾಟಾ ಸಂಸ್ಥೆಗಳಿಂದ ಜಂಟಿ ಕಾರು ಉತ್ಪಾದನೆ (ಸಾಂದರ್ಭಿಕ ಚಿತ್ರ)

ಮುಂಬೈ: ದೇಶದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಾದ ಮಾರುತಿ, ಮಹೀಂದ್ರಾ, ಟಾಟಾ ಸಂಸ್ಥೆಗಳು ಜಂಟಿಯಾಗಿ ವಿಭಿನ್ನ ಕಾರು ಉತ್ಪಾದನೆಗೆ ಮುಂದಾಗಿದ್ದು, ಸಂಪೂರ್ಣ ದೇಶಿಯ  ನಿರ್ಮಿತ ಎಲೆಕ್ಟ್ರಿಕ್ ಹೈಬ್ರಿಡ್ ಕಾರು ತಯಾರಿಸಲು ನಿರ್ಧರಿಸಿವೆ.

ಈ ಬಗ್ಗೆ ಈ ಮೂರು ಕಂಪನಿಗಳು ಪರಸ್ಪರ ಒಪ್ಪಂದ ಮಾಡಿಕೊಂಡಿದ್ದು, ಶೀಘ್ರದಲ್ಲೇ ಭಾರತದ ರಸ್ತೆಗಳಲ್ಲಿ ದೇಶೀಯ ವಿದ್ಯುತ್ ಕಾರುಗಳು ಸಂಚರಿಸಲಿವೆ.  ಕಾರು ತಯಾರಿಕಾ ಕಂಪನಿಗಳ  ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ತಂಡವು ಈಗಾಗಲೇ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದು, ಮೋಟಾರು ಇಂಜಿನ್ ಮತ್ತು ಇನ್ನಿತರ ಅಗತ್ಯ ಯಂತ್ರೋಪಕರಣಗಳ ಅಭಿವೃದ್ಧಿ  ಕುರಿತಂತೆ ಸಂಶೋಧನೆಯಲ್ಲಿ ನಿರತವಾಗಿವೆ.

ಕಳೆದ ವರ್ಷ ಘೋಷಿಸಲಾಗಿದ್ದ ಘಮ್ ಹೆಸರಿನ ಹೈಬ್ರಿಡ್ ಎಲೆಕ್ಟ್ರಿಕ್ ಕಾರು ತಯಾರಿಕಾ ಯೋಜನೆಗೆ ಈ ಮೂರು ಕಂಪನಿಗಳ ಒಕ್ಕೂಟ ಈಗಾಗಲೇ 25 ಕೋಟಿ ರು.ಮೊತ್ತವನ್ನು  ಸಂಶೋಧನೆಗಾಗಿ ಹೂಡಿಕೆ ಮಾಡಿವೆ ಎಂದು ತಿಳಿದುಬಂದಿದೆ. ಮತ್ತೊಂದು ಪ್ರಮುಖ ವಿಚಾರವೆಂದರೆ ಈ ಎಲೆಕ್ಟ್ರಿಕ್ ಹೈ ಬ್ರೀಡ್ ಕಾರು ಉತ್ಪಾದನೆಗೆ ಸರ್ಕಾರದ ಪಾಲ್ಗೊಳ್ಳುವಿಕೆ ಕೂಡ ಇದ್ದು,  ಈ ಬಹು ನಿರೀಕ್ಷಿತ ಯೋಜನೆಯಲ್ಲಿ ಸರ್ಕಾರವೂ ಇಷ್ಟೇ ಪ್ರಮಾಣದ ಮೊತ್ತವನ್ನು ಹೂಡಲಿದೆ ಎದು ತಿಳಿದುಬಂದಿದೆ.

ಈ ಮೂರೂ ಕಂಪನಿಗಳು ತಯಾರಿಸುವ ಸಾಫ್ಟ್ ವೇರ್ ಪರಸ್ಪರ ಭಿನ್ನವಾಗಿದ್ದರೂ, ಅವುಗಳು ಬಳಸುವ ಇಂಜಿನ್ ಮತ್ತು ಟ್ರಾನ್ಸ್ ಮಿಶನ್ ವ್ಯವಸ್ಥೆ ಒಂದೇ ಆಗಿರಲಿದೆ ಎಂದು ಮಹೀಂದ್ರಾ  ರೇವಾದ ಮುಖ್ಯ ಕಾರ್ಯನಿರ್ವಾಹಕ ಅರವಿಂದ್ ಮಾಥ್ಯೂ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com