ಟಾಟಾ ಮೋಟಾರ್ಸ್ ನ ಜಾಗ್ವಾರ್ ದಾಖಲೆ ಮಾರಾಟ

2015ರಲ್ಲಿ ಟಾಟಾ ಮೋಟಾರ್ಸ್ ಕಂಪನಿ ಮಾಲೀಕತ್ವದ ಜಾಗ್ವಾರ್ ಲ್ಯಾಂಡ್ ರೋವರ್(ಜೆಎಲ್‍ಆರ್) ಕಳೆದ ವರ್ಷ ದಾಖಲೆ ಮಾರಾಟ ಕಂಡಿದೆ...
ಜಾಗ್ವಾರ್
ಜಾಗ್ವಾರ್

ಲಂಡನ್: 2015ರಲ್ಲಿ ಟಾಟಾ ಮೋಟಾರ್ಸ್ ಕಂಪನಿ ಮಾಲೀಕತ್ವದ ಜಾಗ್ವಾರ್ ಲ್ಯಾಂಡ್ ರೋವರ್(ಜೆಎಲ್‍ಆರ್) ಕಳೆದ ವರ್ಷ ದಾಖಲೆ ಮಾರಾಟ ಕಂಡಿದೆ. ಕಂಪನಿಯ 4,87,065 ಪ್ರೀಮಿಯಂ ಲಕ್ಸುರಿ ವಾಹನಗಳು ಮಾರಾಟವಾಗಿವೆ. ಇದು ಇದುವರೆಗಿನ ಅತ್ಯಧಿಕ ಮಾರಾಟವಾಗಿದೆ.

ಬ್ರಿಟನ್ ನಲ್ಲಿ ಕಳೆದ ವರ್ಷದಲ್ಲಿ ಸುಮಾರು 1 ಲಕ್ಷ ಜಾಗ್ವರ್ ಕಾರುಗಳು ಮಾರಾಟವಾಗಿದ್ದು, ಬ್ರಿಟನ್ ಲ್ಲಿ ಅತಿ ಹೆಚ್ಚು ಮಾರಾಟವಾದ ಕಾರಾಗಿದೆ. ಈ ಮೂಲಕ ಶೇ. 30 ರಷ್ಟು ಮಾರಾಟ ಹೆಚ್ಚಳವಾಗಿದೆ. ಈ ಬಾರಿ ಚೀನಾದಲ್ಲಿ ಜಾಗ್ವರ್ ಕಾರಿನ ಮಾರಾಟದಲ್ಲಿ ಕೊಂಚ ಕಡಿಮೆಯಾಗಿದೆ. 92,474 ಕಾರುಗಳು ಮಾರಾಟವಾಗಿದೆ.

2015ರಲ್ಲಿ ಯೂರೋಪ್ ಜಾಗ್ವರ್ ಕಂಪನಿಯ ದೊಡ್ಡ ಮಾರಾಟ ಪ್ರದೇಶವಾಗಿದೆ. 1,10.298 ಕಾರುಗಳು ಮಾರಾಟವಾಗಿದೆ. ಈ ಮೂಲಕ 2014ರ ಮಾರಾಟಕ್ಕಿಂತ ಶೇ.7 ರಷ್ಟು ಹೆಚ್ಚಳವಾಗಿದೆ. 2014ರಲ್ಲಿ 100,636 ಜಾಗ್ವರ್ ಕಾರುಗಳು ಮಾರಾಟವಾಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com