ಇನೋವಾ ಕ್ರಿಸ್ಟಾ ಪೆಟ್ರೋಲ್ ಇಂಜಿನ್ ಆವೃತ್ತಿ ಬಿಡುಗಡೆಗೆ ಟೊಯೋಟೊ ಸಜ್ಜು

ದೆಹಲಿಯಲ್ಲಿ ಡೀಸೆಲ್ ವಾಹನಗಳಿಗೆ ನಿಷೇಧ ವಿಧಿಸಲಾಗಿರುವುದರಿಂದ ಟೊಯೋಟೊ ಕಂಪನಿ ಪೆಟ್ರೋಲ್ ಆವೃತ್ತಿಯಲ್ಲಿ ` ಇನೋವಾ ಕ್ರಿಸ್ಟಾ' ಕಾರನ್ನು ಪರಿಚಯ ಮಾಡುವುದಾಗಿ ಘೋಷಿಸಿದೆ.
ಇನೋವಾ ಕ್ರಿಸ್ಟಾ
ಇನೋವಾ ಕ್ರಿಸ್ಟಾ

ನವದೆಹಲಿ: ದೆಹಲಿಯಲ್ಲಿ ಡೀಸೆಲ್ ವಾಹನಗಳಿಗೆ ನಿಷೇಧ ವಿಧಿಸಲಾಗಿರುವುದರಿಂದ ಟೊಯೋಟೊ ಕಂಪನಿ ಪೆಟ್ರೋಲ್ ಆವೃತ್ತಿಯಲ್ಲಿ ` ಇನೋವಾ ಕ್ರಿಸ್ಟಾ' ಕಾರನ್ನು ಪರಿಚಯ ಮಾಡುವುದಾಗಿ ಘೋಷಿಸಿದೆ.
ಇತ್ತೀಚೆಗಷ್ಟೇ ಟೊಯೋಟೊ ಸಂಸ್ಥೆ ಎರಡು ಡಿಸೇಲ್ ಇಂಜಿನ್ ಆಯ್ಕೆಗಳನ್ನು ಹೊಂದಿದ್ದ ಇನೋವಾ ಕ್ರಿಸ್ಟಾ ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ ದೆಹಲಿಯಲ್ಲಿ ಸುಪ್ರೀಂ ಕೋರ್ಟ್ ಹೊಸ ಡೀಸೆಲ್ ವಾಹನಗಳಿಗೆ ನಿಷೇಧ ವಿಧಿಸಿರುವುದರಿಂದ ದೆಹಲಿ ಮಾರುಕಟ್ಟೆಯನ್ನು ಪ್ರವೇಶಿಸಲು ಇನೋವಾ ಪೆಟ್ರೋಲ್ ಆವೃತ್ತಿಯ ಕ್ರಿಸ್ಟಾ ಕಾರನ್ನು ಪರಿಚಯಿಸಲಿದೆ.
ಥೈಲ್ಯಾಂಡ್, ಇಂಡೊನೇಷಿಯಾ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ 2 .0  ಲೀಟರ್ ಪೆಟ್ರೋಲ್ ಇಂಜಿನ್ ಕ್ರಿಸ್ಟಾ ಕಾರುಗಳು ಮಾರಾಟವಾಗುತ್ತಿದೆ. ಭಾರತೀಯ ಮಾರುಕಟ್ಟೆಗೆ 2 .7 ಲೀಟರ್ ಪೆಟ್ರೋಲ್ ಇಂಜಿನ್ ಕ್ರಿಸ್ಟಾ ಕಾರನ್ನು ದೀಪಾವಳಿ ವೇಳೆಗೆ ಪರಿಚಯಿಸಲಾಗುವುದು ಎಂದು ಟೊಯೋಟೊ ಸಂಸ್ಥೆ ತಿಳಿಸಿದೆ.
ಪೆಟ್ರೋಲ್ ಇಂಜಿನ್ ಅಭಿವೃದ್ಧಿಗಾಗಿ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗ ಜಪಾನ್ ಇಂಜಿನಿಯರ್ ಗಳೊಂದಿಗೆ ಕೆಲಸ ಮಾಡುತ್ತಿದೆ. ಟೊಯಾಟಾ ಸಂಸ್ಥೆ ಪ್ರಸ್ತುತ 2.4 ಹಾಗೂ 2.8 ಲೀಟರ್ ಡಿಸೇಲ್ ನ ಇನೋವಾ ಕ್ರಿಸ್ಟಾ ಕಾರನ್ನು ಬಿಡುಗಡೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com