2017 ರ ವೇಳೆಗೆ ಗುಜರಾತ್ ನಲ್ಲಿ ಸುಜೂಕಿ ಕಂಪನಿಯ ಕಾರು ಉತ್ಪಾದನಾ ಘಟಕ ಪ್ರಾರಂಭ

ಜಪಾನ್ ನ ಆಟೋಮೊಬೈಲ್ ಉತ್ಪಾದನಾ ಸಂಸ್ಥೆ ಸುಜುಕಿ ಗುಜರಾತ್ ನಲ್ಲಿ ನಿರ್ಮಿಸುತ್ತಿರುವ ಘಟಕ 2017 ರಿಂದ ಕಾರ್ಯಾರಂಭ ಮಾಡಲಿದೆ ಎಂದು ಸುಜೂಕಿ ಮೋಟರ್ ಕಾರ್ಪ್ ಅಧ್ಯಕ್ಷ ಒಸಾಮು ಸುಜುಕಿ ತಿಳಿಸಿದ್ದಾರೆ.
ಸುಜೂಕಿ
ಸುಜೂಕಿ

ಟೋಕಿಯೋ: ಜಪಾನ್ ನ ಆಟೋಮೊಬೈಲ್ ಉತ್ಪಾದನಾ ಸಂಸ್ಥೆ ಸುಜೂಕಿ ಗುಜರಾತ್ ನಲ್ಲಿ ನಿರ್ಮಿಸುತ್ತಿರುವ ಕಾರು ಉತ್ಪಾದನಾ ಘಟಕ 2017 ರಿಂದ ಕಾರ್ಯಾರಂಭ ಮಾಡಲಿದೆ ಎಂದು ಸುಜುಕಿ ಮೋಟರ್ ಕಾರ್ಪ್ ಅಧ್ಯಕ್ಷ ಒಸಾಮು ಸುಜೂಕಿ ತಿಳಿಸಿದ್ದಾರೆ.
ಜಪಾನ್ ಪ್ರವಾಸದಲ್ಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿ ಮಾತನಾಡಿರುವ ಒಸಾಮು ಸುಜುಕಿ, ಭಾರತದ ಗುಜರಾತ್ ನಲ್ಲಿ ಸುಜೂಕಿ ಸಂಸ್ಥೆಯ ಘಟಕವನ್ನು 18 ,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು 2017 ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದಿದ್ದಾರೆ.
ಸುಜೂಕಿ ಸಂಸ್ಥೆ ಭಾರತದ ಅಟೋಮೊಬೈಲ್ ಉತ್ಪಾದಕ ಮಾರುತಿ ಕಂಪನಿಯಲ್ಲಿ ಶೇ.56 ರಷ್ಟು ಷೇರುಗಳನ್ನು ಹೊಂದಿದ್ದರೂ  ಸುಜೂಕಿ ಭಾರತದಲ್ಲಿ ಪ್ರಾರಂಭಿಸುತ್ತಿರುವ ತನ್ನ ಸಂಪೂರ್ಣ ಒಡೆತನದ ಪ್ರಥಮ ಘಟಕ ಇದಾಗಿದೆ. ಗುಜರಾತ್ ನಲ್ಲಿ ಪ್ರಾರಂಭವಾಗುತ್ತಿರುವ ಘಟಕದಿಂದ ಮಾರುತಿ ಸುಜೀಕಿ ಇಂಡಿಯಾಗೆ ವಾಹನಗಳು ಹಾಗೂ ಬಿಡಿಭಾಗಗಳ ಪೂರೈಕೆಯಾಗಲಿದೆ.
ಭಾರತದ ಮಾರುಕಟ್ಟೆಯಲ್ಲಿ ಮಾರುತಿ ಸುಜೂಕಿ ಸಂಸ್ಥೆಯ ವಾಹನಗಳಿಗೆ ಬೇಡಿಕೆ ಹೆಚ್ಚಿದ್ದು 2020 ರ ವೇಳೆ ಜಪಾನ್ ಹಾಗೂ ಜರ್ಮನಿ ಮಾರುಕಟ್ಟೆಗಳಿಗಿಂತಲೂ ಭಾರತದ ಮಾರುಕಟ್ಟೆಯಿಂದ ಹೆಚ್ಚಿನ ಬೆಳವಣಿಗೆಯ ನಿರೀಕ್ಷೆ ಇದೆ. ಪ್ರಸ್ತುತ ಚೀನಾದಲ್ಲಿ ಮಾರುತಿ ಸುಜೂಕಿ ಸಂಸ್ಥೆ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದ್ದು 2020 ರ ವೇಳೆಗೆ ಭಾರತ ಸುಜೂಕಿಗೆ ಹೆಚ್ಚು ಬೇಡಿಕೆ ಇರುವ ವಿಶ್ವದ ಮೂರನೇ ಅತಿ ದೊಡ್ಡ ಮಾರುಕಟ್ಟೆಯಾಗಿರಲಿದೆ. ಇದಕ್ಕೆ ಪೂರಕವಾಗಿ ಗುಜರಾತ್ ನಲ್ಲಿ ಆರಂಭವಾಗಲಿರುವ ಸುಜೂಕಿ ಘಟಕ ವಾರ್ಷಿಕವಾಗಿ 2 ,50 ,000 ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com