ಮೌಂಟ್ ಎವರೆಸ್ಟ್ ನಲ್ಲಿ ಟ್ರಾಫಿಕ್ ಜಾಮ್!

ವಿಶ್ವ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರಲು ಭಾರಿ ಪ್ರಮಾಣದ ಪ್ರವಾಸಿಗರು ಮುಂದಾಗಿರುವ ಹಿನ್ನಲೆಯಲ್ಲಿ ಎವರೆಸ್ಟ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ ಎಂದು ನೇಪಾಳ ಪ್ರವಾಸೋಧ್ಯಮ ಇಲಾಖೆ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಠ್ಮಂಡು: ವಿಶ್ವ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರಲು ಭಾರಿ ಪ್ರಮಾಣದ ಪ್ರವಾಸಿಗರು ಮುಂದಾಗಿರುವ ಹಿನ್ನಲೆಯಲ್ಲಿ ಎವರೆಸ್ಟ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ ಎಂದು ನೇಪಾಳ  ಪ್ರವಾಸೋಧ್ಯಮ ಇಲಾಖೆ ಹೇಳಿದೆ.

ನೇಪಾಳ ಪ್ರವಾಸೋಧ್ಯಮ ಇಲಾಖೆ ಅಧಿಕಾರಿಗಳು ಹೇಳಿಕೊಂಡಿರುವಂತೆ ಈಗಾಗಲೇ ಮೌಂಟ್ ಎವರೆಸ್ಟ್ ಶಿಖರ ಏರಲು ಸುಮಾರು 400 ಪರ್ವತಾರೋಹಿಗಳು ತಮ್ಮ ತಮ್ಮ ಹೆಸರು ನೊಂದಾಯಿಸಿದ್ದು, ಇನ್ನೂ ಹಲವು  ಪರ್ವತಾರೋಹಿಗಳು ಹೆಸರು ನೊಂದಾಯಿಸಲು ಮುಂದಾಗಿದ್ದು, ಈ ಸಂಖ್ಯೆ 500ರ ಗಡಿದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ಮೇ ತಿಂಗಳ ಮಧ್ಯಭಾಗದಿಂದ 8,848 ಮೀ. ಎತ್ತರವಿರುವ ಮೌಂಟ್‌ ಎವರೆಸ್ಟ್‌ ಪರ್ವತಾರೋಹಣ ಆರಂಭವಾಗಲಿದ್ದು, ಪರ್ವತಾರೋಹಿಗಳ ನೆರವಿಗಾಗಿ ತೆರಳಲಿರುವ ಸಹಾಯಕ ಸಿಬ್ಬಂದಿಯೂ ಸಾಕಷ್ಟು ಸಂಖ್ಯೆಯಲ್ಲಿ  ತೆರಳಿದ್ದಾರೆ. ಒಂದು ಅಂಕಿ ಅಂಶದ ಪ್ರಕಾರ ಎವರೆಸ್ಚ್ ಏರುವ ಪರ್ವತಾರೋಹಿಗಳಿಗಿಂತ ಅವರ ನೆರವಿಗಾಗಿ ತೆರಳಲಿರುವ ಸಹಾಯಕ ಸಿಬ್ಬಂದಿಗಳ ಸಂಖ್ಯೆ 1000 ದಾಟುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪರ್ವತ ಏರಲು  ತುಂಬಾ ಸಮಯ ಹಿಡಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎವರೆಸ್ಟ್‌ ಪರ್ವತ ಹತ್ತಿ ಇಳಿಯಲು ಚಾರಣಿಗರು ಸಾಧಾರಣ ಎರಡು ತಿಂಗಳು ತೆಗೆದುಕೊಳ್ಳುತ್ತಾರೆ. ಈ ಬಾರಿ ಟ್ರಾಫಿಕ್ ಜಾಮ್ ಆಗುವುದರಿಂದ ಈ ಅವದಿ  ಹೆಚ್ಚಾಗಬಹುದು ಎಂದೂ ಅಧಿಕಾರಿಗಳು ಶಂಕಿಸಿದ್ದಾರೆ.

ಪರ್ವತಾರೋಹಿಗಳು ತಿಂಗಳ ಮೊದಲೇ ಬೇಸ್‌ ಕ್ಯಾಂಪ್‌ ಗೆ ಬಂದು ಸಿದ್ಧತೆಯಲ್ಲಿ ತೊಡಗಲಿದ್ದು, ಈ ಪೈಕಿ ಈಗಾಗಲೇ 267 ಪರ್ವತಾರೋಹಿಗಳು ನಾಮ್ಚೆ ಮೂಲಕ ಬೇಸ್‌ ಕ್ಯಾಂಪ್‌ ಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನು 290  ಪರ್ವತಾರೋಹಿಗಳು ಬೇಸ್‌ ಕ್ಯಾಂಪ್‌ ತಲುಪಿದ್ದು, 1000 ಕ್ಕೂ ಅಧಿಕ ‘ಗೈಡ್‌’ಗಳು ಪರ್ವತಾರೋಹಿಗಳಿಗೆ ಸಾಥ್‌ ನೀಡಲಿದ್ದಾರೆ.

ವಾತಾವರಣ ಅನುಕೂಲಕರವಾಗಿರುವ ಸಂದರ್ಭದಲ್ಲೇ ಪರ್ವತದ ತುದಿ ತಲುಪಿ ಕೆಳಗಿಳಿಯಬೇಕು ಎಂದು ಪರ್ವತಾರೋಹಿಗಳು ಮುಂದಾಗುತ್ತಾರೆ. ಪರ್ವತಾ ರೋಹಿಗಳಿಗೆ ನೆರವಾಗಲು ಪರ್ವತದಲ್ಲಿ ಯಾವುದೇ ರೀತಿಯ  ಮ್ಯಾನೇಜ್ ಮೆಂಟ್ ಇಲ್ಲ. ಜೊತೆಯಲ್ಲಿ ತೆರಳುವ ಶೆರ್ಪಾ ಗೈಡ್ ಗಳೇ ಪರ್ವತಾ ರೋಹಿಗಳಿಗೆ ಗೈಡ್ ಮಾಡುತ್ತಾರೆ. ಜನ ದಟ್ಟಣೆ ಹೆಚ್ಚಾಗಿ ಪರ್ವತ ಏರುವುದು ವಿಳಂಬವಾದರೆ, ತೆಗೆದುಕೊಂಡು ಹೋಗಿರುವ ಆಮ್ಲಜನಕ  ಖಾಲಿಯಾಗಿ ಆಮ್ಲ ಜನಕ್ಕೆ ಕೊರತೆಯಾಗುತ್ತದೆ. ಆಗ ಪರ್ವತಾರೋಹಿಗಳ ಜೀವಕ್ಕೇ ತೊಂದರೆಯಾಗುವ ಸಂಭವವಿರುತ್ತದೆ ಎಂದು 5 ಬಾರಿ ಪರ್ವತ ಏರಿರುವ ಗೈಡ್ ಸೋನಂ ಶೆರ್ಪಾ ತಿಳಿಸಿದ್ದಾರೆ.

2015 ರಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ 19 ಚಾರಣಿಗರು ಮೃತಪಟ್ಟು, ಇತರ 61 ಮಂದಿ ಗಾಯಗೊಂಡಿದ್ದರು. ಈ ಘಟನೆ ಬಳಿಕ ಪರ್ವತಾರೋಹಣದಲ್ಲಿ ನೇಪಾಳ ಸರ್ಕಾರ ಹಲವು ಬದಲಾವಣೆಗಳನ್ನು ಮಾಡಿದ್ದು, ಪರ್ವತಾ  ರೋಹಿಗಳಿಗೆ ಮೂರು ವರ್ಷ ಮಾತ್ರ ಎವರೆಸ್ಟ್ ಏರಲು ಅವಕಾಶ ನೀಡಿದೆ.

1953 ರಿಂದ ಇದುವರೆಗೆ ಮೌಂಟ್‌ ಎವರೆಸ್ಟ್‌ ಹತ್ತುವ ಪ್ರಯತ್ನದ ವೇಳೆ 280 ಮಂದಿ ಮೃತಪಟ್ಟಿದ್ದು, 2014 ರಲ್ಲಿ ನಡೆದ ಹಿಮ ಕುಸಿತದಲ್ಲಿ 16 ಶೆರ್ಪಾ ಗೈಡ್‌ ಗಳು ಬಲಿಯಾಗಿದ್ದರು. 1953 ರಿಂದ ಇದುವರೆಗೆ 3 ಸಾವಿರಕ್ಕೂ  ಅಧಿಕ ಮಂದಿ ಮೌಂಟ್‌ ಎವರೆಸ್ಟ್‌ ಏರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com