ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇ-ವೀಸಾ ಪಡೆದ ವಿದೇಶಿ ಪ್ರವಾಸಿಗರಿಗೆ ಬಿಎಸ್ ಎನ್ ಎಲ್ ಆಕರ್ಷಕ ಕೊಡುಗೆ!

ಭಾರತದಲ್ಲಿ ಪ್ರವಾಸೋದ್ಯಮ ಉತ್ತೇಜನದ ನಿಟ್ಟಿನಲ್ಲಿ ಇ-ವೀಸಾ ಪಡೆದು ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರಿಗೆ ಬಿಎಸ್ ಎನ್ ಎಲ್ ಮತ್ತು ಕೇಂದ್ರ ಸರ್ಕಾರ ಆಕರ್ಷಕ ಕೊಡುಗೆ ಘೋಷಣೆ ಮಾಡಿದೆ.

ನವದೆಹಲಿ: ಭಾರತದಲ್ಲಿ ಪ್ರವಾಸೋದ್ಯಮ ಉತ್ತೇಜನದ ನಿಟ್ಟಿನಲ್ಲಿ ಇ-ವೀಸಾ ಪಡೆದು ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರಿಗೆ ಬಿಎಸ್ ಎನ್ ಎಲ್ ಮತ್ತು ಕೇಂದ್ರ ಸರ್ಕಾರ ಆಕರ್ಷಕ ಕೊಡುಗೆ ಘೋಷಣೆ ಮಾಡಿದೆ.

ಅದರಂತೆ ಇ-ವೀಸಾ ಮೂಲಕ ದೇಶಕ್ಕೆ ಆಗಮಿಸುವ ಪ್ರತಿಯೊಬ್ಬ ವಿದೇಶಿ ಪ್ರವಾಸಿಗನಿಗೂ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸಂಸ್ಥೆಯಿಂದ ಒಂದು ಉಚಿತ ಸಿಮ್ ಕಾರ್ಡ್ ಅನ್ನು ವಿತರಿಸಲಾಗುತ್ತದೆ. ಸಿಮ್ ಕಾರ್ಡ್  ನೊಂದಿಗೆ 50 ರು.ಮೌಲ್ಯದ ಟಾಕ್ ಟೈಮ್, 50 ಎಂಬಿ ಉಚಿತ ಟಾಕ್ ಅನ್ನು ಒಳಗೊಂಡಿರಲಿದೆ. ಈ ವಿಶೇಷ ಯೋಜನೆಯನ್ನು ಕೇಂದ್ರ ಪ್ರವಾಸೋಧ್ಯಮ ಸಚಿವ ಮಹೇಶ್ ಶರ್ಮಾ ಅವರು ದೆಹಲಿಯಲ್ಲಿ ಚಾಲನೆ ನೀಡಿದರು.

ಆರಂಭಿಕ ಹಂತದಲ್ಲಿ ಈ ಯೋಜನೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರವಾಸಿಗರಿಗೆ ಲಭ್ಯವಿರಲಿದ್ದು, ಮುಂದಿನ ದಿನಗಳಲ್ಲಿ ದೇಶದ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ  ವಿಸ್ತರಿಸಲಾಗುತ್ತದೆ. ಈ ನೂತನ ಯೋಜನೆ ಅನ್ವಯ ಈ ಬಿಎಸ್ ಎನ್ ಎಲ್ ಸಿಮ್ ಕಾರ್ಡ್ 30 ದಿನಗಳ ಕಾಲಾವಕಾಶ ಹೊಂದಿರಲಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ 24 ಗಂಟೆಗಳ ಪ್ರವಾಸಿಗರ ಸಹಾಯವಾಣಿ ಸಂಖ್ಯೆಯನ್ನೂ  ಕೂಡ ಸಿಮ್ ಕಾರ್ಡ್ ಒಳಗೊಂಡಿರುತ್ತದೆ. ಸಹಾಯವಾಣಿ ಒಟ್ಟು 12 ಭಾಷೆಗಳಲ್ಲಿ ಲಭ್ಯವಿರಲಿದ್ದು, ರಷ್ಯನ್, ಜಪಾನೀಸ್, ಜರ್ಮನ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಹಾಯವಾಣಿ ಕಾರ್ಯಾಚರಿಸುತ್ತದೆ.

ಭಾರತಕ್ಕೆ ಆಗಮಿಸುವ ಪ್ರವಾಸಿಗರಿಗೆ ವೆಲ್ ಕಮ್ ಕಿಟ್ ನಂತೆ ಸಿಮ್ ಕಾರ್ಡ್ ಅನ್ನು ನೀಡಲಾಗುತ್ತದೆ ಎಂದು ಪ್ರವಾಸೋಧ್ಯಮ ಅಭಿವೃದ್ಧಿ ಇಲಾಖೆ ಹೇಳಿದೆ. ಇ-ವೀಸಾ ಮೂಲಕ ಭಾರತಕ್ಕೆ ಆಗಮಿಸುವ ಪ್ರವಾಸಿಗರ ಎಲ್ಲ ವಿವರ  ಇ-ಮೇಲ್ ಮೂಲಕ ಲಭ್ಯವಿರುತ್ತದೆ. ಇ-ವೀಸಾ ಪಡೆಯುವಾಗಲೇ ಅವರ ಗುರುತಿನ ಚೀಟಿ ಇತ್ಯಾದಿ ಅಂಶಗಳನ್ನು ಸಂಗ್ರಹಿಸಲಾಗಿರುತ್ತದೆ. ಹೀಗಾಗಿ ಸಿಮ್ ಕಾರ್ಡ್ ನೀಡುವಾಗ ಇ-ವೀಸಾ ವಿವರ ನೀಡಿದರೆ ಸಾಕು..ಅದರ ಜೆರಾಕ್ಸ್  ಪ್ರತಿಯಲ್ಲೇ ಪ್ರವಾಸಿಗರು ಪ್ರವಾಸ ಮಾಡಬಹುದು. ಆದರೆ ವಿಮಾನ ನಿಲ್ದಾಣದಲ್ಲಿ ಇ-ವೀಸಾಗೆ ಸಂಬಂಧ ಪಟ್ಟ ಅಧಿಕಾರಿಗಳು ಮುದ್ರಹಾಕುವುದು ಕಡ್ಡಾಯ. ಅಧಿಕಾರಿಗಳ ಅನುಮೋದನೆ ಪಡೆಯದ ಇ-ವೀಸಾಗಳನ್ನು ಬಳಕೆ  ಮಾಡುವಂತಿಲ್ಲ ಎಂದೂ ಇಲಾಖೆ ಸ್ಪಷ್ಟಪಡಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com