ಬೆಳಗಾವಿಯ ಬಾಬಾ ಫಾಲ್ಸ್ ಈಗ ಪ್ರವಾಸಿಗರ ಮೆಚ್ಚಿನ ತಾಣ

ಎಲ್ಲಿ ನೋಡಿದರೂ ಹಸಿರು ಬೆಟ್ಟಗುಡ್ಡಗಳು, ಪ್ರಕೃತಿಯ ರಮ್ಯತಾಣದಲ್ಲಿರುವ ಬೆಳಗಾವಿಯ ಕುಂಬವಾಡೆ ವಾಟರ್ ಫಾಲ್ಸ್ ಸದ್ಯ ಪ್ರವಾಸಿಗರ ಮೆಚ್ಚಿನ...
ಬೆಳಗಾವಿಯ ಕುಂಬವಾಡೆ ವಾಟರ್ ಫಾಲ್ಸ್
ಬೆಳಗಾವಿಯ ಕುಂಬವಾಡೆ ವಾಟರ್ ಫಾಲ್ಸ್
ಬೆಳಗಾವಿ:  ಎಲ್ಲಿ ನೋಡಿದರೂ ಹಸಿರು ಬೆಟ್ಟಗುಡ್ಡಗಳು, ಪ್ರಕೃತಿಯ ರಮ್ಯತಾಣದಲ್ಲಿರುವ ಬೆಳಗಾವಿಯ ಕುಂಬವಾಡೆ ವಾಟರ್ ಫಾಲ್ಸ್ ಸದ್ಯ ಪ್ರವಾಸಿಗರ ಮೆಚ್ಚಿನ ತಾಣವಾಗಿ ಪರಿವರ್ತನೆಯಾಗಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ಮಹಾರಾಷ್ಟ್ರದ ಅಂಬೊಳಿ ಬೆಳಗಾವಿಯಿಂದ 87 ಕಿಮೀ ದೂರದಲ್ಲಿದೆ,  ಕೇವಲ ಕೆಲವೇ ಕೆಲವು ಪ್ರಕೃತಿ ಪ್ರೇಮಿಗಳಿಗೆ ಮಾತ್ರವೇ ಕುಂಬವಾಡೆ ಫಾಲ್ಸ್ ಬಗ್ಗೆ ತಿಳಿದಿದೆ.  ಏಕೆಂದರೆ ಈ ಪಾಲ್ಸ್ ಮಹಾರಾಷ್ಟ್ರ ವಿಧಾನಸಭೆ ಮಾಜಿ ಸ್ಪೀಕರ್ ಹಾಗೂ ಹಿರಿಯ ಎನ್ ಸಿಪಿ ನಾಯಕ ದಿವಂಗತ ಬಾಬಾ ಸಾಹೇಬ್ ಕುಪೇಕರ್ ಅವರ ಜಮೀನನಲ್ಲಿದೆ. ಹೀಗಾಗಿ ಈ ಫಾಲ್ಸ್ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿಯಿಲ್ಲ,
ಬಾಬಾ ಫಾಲ್ಸ್ ಎಂದು ಕರೆಯಲ್ಪಡುವ ಈ ಸ್ಥಳಕ್ಕೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ ಆದರೆ ಕೆಲವು ಮಂದಿ ಅತಿಕ್ರಮವಾಗಿ ಪ್ರವೇಶಿಸುತ್ತಿದ್ದರು.
ಈ ಮೊದಲು ಜನ ಗೇಟ್ ಜಂಪ್ ಮಾಡಿ ಒಳಗೆ ನುಗ್ಗುತ್ತಿದ್ದರು. ಈ ಪ್ರದೇಶದಲ್ಲಿ ಪದೇ ಪದೇ ಭೂ ಕುಸಿತ ಆಗುತ್ತಿರುತ್ತದೆ, ಹೀಗಾಗಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಪ್ರವೇಶ ನಿರ್ಬಂಧಿಸಲಾಗಿತ್ತು. ಆದರೆ ಅತಿಕ್ರಮಣ ಪ್ರವೇಶ ಹೆಚ್ಚಿದಂತೆಲ್ಲಾ, ಸುರಕ್ಷತೆ ಕ್ರಮಗಳನ್ನು ತೆಗೆದುಕೊಂಡು ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಬಾಬಾ ವಾಟರ್ ಫಾಲ್ಸ್ ಕೇರ್ ಟೇಕರ್ ಮಧುಕರ್ ಗವಾಡೆ ಹೇಳಿದ್ದಾರೆ. ರಸ್ತೆ ನಿರ್ಮಾಣ ಕಾರ್ಯ ಕಳೆದ ವರ್ಷ ಆರಂಭವಾಗಿದ್ದು, ಈ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಗವಾಡೆ ತಿಳಿಸಿದ್ದಾರೆ. ಪ್ರವೇಶ ಶುಲ್ಕ 50 ರು. ನಿಗದಿ ಮಾಡಲಾಗಿದೆ.
ವಾಟರ್ ಪಾಲ್ಸ್ ನ ಸೌಂದರ್ಯ ಹೆಚ್ಚಿಸಿದೆ ಗುಹೆ
ಬಾಬಾ ವಾಟರ್ ಫಾಲ್ಸ್ ನ ಸೊಬಗನ್ನು ಮತ್ತಷ್ಟು ಹೆಚ್ಚಿಸಿರುವುದು ಇಲ್ಲಿರುವ ಗುಹೆ. ಪ್ರವಾಸಿಗರು ನೀರಿನ ಪರದೆ ದಾಟಿ ಹೋದರೆ ಗುಹೆ ಸಿಗುತ್ತದೆ. ನಂತರ ಗುಹೆ ಒಳಗೆ ಪ್ರವೇಶಿಸಬಹುದಾಗಿದೆ.
ಇಲ್ಲಿಯವರೆಗೂ ಈ ಪ್ರವಾಸಿ ಸ್ಥಳದಲ್ಲಿ ಯಾವುದೇ ಹೊಟೇಲ್ ಅಥವಾ ಫುಡ್ ಪಾಯಿಂಟ್ ಸ್ಥಾಪಿಸಿಲ್ಲ, ಮೊದಲೇ ಆರ್ಡರ್ ನೀಡಿದರೇ ಕೆಲವು ಸ್ಥಳೀಯರು ಊಟ ತಯಾರಿಸಿಕೊಡುತ್ತಾರೆ. ಹೀಗಾಗಿ ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ಜೊತೆಯಲ್ಲೇ ಊಟ, ತಿಂಡಿ ತರುತ್ತಾರೆ.
ಸ್ಥಳೀಯರಿಗೆ ಹೆಚ್ಚಿದ ಉದ್ಯೋಗವಕಾಶಗಳು
ಬಾಬಾ ವಾಟರ್ ಫಾಲ್ಸ್ ಪ್ರಸಿದ್ದವಾಗುತ್ತಿದ್ದಂತೆ ಅಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉದ್ಯೋಗ ಒದಗಿಸಿದೆ. ಅಂಬೋಳಿಯಲ್ಲಿ ತುಂಬಿ ತುಳುಕುತ್ತಿದ್ದ ಹೆಚ್ಚಿನ ಪ್ರವಾಸಿಗರು ಈಗ ಬಾಬಾ ಫಾಲ್ಸ್ ಕಡೆ ಮುಖ ಮಾಡುತ್ತಿದ್ದಾರೆ.
ಕುಂಬವಾಡೆ ಫಾಲ್ಸ್ ಗೆ ಹೋಗುವುದು ಹೇಗೆ?
ರಸ್ತೆ ಮೂಲಕ ಕುಂಬವಾಡೆ ಫಾಲ್ಸ್ ಗೆ ತೆರಳುವುದು ಬಹಳ ಸುಲಭ,  ಬೆಳಗಾವಿ, ಮಹಾರಾಷ್ಟ್ರದ ಕೊಲ್ಲಾಪುರ, ಸಾವಂತವಾಡಿ, ಮತ್ತು ಗೋವಾಗಳಿಂದ ಇಲ್ಲಿಗೆ ಖಾಸಗಿ ಬಸ್ ಸೌಲಭ್ಯವಿದೆ. ಬೆಳಗಾವಿ ಅಥವಾ ಗೋವಾಗೆ ವಿಮಾನದಲ್ಲಿ ಬಂದು ಅಲ್ಲಿಂದ ಕ್ಯಾಬ್ ನಲ್ಲಿ ಇಲ್ಲಿಗೆ ತಲುಪಬಹುದಾಗಿದೆ. 
ಗೋವಾದ ದಾಬೋಲಿಮ್ ವಿಮಾನ ನಿಲ್ದಾಣ 130 ಕಿಮೀ ಮತ್ತು ಬೆಳಗಾವಿ ವಿಮಾನ ನಿಲ್ದಾಣ ಫಾಲ್ಸ್ ನಿಂದ 102 ಕಿಮೀ ದೂರದಲ್ಲಿದೆ. ಗೋವಾ, ಬೆಳಗಾವಿಯಿಂದ ಅಂಬೋಳಿಗೆ ಖಾಸಗಿ ಬಸ್ ಸಂಚಾರವಿದೆ, ಅಂಬೋಳಿಯಿಂದ 30 ಕಿಮೀ ದೂರದಲ್ಲಿರುವ ಸಾವಂತವಾಡಿಗೆ ಖಾಸಗಿ ವಾಹನಗಳ ಸಂಚಾರ ವ್ಯವಸ್ಥೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com