ಇನ್ಮುಂದೆ ಬೈಕ್ ಗಳ ಹೆಡ್ ಲ್ಯಾಂಪ್ ಆಫ್ ಆಗುವುದೇ ಇಲ್ಲ!

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು, 2017 ಏಪ್ರಿಲ್ ನಿಂದ ಆ್ಯಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆ ಜಾರಿ ಮಾಡಲು ಹೊರಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು, 2017 ಏಪ್ರಿಲ್ ನಿಂದ ಆ್ಯಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆ ಜಾರಿ ಮಾಡಲು ಹೊರಟಿದೆ.

ಹೌದು..ಇದೇ ಏಪ್ರಿಲ್ ನಿಂದ ಜಾರಿಗೆ ಬರುವಂತೆ ಕೇಂದ್ರದ ಸಾರಿಗೆ ಸಚಿವಾಲಯ ಆ್ಯಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಈ ನೂತನ ಯೋಜನೆ ಅನ್ವಯ ಏಪ್ರಿಲ್ ನಿಂದ ಈಚೆಗೆ ಮಾರುಕಟ್ಟೆಗೆ  ಬರುವ ಹೊಸ ಬೈಕುಗಳಲ್ಲಿ ಸ್ವಯಂಚಾಲಿತ ಹೆಡ್ ಲೈಟ್ ಆನ್ ವ್ಯವಸ್ಥೆ ಇರಲಿದೆ. ಅಂದರೆ ಹಗಲಾಗಲೀ ಅಥವಾ ರಾತ್ರಿಯಾಗಲೀ ಬೈಕ್ ಗಳ ಹೆಡ್ ಲೈಟ್ ಗಳು ಸದಾ ಆನ್ ಆಗಿರುತ್ತವೆ.

ಏನಿದು ಯೋಜನೆ, ಇದರಿಂದ ಹೇಗೆ ಪ್ರಯೋಜನ?
ಕೇಂದ್ರ ಸರ್ಕಾರದ ನೂತನ ಯೋಜನೆ ಅನ್ವಯ ಏಪ್ರಿಲ್ ನಿಂದ ಮಾರುಕಟ್ಟೆಗೆ ಬರುವ ಪ್ರತೀ ಬೈಕುಗಳಿಗೂ ಸ್ವಯಂಚಾಲಿತ ಹೆಡ್ ಲೈಟ್ ಆನ್ ವ್ಯವಸ್ಥೆ ಅಳವಡಿಸುವಂತೆ ಬೈಕ್ ತಯಾರಿಕಾ ಸಂಸ್ಥೆಗಳಿಗೆ ಸೂಚಿಸಲಾಗಿದೆ.  ಅದರಂತೆ ಏಪ್ರಿಲ್ ನಿಂದ ಈಚೆಗೆ ಗ್ರಾಹಕ ಖರೀದಿಸುವ ಪ್ರತೀ ಬೈಕ್ ಗಳ ಹೆಡ್ ಲೈಟ್ ಗಳು ಎಂಜಿನ್ ಆನ್ ಆಗುತ್ತಿದ್ದಂತೆಯೇ ಅವು ಕೂಡ ಆನ್ ಆಗುತ್ತವೆ. ಬೈಕ್ ಸವಾರ ಅದನ್ನು ಆಫ್ ಮಾಡಲು ಯತ್ನಿಸಿದರೂ ಅವು  ಸ್ಥಗಿತಗೊಳ್ಳುವುದಿಲ್ಲ.

ಏಕೆ ಈ ನಿರ್ಧಾರ?
2015ರ ಕರ್ನಾಟಕದಲ್ಲಿನ ಅಪಘಾತಗಳ ಕುರಿತ ದತ್ತಾಂಶಗಳ ವರದಿಯನ್ವಯ, 2015ರಲ್ಲಿ ಕರ್ನಾಟಕದಲ್ಲಿ ಒಟ್ಟು 44,011 ಅಪಘಾತಗಳು ಸಂಭವಿಸಿದ್ದು, ಈ ಪೈಕಿ ಶೇ.30ರಷ್ಟು ಅಂದರೆ 13,155 ಅಪಘಾತಗಳಲ್ಲಿ ಬೈಕ್  ಅಪಘಾತಗಳು ಸೇರಿವೆ. ಈ ಪೈಕಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ 1.4 ಲಕ್ಷ ಮಂದಿಯ ಪೈಕಿ 32,524 ಮಂದಿ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ. ಬೈಕ್ ಗಳಲ್ಲಿ ಸ್ವಯಂ ಚಾಲಿತ ಹೆಡ್ ಲೈಟ್ ಆನ್ ವ್ಯವಸ್ಥೆ  ಅಳವಡಿಸುವುದರಿಂದ ಎದುರಿಗೆ ಬರುವ ವಾಹನ ಅಥವಾ ವ್ಯಕ್ತಿಗಳ ಗಮನವನ್ನು ಈ ಹೆಡ್ ಲೈಟ್ ಗಳು ಸೆಳೆದು ಎದುರಿಗೆ ಬರುವ ವಾಹನ ಅಥವಾ ವ್ಯಕ್ತಿ ಜಾಗರೂಕನಾಗುವಂತೆ ಮಾಡುತ್ತದೆ. ಈಗಾಗಲೇ ಈ ವ್ಯವಸ್ಥೆ ಕಾರಿನಲ್ಲಿ  ಅಳವಡಿಸಿ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿದ್ದು, ಅದು ಯಶಸ್ಸು ಕೂಡ ಆಗಿದೆ. ಇದೇ ಕಾರಣಕ್ಕೆ ಬೈಕ್ ಗಳಲ್ಲಿ ಇದೇ ವ್ಯ.ವಸ್ಥೆ ಅಳವಡಿಸುವ ಮೂಲಕ ರಸ್ತೆ ಅಪಘಾತಗಳ ಪ್ರಮಾಣ ತಗ್ಗಿಸುವುದು ಕೇಂದ್ರ ಸರ್ಕಾರದ  ಚಿಂತನೆಯಾಗಿದೆ.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕೂಡ ಈ ಯೋಜನೆ ಜಾರಿಗೆ ಒಲವು ತೋರಿದ್ದು, ಈ ಹಿಂದೆ ಜಸ್ಟಿಸ್ ರಾಧಾಕೃಷ್ಣನ್ ಸಮಿತಿ ಕೂಡ ಹೆಡ್ ಲೈಟ್ ಆನ್ ವ್ಯವಸ್ಥೆ ಅಪಘಾತ ನಿಯಂತ್ರಿಸುವ ವ್ಯವಸ್ಥೆಗಳಲ್ಲಿ ಒಂದಾಗಿದೆ  ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಏಪ್ರಿಲ್ ನಿಂದ ಈ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದು, 2017ರ ಏಪ್ರಿಲ್ ನಿಂದ ಈ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com