ಒಂಟಿಯಾಗಿ ಪ್ರವಾಸ ಕೈಗೊಳ್ಳುವಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

ಹಲವರಿಗೆ ಏಕಾಂಗಿಯಾಗಿ ಪ್ರವಾಸ ಮಾಡುವ ಹವ್ಯಾಸವಿರುತ್ತದೆ. ಸೆಲ್ಫಿಯ ಗೀಳಿಲ್ಲದೇ, ಬ್ಯಾಕ್ ಪ್ಯಾಕಿಂಗ್ ನ್ನು ಎಂಜಾಯ್ ಮಾಡುವ ಏಕಾಂಕಿ ಪ್ರವಾಸಿಗರಿಗೆ ಮಳೆಗಾಲದಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು.
ಒಂಟಿ ಪ್ರವಾಸ
ಒಂಟಿ ಪ್ರವಾಸ
ನವದೆಹಲಿ: ಹಲವರಿಗೆ ಏಕಾಂಗಿಯಾಗಿ ಪ್ರವಾಸ ಮಾಡುವ ಹವ್ಯಾಸವಿರುತ್ತದೆ. ಸೆಲ್ಫಿಯ ಗೀಳಿಲ್ಲದೇ, ಬ್ಯಾಕ್ ಪ್ಯಾಕಿಂಗ್ ನ್ನು ಎಂಜಾಯ್ ಮಾಡುವ ಏಕಾಂಕಿ ಪ್ರವಾಸಿಗರಿಗೆ ಮಳೆಗಾಲದಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು. ಮಳೆಗಾಲದಲ್ಲಿ ಒಂಟಿಯಾಗಿ ಪ್ರವಾಸ ಮಾಡುವಾಗ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. 
ಒಂಟಿಯಾಗಿ ಪ್ರವಾಸ ಕೈಗೊಳ್ಳುವಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ 
  • ಸಂಪೂರ್ಣ ವಾಟರ್ ಪ್ರೂಫ್ ಉತ್ಪನ್ನಗಳನ್ನು ಬಳಸಿ: ಮಳೆಗಾಲದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿರುತ್ತದೆ ಆದ್ದರಿಂದ ವಾಟರ್ ಪ್ರೂಫ್ ಬ್ಯಾಕ್ ಪ್ಯಾಕ್ ನ್ನು ಹೊಂದಿರುವುದು ಉತ್ತಮವಾಗಿರಲಿದೆ. ಅತ್ಯುತ್ತಮ ಗುಣಮಟ್ಟದ ರೈನ್ ಕೋಟ್ ಹಾಗೂ ಛತ್ರಿಯನ್ನು ಹೊಂದಿರುವುದು, ವಾಟರ್ ಪ್ರೂಫ್ ಉತ್ಪನ್ನಗಳನ್ನು ಹೊಂದಿರುವುದು ಉತ್ತಮ. 
  • ಜಿಪ್ ಲಾಕ್ ಪೌಚ್ ಗಳು ಹಾಗೂ ಪ್ಲಾಸ್ಟಿಕ್ ಬ್ಯಾಗ್ ಇಟ್ಟುಕೊಂಡಿರಿ: ಚಾರಣ ಹೋಗುವ ಮನಸ್ಸಿದ್ದರೆ, ನಿಮ್ಮ ಬಳಿ ಇರುವ ಬೆಲೆ ಬಾಳುವ ಅತ್ಯಾಧುನಿಕ ಕ್ಯಾಮರ, ಲಕ್ಷುರಿ ಸ್ಮಾರ್ಟ್ ಫೋನ್, ಗ್ಯಾಡ್ಜೆಟ್ ಗಳನ್ನು ಮಳೆ ನೀರಿನಿಂದ ಸಂರಕ್ಷಿಸಲು ಜಿಪ್  ಲಾಕ್ ಪೌಚ್ ಗಳನ್ನು, ಪ್ಲಾಸ್ಟಿಕ್ ಬ್ಯಾಗ್ ಳನ್ನು ಇಟ್ಟುಕೊಂಡಿರಿ.  
  • ಬೀದಿ ಬದಿಯ ಆಹಾರಗಳಿಂದ ದೂರವಿರಿ: ಮಳೆಗಾಳದಲ್ಲಿ ಬಜ್ಜಿ ಸೇರಿದಂತೆ ಹಲವು ಬಗೆಗಳ ತಿಂಡಿಗಳನ್ನು ತಿನ್ನಬೇಕೆನಿಸುತ್ತದೆ. ಬೀದಿ ಬದಿಗಳಲ್ಲಿ ಈ ರೀತಿಯ ಆಹಾರಗಳನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಾಧ್ಯವಾದಷ್ಟೂ ಕಡಿಮೆ ಮಾಡಿ. ಅಷ್ಟೇ ಅಲ್ಲದೇ ಯಾವುದೇ ರೀತಿಯ ಹಣ್ಣಿನ ಜ್ಯೂಸ್ ನ್ನು ಕುಡಿಯುವುದನ್ನೂ ಸಹ ಕಡಿಮೆ ಮಾಡಿ ಕುದಿಸಿದ ನೀರನ್ನೇ ಬಳಕೆ ಮಾಡಿ.  
  • ಪ್ರಥಮ ಚಿಕಿತ್ಸೆ ಬಾಕ್ಸ್: ಒಂಟಿಯಾಗಿ ಪ್ರವಾಸ ಕೈಗೊಳ್ಳುವಾಗ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ನಿಮ್ಮ ಬಳಿ ಇಟ್ಟುಕೊಂಡಿರುವುದು ಮುಖ್ಯವಾಗಲಿದೆ. ಆದ್ದರಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿ. 
  • ಪಾಕೆಟ್ ಟಾರ್ಚ್, ಪವರ್ ಬ್ಯಾಂಕ್: ಮಳೆಗಾಲದಲ್ಲಿ ಕರೆಂಟ್ ಕೈಕೊಡುವುದು ಸಾಮಾನ್ಯ. ಆದ್ದರಿಂದ ಟಾರ್ಚ್, ಪವರ್ ಬ್ಯಾಂಕ್ ಗಳನ್ನು ಇಟ್ಟುಕೊಳ್ಳುವುದು ಉತ್ತಮ. 
  • ಕೀಟ ನಿವಾರಕಗಳು: ಮಳೆಗಾಲದಲ್ಲಿ ಸೊಳ್ಳೆಯಂತಹ ಕೀಟಗಳ ಉಪಟಳ ಹೆಚ್ಚಾಗಿರುತ್ತದೆ. ಸೊಳ್ಳೆ ಹಾಗೂ ಇನ್ನಿತರ ಕೀಟಗಳಿಂದ ರಕ್ಷಣೆ ಪಡೆಯಲು ಕೀಟ ನಿವಾರಕಗಳನ್ನು ತೆಗೆದುಕೊಳ್ಳಿ. 
  • ಆರಾಮದಾಯಕ ಬಟ್ಟೆಗಳನ್ನು ಕೊಂಡೊಯ್ಯಿರಿ: ಮಳೆಗಾಲದಲ್ಲಿ ಬೇಗ ಒಣಗುವಂತಹ ಬಟ್ಟೆಗಳನ್ನು  ರೈನ್ ಪ್ರೂಫ್ ಶೂಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. 
  • ನಿಮ್ಮವರೊಂದಿಗಿನ ಸಂಪರ್ಕದಲ್ಲಿರಿ: ಒಂಟಿಯಾಗಿ ಪ್ರವಾಸ ಕೈಗೊಳ್ಳುವುದಾದರೂ ತುರ್ತು ಪರಿಸ್ಥಿತಿಯಲ್ಲಿ ನೆರವು ಪಡೆಯಲು ಸಾಮಾಜಿಕ ಜಾಲತಾಣದಲ್ಲಿ, ಫೋನ್ ನಲ್ಲಿ ನಿಮ್ಮವರೊಂದಿಗಿನ ಸಂಪರ್ಕದಲ್ಲಿರಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com