ಗುಜರಾತ್ ನಲ್ಲಿ ವಿದ್ಯುತ್ ಚಾಲಿತ ಕಾರುಗಳನ್ನು ಉತ್ಪಾದಿಸಲಿರುವ ಮಾರುತಿ!

ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸುವ ಭಾರತ ಸರ್ಕಾರದ ಕನಸಿಗೆ ಮಾರುತಿ ಕಂಪನಿಯ ಜಪಾನ್ ಮೂಲದ ಮಾತೃಸಂಸ್ಥೆ ಸುಜೂಕಿ ಮೋಟಾರ್ ನೆರವಾಗಿದ್ದು, ಗುಜರಾತ್ ನಲ್ಲಿ ವಿದ್ಯುತ್ ಚಾಲಿತ ಕಾರುಗಳನ್ನು
ಸ್ವಿಫ್ಟ್ ಕಾರಿನ ವಿದ್ಯುತ್ ಚಾಲಿತ ಕಾರಿನ ಮಾದರಿ
ಸ್ವಿಫ್ಟ್ ಕಾರಿನ ವಿದ್ಯುತ್ ಚಾಲಿತ ಕಾರಿನ ಮಾದರಿ
ನವದೆಹಲಿ: ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸುವ ಭಾರತ ಸರ್ಕಾರದ ಕನಸಿಗೆ ಮಾರುತಿ ಕಂಪನಿಯ ಜಪಾನ್ ಮೂಲದ ಮಾತೃಸಂಸ್ಥೆ ಸುಜೂಕಿ ಮೋಟಾರ್ ನೆರವಾಗಿದ್ದು, ಗುಜರಾತ್ ನಲ್ಲಿ ವಿದ್ಯುತ್ ಚಾಲಿತ ಕಾರುಗಳನ್ನು ಉತ್ಪಾದಿಸಲು ತೀರ್ಮಾನಿಸಿದೆ. 
ಗುಜರಾತ್ ನಲ್ಲಿ ತಯಾರಾಗಲಿರುವ ಮಾರುತಿ ಸುಜೂಕಿಯ ವಿದ್ಯುತ್ ಚಾಲಿತ ವಾಹನಗಳು ಭಾರತ ಹಾಗೂ ವಿಶ್ವಕ್ಕೆ ಪೂರೈಕೆಯಾಗಲಿದ್ದು, ಗುಜರಾತ್ ನಲ್ಲಿ ತಯಾರಾಗುವ ವಿದ್ಯುತ್ ಚಾಲಿತ ಕಾರುಗಳು ಮಾರುತಿ-ಸುಜೂಕಿಯ ಮೊದಲ ವಾಣಿಜ್ಯ ಉದ್ದೇಶದ ವಿದ್ಯುತ್ ಚಾಲಿತ ಕಾರುಗಳಾಗಿರಲಿವೆ. 
ಜಪಾನ್ ನ ಸಂಸ್ಥೆ 2010 ರಲ್ಲೇ ಸ್ವಿಫ್ಟ್ ಕಾರಿನ ವಿದ್ಯುತ್ ಚಾಲಿತ ಕಾರಿನ ಮಾದರಿ ( Swift REEV) ಯನ್ನು ತಯಾರಿಸಿತ್ತಾದರೂ, ವಾಣಿಜ್ಯ ಉದ್ದೇಶದಿಂದ ಉತ್ಪಾದನೆ ಮಾಡಿರಲಿಲ್ಲ. ಈಗ ಗುಜರಾತ್ ನ ವಿದ್ಯುತ್ ಚಾಲಿತ ಕಾರು ಉತ್ಪಾದನಾ ಘಟಕವನ್ನು ಪ್ರಾರಂಭಿಸುವ ಮೂಲಕ ಭಾರತವನ್ನು ವಿಶ್ವದ ಪ್ರಮುಖ ಉತ್ಪಾದನಾ ಕೇಂದ್ರವನ್ನಾಗಿ ಮಾಡಿಕೊಳ್ಳಲು ತೀರ್ಮಾನಿಸಿದೆ. ಜಪಾನ್ ಪ್ರಧಾನಿ ಶಿಂಜೋ ಅಬೆ ಭಾರತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಈ ನಿರ್ಧಾರ ಪ್ರಕಟವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com