ದುಬಾರಿ ಆಯ್ತು 'ಪ್ರೇಮಸೌಧ' ತಾಜ್ ಮಹಲ್ ಪ್ರವೇಶ, ಟಿಕೆಟ್ ದರ 50 ರಿಂದ 250 ರೂ. ಗೆ ಏರಿಕೆ!

ನಿರೀಕ್ಷೆಯಂತೆಯೇ ಉತ್ತರ ಪ್ರದೇಶ ಸರ್ಕಾರ ವಿಶ್ವ ವಿಖ್ಯಾತ ತಾಜ್ ಮಹಲ್ ಪ್ರವೇಶ ದರವನ್ನು ಏರಿಕೆ ಮಾಡಿದ್ದು, ವಿದೇಶಿ ಪ್ರವಾಸಿಗರ ಪ್ರವೇಶ ಟಿಕೆಟ್ ದರದಲ್ಲೂ ಗಣನೀಯ ಏರಿಕೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಆಗ್ರಾ: ನಿರೀಕ್ಷೆಯಂತೆಯೇ ಉತ್ತರ ಪ್ರದೇಶ ಸರ್ಕಾರ ವಿಶ್ವ ವಿಖ್ಯಾತ ತಾಜ್ ಮಹಲ್ ಪ್ರವೇಶ ದರವನ್ನು ಏರಿಕೆ ಮಾಡಿದ್ದು, ವಿದೇಶಿ ಪ್ರವಾಸಿಗರ ಪ್ರವೇಶ ಟಿಕೆಟ್ ದರದಲ್ಲೂ ಗಣನೀಯ ಏರಿಕೆ ಮಾಡಿದೆ.
ಹೌದು.. ವಿಶ್ವ ವಿಖ್ಯಾತ ತಾಜ್ ಮಹಲ್ ಪ್ರವೇಶ ಟಿಕೆಟ್ ದರವನ್ನು ತಾಜ್ ಮಹಲ್ ನಿರ್ವಹಣಾ ಮಂಡಳಿ ಹಾಗೂ ಭಾರತೀಯ ಪುರಾತತ್ವ ಇಲಾಖೆ ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಿದ್ದು, ದೇಶೀಯ ಪ್ರವಾಸಿಗರಿಗೆ ನೀಡುವ ಟಿಕೆಟ್ ದರವನ್ನು 250 ರೂ. ಗಳಿಗೆ ಏರಿಕೆ ಮಾಡಲಾಗಿದೆ. ಅಂತೆಯೇ ವಿದೇಶಿ ಪ್ರವಾಸಿಗರಿಗೆ ನೀಡಲಾಗುವ ಟಿಕೆಟ್ ದರವನ್ನೂ ಕೂಡ  1300 ರೂಗಳಿಗೆ ಏರಿಕೆ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಪುರಾತತ್ವ ಇಲಾಖೆ ಮುಖ್ಯ ಅಧಿಕಾರಿ ವಸಂತ್ ಸ್ವರ್ಣಾಕರ್ ಅವರು, 17ನೇ ಶತಮಾನದ ತಾಜ್ ಮಹಲ್ ವೀಕ್ಷಣೆಗೆ ಆಗಮಿಸುವ ದೇಶೀಯ ಪ್ರವಾಸಿಗರ ಟಿಕೆಟ್ ದರವನ್ನು 250 ರೂಗಳಿಗೆ ಏರಿಕೆ ಮಾಡಲಾಗಿದ್ದು, ಅಂತೆಯೇ ವಿದೇಶಿಗರ ಟಿಕೆಟ್ ದರವನ್ನು 1300 ರೂಗಳಿಗೆ ಏರಿಕೆ ಮಾಡಲಾಗಿದೆ. ಇದಲ್ಲದೆ ಸಾರ್ಕ್ ರಾಷ್ಟ್ರಗಳ ಪ್ರವಾಸಿಗರ ಟಿಕೆಟ್ ದರವನ್ನು 740 ರೂಗಳಿಗೆ ಏರಿಕೆ ಮಾಡಲಾಗಿದೆ ಎಂದು ಹೇಳಿದರು.
ಈ ಹಿಂದೆ ದೇಶೀಯ ಪ್ರವಾಸಗರಿಗೆ ತಾಜ್ ಮಹಲ್ ವೀಕ್ಷಣೆಗಾಗಿ 50 ರೂ ಪ್ರವೇಶ ದರ ನಿಗದಿ ಪಡಿಸಲಾಗಿತ್ತು. ಅಂತೆಯೇ ಸಾರ್ಕ್ ರಾಷ್ಟ್ರಗಳ  ಪ್ರವಾಸಿಗರ ಟಿಕೆಟ್ ದರ 540 ರೂ ಗಳಾಗಿತ್ತು. ದರ ಏರಿಕೆಯಿಂದಾಗಿ ತಾಜ್ ಮಹಲ್ ನಲ್ಲಿ ಜನಜಂಗುಳಿ ತಗ್ಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com