ವಿಶ್ವಾದ್ಯಂತ 251,000 ಬೈಕ್ ಗಳನ್ನು ಹಿಂಪಡೆದ ಹಾರ್ಲೆ ಡೇವಿಡ್ ಸನ್!

ಅಮೆರಿಕದ ಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಹಾರ್ಲೆ ಡೇವಿಡ್ ಸನ್ ವಿಶ್ವಾದ್ಯಂತ ಸುಮಾರು 251,000 ಬೈಕ್ ಗಳನ್ನು ವಾಪಸ್ ಪಡೆದಿದ್ದು, ಬ್ರೇಕ್ ವೈಫಲ್ಯ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಹಾರ್ಲೆ ಡೇವಿಡ್ ಸನ್
ಹಾರ್ಲೆ ಡೇವಿಡ್ ಸನ್
ಚಿಕಾಗೊ: ಅಮೆರಿಕದ ಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಹಾರ್ಲೆ ಡೇವಿಡ್ ಸನ್ ವಿಶ್ವಾದ್ಯಂತ ಸುಮಾರು 251,000 ಬೈಕ್ ಗಳನ್ನು ವಾಪಸ್ ಪಡೆದಿದ್ದು, ಬ್ರೇಕ್ ವೈಫಲ್ಯ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. 
ಸಿವಿಒ ಟೂರಿಂಗ್ ಹಾಗೂ ವಿಎಸ್ಆರ್ ಸಿ ಬೈಕ್ ಗಳನ್ನು ಹಿಂಪಡೆಯಲಾಗಿದ್ದು, ಈ ಬೈಕ್ ಗಳಲ್ಲಿ ಆಂಟಿ ಲಾಕ್ ಬ್ರೇಕ್ ಸೌಲಭ್ಯ ಒದಗಿಸಲಾಗಿತ್ತು. ಬೈಕ್ ಗಳನ್ನು ಹಿಂಪಡೆಯುತ್ತಿರುವುದರ ಬಗ್ಗೆ ಸಂಸ್ಥೆಯ ಕೇಂದ್ರ ಕಚೇರಿ ಸ್ಪಷ್ಟನೆ ನೀಡಿದ್ದು, 2008-2011 ಆವೃತ್ತಿಗಳನ್ನು ವಾಪಸ್ ಪಡೆಯಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. 
ಸುಮಾರು 175,000 ದೋಷಪೂರಿತ ಬೈಕ್ ಗಳನ್ನು ಅಮೆರಿಕಾದಲ್ಲಿ ಮಾರಾಟ ಮಾಡಲಾಗಿದ್ದು, ಬೈಕ್ ಗಳನ್ನು ಹಿಂಪಡೆಯುತ್ತಿರುವುದರಿಂದ ಸಂಸ್ಥೆ 29.4 ಮಿಲಿಯನ್ ಡಾಲರ್ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com