ಹೊಸ ರಾಷ್ಟ್ರೀಯ ವಾಹನ ನೀತಿಯಲ್ಲಿ ದೊಡ್ಡ ಮತ್ತು ಹೆಚ್ಚು ಮಾಲಿನ್ಯದ ಕಾರುಗಳು ದುಬಾರಿ

ಗಾತ್ರದಲ್ಲಿ ದೊಡ್ಡದಾಗಿರುವ ಕಾರುಗಳು ಹೆಚ್ಚು ಸ್ಥಳಾವಕಾಶವನ್ನು ಬೇಡುವುದಲ್ಲದೆ ಇನ್ನು ಮುಂದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಗಾತ್ರದಲ್ಲಿ ದೊಡ್ಡದಾಗಿರುವ ಕಾರುಗಳು ಹೆಚ್ಚು ಸ್ಥಳಾವಕಾಶವನ್ನು ಬೇಡುವುದಲ್ಲದೆ ಇನ್ನು ಮುಂದೆ ದುಬಾರಿಯಾಗಲಿವೆ. ಕಡಿಮೆ ಕಾರ್ಬನ್ ನ್ನು ಹೊರಸೂಸುವ ಸಣ್ಣ ಕಾರುಗಳನ್ನು ಪ್ರಚುರಪಡಿಸಲು ಸರ್ಕಾರ ಹೊಸ ರಾಷ್ಟ್ರೀಯ ವಾಹನ ನೀತಿಯನ್ನು ಪ್ರಸ್ತಾಪಿಸಿದ್ದು, ಇದು ವಾಹನ ತೆರಿಗೆಗಾಗಿ ಒಂದು ಸಮ್ಮಿಶ್ರ ಉದ್ದ ಮತ್ತು ಹೊರಸೂಸುವಿಕೆ ಆಧಾರಿತ ಮಾನದಂಡವನ್ನು ಪರಿಚಯಿಸುತ್ತದೆ.

ನಾಲ್ಕು ಮೀಟರ್ ಗಿಂತ ಹೆಚ್ಚು ಉದ್ದವಿರುವ ಕಾರು ಮತ್ತು ನಿಗದಿತ ಮಟ್ಟದಿಂದ ಹೊರಸೂಸುವ ಕಾರ್ಬನ್ ಮಟ್ಟ ಅಧಿಕವಾಗಿರುವ ಕಾರುಗಳಿಗೆ ಶೇಕಡಾ 27ರಷ್ಟು ಹೆಚ್ಚಿನ ತೆರಿಗೆಯನ್ನು ಸರ್ಕಾರ ವಿಧಿಸಲಿದೆ. ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಕಾರುಗಳ ಉದ್ದ ಮತ್ತು ಗಾತ್ರದ ಬಗ್ಗೆ ಗಮನ ಹರಿಸಲಾಗುತ್ತಿದ್ದು, ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಕಾರ್ಬನ್ ಹೊರಸೂಸುವ ಪ್ರಮಾಣದ ಬಗ್ಗೆ ಸರ್ಕಾರ ನಿಯಂತ್ರಣ ಹೇರಲು ಮುಂದಾಗಿದೆ. ಉದ್ದೇಶಿತ ತೆರಿಗೆ ಚೌಕಟ್ಟಿನಲ್ಲಿ ಪ್ರಯಾಣಿಕರ ಕಾರುಗಳಿಗೆ ಜಿಎಸ್ ಟಿ ದರ ಶೇಕಡಾ 28ರಷ್ಟು ಇದ್ದು, ಕಾರಿನ ಗಾತ್ರ ಮತ್ತು ಹೊರಸೂಸುವ ಕಾರ್ಬನ್ ಮಟ್ಟವನ್ನು ನೋಡಿಕೊಂಡು ತೆರಿಗೆ ಪ್ರಮಾಣ ನಿರ್ಧಾರವಾಗಲಿದೆ. ಸಣ್ಣ ಗಾತ್ರದ ಪರಿಸರ ಸ್ನೇಹಿ ಕಾರುಗಳನ್ನು ಹೆಚ್ಚು ಪ್ರಚುರಪಡಿಸುವುದು ಸರ್ಕಾರದ ಉದ್ದೇಶವಾಗಿದೆ.

ರಾಷ್ಟ್ರೀಯ ಆಟೊ ನೀತಿ ಇತರ ನೀತಿ ಮಾರ್ಗಸೂಚಿಯನ್ನು ಕೂಡ ಬಿಡುಗಡೆಮಾಡಿದ್ದು ಅದರಡಿ ಆಟೊ ಉದ್ಯಮ ಮತ್ತು ಸಾಮಾನ್ಯ ಜನರಿಗೆ ಸಂಬಂಧಪಟ್ಟ ಇತರ ನೀತಿಗಳನ್ನು ಕೂಡ ವಿವರಿಸುತ್ತದೆ. ಕೌಶಲ್ಯಾಭಿವೃದ್ಧಿ ಮೂಲಕ ಆಟೊ ಉದ್ಯಮ ಮತ್ತು ಉದ್ಯೋಗ ಸೃಷ್ಟಿಗೆ ಕೂಡ ಉತ್ತೇಜನ ನೀಡಲಿದೆ. ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಸರ್ಕಾರದ ಅಂಗಗಳ ಮೂಲಕ ಈ ಯೋಜನೆಗಳನ್ನು ಸಮನ್ವಯಪಡಿಸಿ ಪರಿಣಾಮಕಾರಿಯಾಗಿ ಜಾರಿಗೆ ತರುವ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕರಡು ಆಟೊ ನೀತಿಯ ಬಗ್ಗೆ ಸಚಿವಾಲಯಗಳಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com