ಮಾರುತಿ ಸುಜೂಕಿ ಸ್ವಿಫ್ಟ್ 2018 ಬುಕಿಂಗ್ ಪ್ರಾರಂಭ, ಆಟೋ ಎಕ್ಸ್ಪೋದಲ್ಲಿ ಬಿಡುಗಡೆ, ಹೊಸ ಕಾರಿನ ವಿಶೇಷತೆಗಳೇನು ಗೊತ್ತೇ?

ಮಾರುತಿ ಸುಜೂಕಿ ಸ್ವಿಫ್-2018 ನೂತನ ಕಾರಿನ ಬುಕಿಂಗ್ ಪ್ರಾರಂಭಗೊಂಡಿದ್ದು, ಫೆ.8 ಕ್ಕೆ ನಡೆಯಲಿರುವ ಆಟೋ ಎಕ್ಸ್ಪೋದಲ್ಲಿ ಕಾರು ಬಿಡುಗಡೆಯಾಗಲಿದೆ.
ಮಾರುತಿ ಸುಜೂಕಿ
ಮಾರುತಿ ಸುಜೂಕಿ
ನವದೆಹಲಿ: ಮಾರುತಿ ಸುಜೂಕಿ ಸ್ವಿಫ್-2018 ನೂತನ ಕಾರಿನ ಬುಕಿಂಗ್ ಪ್ರಾರಂಭಗೊಂಡಿದ್ದು, ಫೆ.8 ಕ್ಕೆ ನಡೆಯಲಿರುವ ಆಟೋ ಎಕ್ಸ್ಪೋದಲ್ಲಿ ಕಾರು ಬಿಡುಗಡೆಯಾಗಲಿದೆ. 
ಫೆ.8 ರಂದು ಬಿಡುಗಡೆಯಾಗಲಿರುವ 3ಜಿ ಸ್ವಿಫ್ಟ್, ಸ್ವಿಫ್ಟ್ ಮಾದರಿಯಲ್ಲೇ ವಿನ್ಯಾಸಗೊಂಡಿದ್ದು, ಮುಂಭಾಗದಲ್ಲಿ ಕೆಲವು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಆಗಮಿಸುತ್ತಿದೆ.
ಎಲ್ ಇಡಿ ಹೆಡ್ ಲೈಟ್, ಡಿಆರ್ ಎಲ್, ಎಲ್ ಇಡಿ ಟೇಲ್ ಲ್ಯಾಂಪ್ ಒಆರ್ ವಿಎಂ ಇಂಡಿಕೇಟರ್, ಫಾಗ್ ಲ್ಯಾಂಪ್ 15 ಇಂಚಿನ ಅಲಾಯ್ ವ್ಹೀಲ್ ಗಳು ಕಾರಿನ ವಿಶೇಷಗತೆಗಳಾಗಿರಲಿವೆ. 
ಇನ್ನು ಆಂತರಿಕ ವಿನ್ಯಾಸದಲ್ಲಿಯೂ ಸಹ ಕೆಲವು ಬದಲಾವಣೆಗಳನ್ನು ಕಾಣಬಹುದಾಗಿದ್ದು, ಟ್ವಿನ್ ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಿಎಫ್ ಟಿ ಎಂಐಡಿ ಯುನಿಟ್ ಗಳನ್ನು ನೀಡಲಾಗಿರುವುದು ಹೊಸ ಕಾರಿನ ವೈಶಿಷ್ಟ್ಯಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com