ಟೈಗರ್ 800 ಶ್ರೇಣಿಯ ಟ್ರಯುಂಫ್ ಬೈಕ್ ಗಳು ಈಗ ಭಾರತದ ಮಾರುಕಟ್ಟೆಗೆ

ಬ್ರಿಟಿಷ್ ಸೂಪರ್ ಬೈಕ್ ಉತ್ಪಾದಕ ಸಂಸ್ಥೆಯಾದ ಟ್ರಯುಂಫ್ ಮೋಟಾರ್ ಸೈಕಲ್ ಕಂಪನಿ ವಿನೂತನ ಟೈಗರ್ 800 ಶ್ರೇಣಿಯ ಟ್ರಯುಂಫ್ ಬೈಕ್ ಗಳನ್ನು ಭಾರತದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
ಟ್ರಯುಂಫ್ ಬೈಕ್
ಟ್ರಯುಂಫ್ ಬೈಕ್

ಮುಂಬೈ: ಬ್ರಿಟಿಷ್ ಸೂಪರ್ ಬೈಕ್ ಉತ್ಪಾದಕ ಸಂಸ್ಥೆಯಾದ ಟ್ರಯುಂಫ್  ಮೋಟಾರ್ ಸೈಕಲ್ ಕಂಪನಿ ವಿನೂತನ ಟೈಗರ್ 800 ಶ್ರೇಣಿಯ ಟ್ರಯುಂಫ್  ಬೈಕ್ ಗಳನ್ನು ಭಾರತದಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಇವುಗಳ ಬೆಲೆ 11.76 ಲಕ್ಷದಿಂದ 13. 76 ಲಕ್ಷ ರೂ. ಆಗಿದೆ. ಮುಂಬೈಯಲ್ಲಿ ನಾಲ್ಕು ಆವೃತ್ತಿಗಳಲ್ಲಿ ಈ ಬೈಕ್ ಗಳ ಮಾರಾಟ ನಡೆಯುತ್ತಿದೆ.

200ಕ್ಕೂ ಹೆಚ್ಚು ಮೇಲ್ದರ್ಜೇಗೇರಿಸಿದ ಎಂಜಿನ್ ಗಳನ್ನು ಈ ಬೈಕ್ ಗಳು ಹೊಂದಿದ್ದು, ಹೊಸ ಮಾದರಿಯ ಬೈಕ್ ಗಳಿಂದ ಹೆಚ್ಚು ಪ್ರತಿಸ್ಪಂದನೆ ದೊರೆಯುತ್ತಿದೆ ಎಂದು ಭಾರತದ ಟ್ರಿಂಪ್ ಮೋಟಾರು ಸೈಕಲ್ ಕಂಪನಿ ತಿಳಿಸಿದೆ.

ಈ ಮಾದರಿಯ ಬೈಕ್ ಗಳ ಕೌಶಲ್ಯ, ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಂಸ್ಥೆಯ ಇಂಜಿನಿಯರ್ ಗಳನ್ನು ಸಾಕಷ್ಟು ಶ್ರಮ ಹಾಕಿರುವುದಾಗಿ ಭಾರತದ ಟ್ರಯುಂಫ್  ಮೋಟಾರು ಸೈಕಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಮಲ್ ಸಂಬ್ಲೈ ಹೇಳಿದ್ದಾರೆ.

 ಬೈಕ್ ನ್ನು ಸುಲಭವಾಗಿ  ತಿರುಗಿಸುವ ವ್ಯವಸ್ಥೆ ಒದಗಿಸಲಾಗಿದ್ದು, ಸವಾರರು  ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ. ರಸ್ತೆಗೆ ತಕ್ಕಂತೆ ಬೈಕ್ ಚಲಾಯಿಸುವಂತೆ ತಾಂತ್ರಿಕವಾಗಿ ಮೇಲ್ದರ್ಜೇಗೇರಿಸಲಾಗಿದೆ ಎಂದು ತಿಳಿಸಿದರು.


ಎಡಗೈಯಿಂದ ಸಿಂಗಲ್ ಬಟನ್ ಒತ್ತುವ ಮೂಲಕ ಬೈಕ್ ವೇಗ ನಿಯಂತ್ರಿಸುವಂತೆ ಮೇಲ್ದರ್ಜೇಗೆರಿಸಲಾಗಿದೆ.   ಇದರಿಂದಾಗಿ  ಸವಾರರ ದಣಿವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com