2.49 ಲಕ್ಷ ರು. ಮೌಲ್ಯದ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಕಸದ ರಾಶಿಗೆ ಬಿಸಾಡಿದ ಮಾಲೀಕ!

ಪ್ರಸ್ತುತ ಯುವ ಜನತೆಗೆ ಬುಲೆಟ್ ಕ್ರೇಜ್ ಎಷ್ಟಿದೆ ಎಂದರೆ ಮನೆಯಲ್ಲಿ ಒಂದು ಬುಲೆಟ್ ಗಾಡಿ ಇಡಬೇಕು ಎಂಬ ತುಡಿತ ಹೆಚ್ಚಿರುತ್ತದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ರಸ್ತುತ ಯುವ ಜನತೆಗೆ ಬುಲೆಟ್ ಕ್ರೇಜ್ ಎಷ್ಟಿದೆ ಎಂದರೆ ಮನೆಯಲ್ಲಿ ಒಂದು ಬುಲೆಟ್ ಗಾಡಿ ಇಡಬೇಕು ಎಂಬ ತುಡಿತ ಹೆಚ್ಚಿರುತ್ತದೆ. 
ಅದೇ ರೀತಿ ರಾಯಲ್ ಎನ್ ಫೀಲ್ಡ್ ಸಂಸ್ಥೆಯು ಕ್ಲಾಸಿಕ್ 500 ಪೆಗಾಸಸ್ ಲಿಮಿಟೆಡ್ ಎಡಿಷನ್ ಬೈಕ್ ಅನ್ನು ಮಾರುಕಟ್ಟೆಗೆ ಬಿಟ್ಟಿದ್ದು ಬುಲೆಟ್ ಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದರು. ಬೈಕ್ ಖರೀದಿ ಬಳಿಕ ಇದೀಗ ಗ್ರಾಹಕರು ರಾಯಲ್ ಎನ್ ಫೀಲ್ಡ್ ಸಂಸ್ಥೆ ವಿರುದ್ಧ ಅಸಮಾಧಾನಗೊಂಡಿದ್ದಾರೆ. 
2.49 ಲಕ್ಷ ದುಬಾರಿ ಬೆಲೆ ತೆತ್ತು ಹೊಸ ಬೈಕ್ ಖರೀದಿ ಮಾಡಿದ್ರು ಬೈಕಿನಲ್ಲಿರುವ ಸುರಕ್ಷಾ ಸೌಲಭ್ಯಗಳ ಕುರಿತು ಗ್ರಾಹಕರು ಅಸಮಾಧಾನಗೊಂಡಿದ್ದಾರೆ. 
ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ ಸಿಗ್ನಲ್ಸ್ 350 ಬೈಕ್ ನಲ್ಲಿ ಎಬಿಎಸ್ ಸೇರಿದಂತೆ ಕೆಲವು ಸೌಲಭ್ಯಗಳನ್ನು ನೀಡಿದ್ದು ಅದೇ ದುಬಾರಿ ಬೆಲೆಯ ಕ್ಲಾಸಿಕ್ 500 ಪೆಗಾಸಸ್ ಬೈಕ್ ಗಳಲ್ಲಿ ಈ ಸೌಲಭ್ಯವನ್ನು ನೀಡಿಲ್ಲ ಎನ್ನುವುದೇ ಪೆಗಾಸಸ್ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. 
ಮುಂಬೈ ಮೂಲದ ಧೀರಜ್ ಜರುವಾ ಎನ್ನುವವರು ರಾಯಲ್ ಎನ್ ಫೀಲ್ಡ್ ವಿರುದ್ಧ ತಮ್ಮದೇ ಆದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಪೆಗಾಸಸ್ ಬೈಕ್ ಅನ್ನು ಕಸದ ರಾಶಿಗೆ ಬಿಸಾಡಿ ಪ್ರತಿಭಟನೆ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com