ಮತ್ತೆ ಬರಲಿದೆ ಐಕಾನಿಕ್ ಕಾರ್ ಹ್ಯುಂಡೈ ಸ್ಯಾಂಟ್ರೋ: ನಾಳೆಯಿಂದಲೇ ಆನ್ ಲೈನ್ ಬುಕಿಂಗ್ ಪ್ರಾರಂಭ

ದಕ್ಷಿಣ ಕೊರಿಯಾದ ಮೂಲದ ಹ್ಯುಂಡೈ ಕಾರು ಉತ್ಪಾದಕ ಸಂಸ್ಥೆ ತನ್ನ ಪ್ರಸಿದ್ಧ ಮಾದಿರಿಯ ಹ್ಯಾಚ್ ಬ್ಯಾಕ್ ಸ್ಯಾಂಟ್ರೋ ಕಾರನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಹ್ಯುಂಡೈ ಸ್ಯಾಂಟ್ರೋ ಹೊಸ ಮಾದರಿ
ಹ್ಯುಂಡೈ ಸ್ಯಾಂಟ್ರೋ ಹೊಸ ಮಾದರಿ
ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಾರು ಉತ್ಪಾದಕ ಸಂಸ್ಥೆ ತನ್ನ ಪ್ರಸಿದ್ಧ ಮಾದಿರಿಯ ಹ್ಯಾಚ್ ಬ್ಯಾಕ್ ಸ್ಯಾಂಟ್ರೋ ಕಾರನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. 
ಹೊಸ ಮಾದರಿಯಲ್ಲಿ ಮಾರುಕಟ್ಟೆಗೆ ಬರಲಿರುವ ಹೊಸ ಸ್ಯಾಂಟ್ರೋ ಕಾರಿಗೆ ಅ.10 ರಿಂದಲೇ ಆನ್ ಲೈನ್ ಬುಕಿಂಗ್ ಪ್ರಾರಂಭವಾಗಲಿದೆ. ತಿಂಗಳಾಂತ್ಯಕ್ಕೆ ಹೊಸ ಮಾದರಿಯ ಸ್ಯಾಂಟ್ರೋ ಕಾರು ಮಾರುಕಟ್ಟೆಗೆ ಬರಲಿದೆ. ಹಳೆಯ ಸ್ಯಾಂಟ್ರೋ ಕಾರುಗಳ ಉತ್ಪಾದನೆ ಮಾರಾಟವನ್ನು 2014 ರ ಡಿಸೆಂಬರ್ ನಲ್ಲಿ ನಿಲ್ಲಿಸಲಾಗಿತ್ತು. 
ಎಹೆಚ್2 ಎಂಬ ಕೋಡ್ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ಹೊಸ ಮಾದರಿಯ ಸ್ಯಾಂಟ್ರೋಗಾಗಿ ಹ್ಯುಂಡೈ ಸಂಸ್ಥೆ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, 4- ಸಿಲಿಂಡರ್ 1.1 ಲೀಟರ್ ಪೆಟ್ರೋಲ್ ಇಂಜಿನ್ ನ್ನು ಹೊಂದಿದ್ದು, ಎಎಂಟಿ ಹಾಗೂ ಸಿಎನ್ ಜಿ ಇಂಧನ ಆಯ್ಕೆಗಳೂ ಲಭ್ಯವಿದೆ. ಆನ್ ಲೈನ್ ಅಭಿಪ್ರಾಯ ಸಂಗ್ರಹಿಸಿದಾಗ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹೊಸ ಮಾದರಿಯಲ್ಲಿ ಸ್ಯಾಂಟ್ರೋ ಕಾರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಸಿಇಒ ವೈಕೆ ಕೂ ಹೇಳಿದ್ದಾರೆ. 
ಹಳೆಯ ಸ್ಯಾಂಟ್ರೋ ಕಾರನ್ನೇ ಹೋಲಲಿರುವ ಹೊಸ ಸ್ಯಾಂಟ್ರೋ ಕಾರಿಗೆ ಅ.10 ರಿಂದ ಬುಕಿಂಗ್ ಪ್ರಾರಂಭವಾಗಲಿದ್ದು ಮೊದಲ 50,000 ಗ್ರಾಹಕರು ಕೇವಲ 11,100 ರೂಪಾಯಿಗಳಿಗೆ ಬುಕ್ಕಿಂಗ್ ಮೊತ್ತವನ್ನು ಪಾವತಿ ಮಾಡಬೇಕಿದ್ದು ಅ.23 ರಂದು ಜಾಗತಿಕ ಮಟ್ಟದಲ್ಲಿ ಹೊಸ ಸ್ಯಾಂಟ್ರೋ ಕಾರು ಪ್ರದರ್ಶನಗೊಳ್ಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com