ಹೀರೋ ಎಲೆಕ್ಟ್ರಿಕ್ ಇಂಡಿಯಾದಿಂದ ಎರಡು ಇ-ಸ್ಕೂಟರ್ ಗಳ ಬಿಡುಗಡೆ; ಬೆಲೆ, ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ

ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ, ಅದರ ಬ್ಯಾಟರಿ ದರವನ್ನು ಕಡಿತಗೊಳಿಸುವ ನಿರೀಕ್ಷೆಯಿದೆ ಎಂದು ಹೀರೋ ಎಲೆಕ್ಟ್ರಿಕ್ ಇಂಡಿಯಾದ ಸಿಇಒ ಸೋಹಿಂದರ್ ಗಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Published: 21st August 2019 01:10 AM  |   Last Updated: 21st August 2019 01:10 AM   |  A+A-


Optima ER' and 'Nyx ER

ಆಪ್ಟಿಮಾ ಇಆರ್' ಮತ್ತು 'ಎನ್ ವೈಎಕ್ಸ್ ಇಆರ್

Posted By : Srinivas Rao BV
Source : Online Desk

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ, ಅದರ ಬ್ಯಾಟರಿ ದರವನ್ನು ಕಡಿತಗೊಳಿಸುವ ನಿರೀಕ್ಷೆಯಿದೆ ಎಂದು ಹೀರೋ ಎಲೆಕ್ಟ್ರಿಕ್ ಇಂಡಿಯಾದ ಸಿಇಒ ಸೋಹಿಂದರ್ ಗಿಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಹೀರೋ ಎಲೆಕ್ಟ್ರಿಕ್ಇಂಡಿಯಾದ 'ಆಪ್ಟಿಮಾ ಇಆರ್' ಮತ್ತು 'ಎನ್ ವೈಎಕ್ಸ್ ಇಆರ್' (ವಿಸ್ತರಿತ ಶ್ರೇಣಿ) ಇ-ಸ್ಕೂಟರ್ ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇಶದಲ್ಲೇ ಮೊದಲ ಬಾರಿಗೆ ಎರಡು ಹೆಚ್ಚು ಸಾಮರ್ಥ್ಯ ಹಾಗೂ ವೇಗ ಹೊಂದಿರುವ ಇ-ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಅತಿ ಹೆಚ್ಚು ದ್ವಿಚಕ್ರ ವಾಹನ ಚಾಲಕರಿದ್ದಾರೆ. ಆದ್ದರಿಂದ ಇಲ್ಲಿಯೇ ಮೊದಲು ತಮ್ಮ ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ನಿರ್ಧರಿಸಲಾಯಿತು ಎಂದರು. 

ವಿದ್ಯುತ್ ಚಾಲಿತ ವಾಹನಗಳು ಪರಿಸರ ಸ್ನೇಹಿಯಾಗಿದ್ದು, ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಅನುಭವ ನೀಡುತ್ತವೆ. ಸರ್ಕಾರ ಕೂಡ ಇದಕ್ಕೆ ಬೆಂಬಲ ನೀಡುತ್ತಿವೆ. ಇತರ ವಾಹನಗಳ ನೋಂದಣಿ ದರವನ್ನು ಮೂರು ಪಟ್ಟು ಹೆಚ್ಚಿಸಿರುವ ಸರ್ಕಾರ, ಇ-ವಾಹನಗಳ ನೋಂದಣಿ ಶುಲ್ಕದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜೊತೆಗೆ ಕಡಿಮೆ ಜಿಎಸ್ ಟಿ ದರವನ್ನು ನಿಗದಿಪಡಿಸಲಾಗಿದೆ ಎಂದರು. ಆದರೆ, ಸಾಕಷ್ಟು ಪ್ರಚಾರದ ನಂತರವೂ ಜನರು ಇ-ಸ್ಕೂಟರ್ ಗಳನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿಲ್ಲ. ಜನರು ಇದರ ಬ್ಯಾಟರಿಯ ಸಾಮರ್ಥ್ಯದ ಕುರಿತು ಶಂಕೆ ವ್ಯಕ್ತಪಡಿಸುತ್ತಾರೆ. ಇದಕ್ಕಾಗಿಯೇ ತಾವು ಕಳೆದೊಂದು ವರ್ಷದಿಂದ ಸಂಪೂರ್ಣವಾಗಿ ಲಿಥಿಯಂ ಬ್ಯಾಟರಿಯ ಮೊರೆ ಹೋಗಿದ್ದು, ಇದು ಕಡಿಮೆ ವೆಚ್ಚದಾಯಕದ ಜೊತೆಗೆ, ಹೆಚ್ಚು ಸಾಮರ್ಥ್ಯ ನೀಡುತ್ತದೆ. 

ಆಪ್ಟಿಮಾ ಇಆರ್ ಮತ್ತು ಎನ್ ವೈಎಕ್ಸ್ ಇಆರ್ ವಾಹನಗಳಲ್ಲಿ ಎರಡು ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 110 ಕಿಮೀಗಿಂತ ಹೆಚ್ಚು ದೂರು ಅಬಾದಿತವಾಗಿ ಚಲಿಸಬಹುದು. ಸಂಪೂರ್ಣವಾಗಿ ಚಾರ್ಜ್ ಆಗಲು 4ರಿಂದ 5 ಗಂಟೆ ಅಗತ್ಯವಿದೆ. ಬ್ಯಾಟರಿಗೆ ಮೂರು ವರ್ಷಗಳ ವಾರಂಟಿ ನೀಡಲಾಗುತ್ತದೆ. ಇವುಗಳನ್ನು ಮೊಬೈಲ್ ಚಾರ್ಜಿಂಗ್ ಮಾದರಿಯಲ್ಲೇ ಚಾರ್ಜ್ ಮಾಡಬಹುದು. ಈ ವಾಹನಗಳ ಡೀಲರ್ ಗಳಿಗೆ ಹೊಸ ಚಾರ್ಜಿಂಗ್ ಬೋರ್ಡ್ ಗಳನ್ನು ನೀಡುವುದರಿಂದ ಗ್ರಾಹಕರು ನಿರ್ದಿಷ್ಟ ಜಾಗದಲ್ಲಿ ಹಣ ನೀಡಿ ಬ್ಯಾಟರಿ ಚಾರ್ಜ್ ಮಾಡಬಹುದು. ಈ ಬ್ಯಾಟರಿಗಳನ್ನುಹೊರತೆಗೆದು ಮನೆಗಳಲ್ಲಿ ಕೂಡ ಚಾರ್ಜ್ ಮಾಡಬಹುದು. ಇದು ಬಹುಮಹಡಿ ಕಟ್ಟಡಗಳ ಗ್ರಾಹಕರಿಗೆ ನೆರವಾಗುತ್ತದೆ ಎಂದರು. 

ದಕ್ಷಿಣ ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ಕಂಪನಿಯು ಬೆಂಗಳೂರಿನಲ್ಲಿ ಹೊಸ ಕಾರ್ಪೊರೇಟ್ ಕಚೇರಿಯನ್ನು ಆರಂಭಿಸಲಿದೆ. ಜೊತೆಗೆ, ಹೊಸ ಗ್ರಾಹಕ ಟಚ್ ಪಾಯಿಂಟ್ ಗಳನ್ನು ಆರಂಭಿಸುವ ಮೂಲಕ ಇರುವ 615 ಟಚ್ ಪಾಯಿಂಟ್ ಗಳನ್ನು 2020 ರ ವೇಳೆಗೆ 1000 ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ. ಈ ಮೂಲಕ ದೇಶದ ಗ್ರಾಮೀಣ ಪ್ರದೇಶಗಳಲ್ಲಿಯೂ ಬ್ರ್ಯಾಂಡ್ ಲಭ್ಯವಾಗುವಂತೆ ಮಾಡಲು ಯೋಜನೆ ರೂಪಿಸಿದೆ. ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ ಕಂಪನಿಯು ಇ-ಸ್ಕೂಟರ್ ಉತ್ಪಾದನೆ ಪ್ರಮಾಣವನ್ನು ವಾರ್ಷಿಕ 5 ಲಕ್ಷ ಸ್ಕೂಟರ್ ಉತ್ಪಾದನೆಗೆ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸಿದೆ ಎಂದರು. 

ಭಾರತದಲ್ಲಿ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನಗಳ ತಯಾರಿಕಾ ಸಂಸ್ಥೆಯಾಗಿರುವ ಹೀರೋ ಎಲೆಕ್ಟ್ರಿಕ್, ದೇಶದಲ್ಲಿ ಎಲೆಕ್ಟ್ರಿಕ್ ಸಾರಿಗೆಯನ್ನು ಉತ್ತೇಜಿಸುವುದು ಮತ್ತು ಅಳವಡಿಕೆಯತ್ತ ದೂರದೃಷ್ಟಿ ಹೊಂದಿರುವ ಸರ್ಕಾರಕ್ಕೆ ಬೆಂಬಲವನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಕಂಪನಿಯು ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೆ ಪೂರಕವಾದ ಸಂಶೋಧನೆ ನಡೆಸುವ ಸಂಬಂಧ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಂಡವಾಳ ಹೂಡುತ್ತಿದೆ. ಈ ಮೂಲಕ ಐಸ್ ವಾಹನಗಳಿಗೆ ಪರ್ಯಾಯ ವಾಹನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಿದೆ. ಹೀರೋ ಎಲೆಕ್ಟ್ರಿಕ್ ನ ಈ ಹೈಸ್ಪೀಡ್ ವಾಹನಗಳು ಎಫ್ ಎಎಂಇ II ಪ್ರಯೋಜನಗಳನ್ನು ಪಡೆಯಲು ಅರ್ಹತೆ ಹೊಂದಿವೆ ಮತ್ತು ಕಡಿಮೆ ಜಿಎಸ್ ಟಿ ದರವನ್ನು ಹೊಂದಿವೆ. ಇದರಿಂದ ಗ್ರಾಹಕರು ಹೀರೋ ಎಲೆಕ್ಟ್ರಿಕ್ ವಾಹನಗಳನ್ನು ಆಕರ್ಷಕ ಮತ್ತು ಕೈಗೆಟುಕುವ ದರಲ್ಲಿ ಪಡೆಯಬಹುದಾಗಿದೆ ಎಂದರು. ಈ ವಾಹನಗಳು ದೇಶದ ಎಲ್ಲಾ ಹೀರೋ ಎಲೆಕ್ಟ್ರಿಕ್ ಡೀಲರ್ ಶಿಪ್ ಗಳಲ್ಲಿ ಲಭ್ಯವಿವೆ. ಇವುಗಳ ಬೆಲೆ ಕ್ರಮವಾಗಿ 68,721 ರೂ. ಮತ್ತು 69,754 ರೂ.ಗಳಾಗಿವೆ(ಎಕ್ಸ್ ಶೋರೂಂ ಬೆಲೆ).

Stay up to date on all the latest ಪ್ರವಾಸ-ವಾಹನ news with The Kannadaprabha App. Download now
facebook twitter whatsapp