ಮೈಸೂರು ಪ್ರವಾಸೋದ್ಯಕ್ಕೆ ಹೊಡೆತ ನೀಡಿದ ಸಿಎಎ ಪ್ರತಿಭಟನೆ!

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಿಂದ ಮೈಸೂರಿನ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. 
ಮೈಸೂರು ಅರಮನೆ
ಮೈಸೂರು ಅರಮನೆ

ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಿಂದ ಮೈಸೂರಿನ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. 
  
ಅತಿ ಹೆಚ್ಚು ಪ್ರವಾಸಿಗರು ನಗರಕ್ಕೆ ಆಗಮಿಸುವ ಮೈಸೂರು ನಗರ  ಬಾರಿ ಅತಿ ಕಡಿಮೆ ಜನರನ್ನು ಕಂಡಿದೆ. ಈ ತಿಂಗಳಲ್ಲಿ ಬಹುತೇಕ ಹೋಟೆಲ್, ರೆಸಾರ್ಟ್ ತುಂಬಿರುತ್ತಿದ್ದವು. ಕ್ರಿಸ್ ಮಸ್ ಹಬ್ಬದಿಂದ ಹೊಸ ವರ್ಷದವರೆಗೆ ಕಿಕ್ಕಿರಿದ ಪ್ರವಾಸಿಗರು ನಗರಕ್ಕೆ ಆಗಮಿಸುತ್ತಿದ್ದರು.  ಆದರೆ, ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. 
  
ಅರಮನೆ ನಿರ್ವಹಣಾ ಮಂಡಳಿಯ ಅಧಿಕಾರಿಗಳ ಪ್ರಕಾರ ಪ್ರವಾಸಿಗರ ಸಂಖ್ಯೆಯಲ್ಲಿ ಅಂತಹ ವ್ಯತ್ಯಾಸವೇನೂ ಆಗಿಲ್ಲ. ಆದರೆ, ಖಾಸಗಿ ಹೋಟೆಲ್, ರೆಸಾರ್ಟ್ ಮಾಲೀಕರ ಪ್ರಕಾರ ಶೇ. 20ರಷ್ಟು ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. 

ಈ ಕುರಿತು ಯುಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ, ಸಾಮಾನ್ಯವಾಗಿ ಡಿಸೆಂಬರ್ 2ನೇ ವಾರದಿಂದ ಜನವರಿ ಮೊದಲನೇ ವಾರದವರೆಗೂ ಹೋಟೆಲ್ ಗಳು ತುಂಬಿರುತ್ತಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಸಿಎಎ ವಿರೋಧಿ ಪ್ರತಿಭಟನೆ ಮುಂದುವರಿದಲ್ಲಿ ಅದು ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ. 
  
2018ರ ಡಿಸೆಂಬರ್ ನಲ್ಲಿ ಮೈಸೂರು ಅರಮನೆಗೆ 4.8 ಲಕ್ಷ ಜನರು ಆಗಮಿಸಿದ್ದರು. ಆದರೆ, ಈ ವರ್ಷ ಅದು 2.26ಕ್ಕಿಳಿದಿದೆ. 
 
ಸಾಮಾನ್ಯವಾಗಿ ಮೈಸೂರಿಗೆ ವಾರ್ಷಿಕ 3.5 ಮಿಲಿಯನ್ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದ ಪ್ರತ್ಯಕ್ಞ ಹಾಗೂ ಪರೋಕ್ಷವಾಗಿ 80 ಸಾವಿರ ಜನರಿಗೆ ಉದ್ಯೋಗ ದೊರೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com