ನವೀಕೃತ ವಿನ್ಯಾಸದಲ್ಲಿ ಸುಝುಕಿ ಸ್ಕೂಟರ್ ಬಿಡುಗಡೆ; ಆಕ್ಸೆಸ್ 125 ಬೆಲೆ 61,788 ರೂ.

ಸುಝುಕಿ ಮೋಟಾರ್ ಸೈಕಲ್ ನ ಆಕ್ಸೆಸ್ 125ನ ನೂತನ ಮಾದರಿ ಬಿಡುಗಡೆಯಾಗಿದೆ. ದೆಹಲಿಯಲ್ಲಿ ...

Published: 17th July 2019 12:00 PM  |   Last Updated: 17th July 2019 02:00 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : PTI
ನವದೆಹಲಿ: ಸುಝುಕಿ ಮೋಟಾರ್ ಸೈಕಲ್ ನ ಆಕ್ಸೆಸ್ 125ನ ನೂತನ ಮಾದರಿ ಬಿಡುಗಡೆಯಾಗಿದೆ. ದೆಹಲಿಯಲ್ಲಿ ಅದರ ಶೋರೂಂ ಬೆಲೆ 61, 788 ರೂಪಾಯಿಗಳಾಗಿದೆ.

ಹೊಸ ಆವೃತ್ತಿಯು ಕಪ್ಪು ಬಣ್ಣದ ಲೋಹಮಿಶ್ರಿತ ಚಕ್ರ, ಬೀಜ್ ಬಣ್ಣದ ಚರ್ಮದ ಸೀಟು,  ದುಂಡಗಿನ ಆಕಾರದ ಕ್ರೋಮ್ ಕನ್ನಡಿಗಳು ನೂತನ ಮಾದರಿಯ ಸ್ಕೂಟರ್ ನಲ್ಲಿ ಇರುತ್ತದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಕೂಟರ್ ನಲ್ಲಿ ಸವಾರಿ ಮಾಡುತ್ತಿರುವಾಗ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಡಿಸಿ ಸಾಕೆಟ್ ಗಳನ್ನು ಒದಗಿಸಲಾಗಿದೆ. 

ಸುಝುಕಿ ಕಂಪೆನಿಯ ಸ್ಕೂಟರ್ ನಲ್ಲಿ ಆಕ್ಸೆಸ್ 124 ಮಾದರಿ ಜನಪ್ರಿಯವಾಗಿದ್ದು ಗ್ರಾಹಕರ ಬೇಡಿಕೆಗಳಿಗನುಗುಣವಾಗಿ ಇನ್ನಷ್ಟು ಗ್ರಾಹಕ ಸ್ನೇಹಿಯಾಗಿಸಲು ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ ಎಂದು ಕಂಪೆನಿಯ ಉಪಾಧ್ಯಕ್ಷ ದೇವಶಿಶ್ ಹೊಂಡಾ ತಿಳಿಸಿದ್ದಾರೆ. 

ಸುಝುಕಿ 124ಸಿಸಿ, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಶಕ್ತಿ, ವಿನ್ಯಾಸ ಮತ್ತು ಸವಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಉತ್ತಮ ಮೈಲೇಜ್ ಕೊಡುತ್ತದೆ ಎಂದರು.
Stay up to date on all the latest ಪ್ರವಾಸ-ವಾಹನ news with The Kannadaprabha App. Download now
facebook twitter whatsapp