ರಾಜ್ಯದ 9 ಹೊಸ ಪರಿಸರ ಸ್ನೇಹಿ ಚಾರಣ ತಾಣಗಳು ಸದ್ಯದಲ್ಲಿಯೇ ಪ್ರವಾಸಿಗರಿಗೆ ಮುಕ್ತ

ಚಾರಣ ಪ್ರಿಯರು ಇನ್ನು ಮುಂದೆ ಹೊಸ ಹೊಸ ಸ್ಥಳಗಳನ್ನು ಚಾರಣಕ್ಕೆ ಹುಡುಕಬಹುದು. ರಾಜ್ಯ ಸರ್ಕಾರ...
ಚಾರಣ ಸ್ಥಳ ಅವಲಬೆಟ್ಟ
ಚಾರಣ ಸ್ಥಳ ಅವಲಬೆಟ್ಟ
ಬೆಂಗಳೂರು: ಚಾರಣ ಪ್ರಿಯರು ಇನ್ನು ಮುಂದೆ ಹೊಸ ಹೊಸ ಸ್ಥಳಗಳನ್ನು ಚಾರಣಕ್ಕೆ ಹುಡುಕಬಹುದು. ರಾಜ್ಯ ಸರ್ಕಾರ 2017ರಲ್ಲಿ ಪ್ರಾರಂಭಿಸಿದ 7 ಪರಿಸರ ಸ್ನೇಹಿ ಚಾರಣಗಳು ಟ್ರಕ್ಕಿಂಗ್ ಪ್ರಿಯರಿಗೆ ಇಷ್ಟವಾಗಬಹುದು. ಕರ್ನಾಟಕ ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅರಣ್ಯ ಇಲಾಖೆಯ ಜೊತೆ ಸೇರಿ ಪಶ್ಚಿಮ ಘಟ್ಟಗಳಲ್ಲಿ ಟ್ರಕ್ಕಿಂಗ್ ಗೆ ಇನ್ನಷ್ಟು ಕಾಲುದಾರಿಗಳನ್ನು ಗುರುತಿಸುತ್ತಿದೆ.
ಕೊಡಗು ಜಿಲ್ಲೆಯ ಮಡಿಕೇರಿಯ ಟಡಿಯಂಡಮೊಲ್ ನಲ್ಲಿ ಒಂದು ಚಾರಣವನ್ನು, ಕೊಪ್ಪಳ ಜಿಲ್ಲೆಯಲ್ಲಿ ಮೂರು, ಹಂಪಿಯಲ್ಲಿ ಒಂದು, ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದಲ್ಲಿ ನಾಲ್ಕು ಪ್ರವಾಸಿ ಚಾರಣ ಸ್ಥಳಗಳನ್ನು ಪ್ರವಾಸೋದ್ಯಮ ಇಲಾಖೆ ಗುರುತಿಸಿದೆ. ಪಶ್ಚಿಮ ಘಟ್ಟಗಳಲ್ಲಿ ಪ್ರತಿ ಚಾರಣಕ್ಕೆ ನಾವು ಒಬ್ಬರಿಗೆ 250 ರೂಪಾಯಿ ದರ ವಿಧಿಸುತ್ತಿದ್ದು ಅದು 500 ರೂಪಾಯಿಗೆ ಹೆಚ್ಚಾಗುವ ಸಾಧ್ಯತೆಯಿದೆ ಎಂದರು ಅರಣ್ಯ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಬಿ ಆರ್ ರಮೇಶ್.
ಆಗಸ್ಟ್ ನಲ್ಲಿ ಹೊಸ ಚಾರಣ ಕಾಲುದಾರಿಗಳು ಪ್ರವಾಸಿಗರಿಗೆ ಚಾರಣಕ್ಕೆ ಮುಕ್ತವಾಗಲಿದೆ. ಇತ್ತೀಚೆಗೆ ಪ್ರವಾಸೋದ್ಯಮ ಇಲಾಖೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎತ್ತಿನಭುಜ ಕಾಲುದಾರಿಯನ್ನು ಚಾರಣಪ್ರಿಯರಿಗೆ ಅನುಕೂಲವಾದ ದಾರಿ ಎಂದು ಅಧಿಸೂಚನೆ ಹೊರಡಿಸಿತ್ತು. ಇಕೊಟ್ರಿಪ್ ವೆಬ್ ಸೈಟ್ ನಲ್ಲಿ ಇದರ ಬುಕ್ಕಿಂಗ್ ಆರಂಭವಾಗಿದೆ.
ಪ್ರಕೃತಿ ಗೈಡ್ ಗಳನ್ನು ನೇಮಕ ಮಾಡಿಕೊಳ್ಳಲು ಸ್ಥಳೀಯರಿಗೆ ತರಬೇತಿ ನೀಡಲಾಗುತ್ತಿದೆ. ಮಾಕಳಿದುರ್ಗ, ಅವಲಬೆಟ್ಟ, ಸ್ಕಂದಗಿರಿ, ಬಿದರಕಟ್ಟೆ, ಸಾವನದುರ್ಗ, ದೇವರಾಯನದುರ್ಗ ಮತ್ತು ಸಿದ್ದರಬೆಟ್ಟ ಕಾಲುದಾರಿಗಳನ್ನು ಚಾರಣಗಳಿಗೆ ಪ್ರವಾಸಿಗರಿಗೆ ಮುಕ್ತ ಮಾಡಿಕೊಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com