ಕೊರೋನಾ ವೈರಸ್ ಲಾಕ್ ಡೌನ್ ಎಫೆಕ್ಟ್: ಇತಿಹಾಸದಲ್ಲೇ ಮೊದಲ ಬಾರಿಗೆ ಶೂನ್ಯ ಮಾರಾಟ ದಾಖಲಿಸಿದ ಮಾರುತಿ ಸುಜುಕಿ!

ದೇಶದ ಖ್ಯಾತ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶೂನ್ಯ ಮಾರಾಟ ದಾಖಲಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದ ಖ್ಯಾತ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶೂನ್ಯ ಮಾರಾಟ ದಾಖಲಿಸಿದೆ.

ಹೌದು.. ಮಾರಕ ಕೊರೋನಾ ವೈರಸ್ ನಿಂದಾಗಿ ದೇಶದಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಿಂದಾಗಿ ದೇಶದ ಬಹುತೇಕ ಆರ್ಥಿಕ ವಲಯಗಳು ನೆಲಕಚ್ಚಿದ್ದು, ದೇಶದಲ್ಲಿ ದಶಕಗಳ ಇತಿಹಾಸ ಹೊಂದಿರುವ ಖ್ಯಾತ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇದೇ ಮೊದಲ ಬಾರಿಗೆ ಶೂನ್ಯ  ಮಾರಾಟ ದಾಖಲಿಸಿದೆ.

ಆಟೋಮೊಬೈಲ್ ತಯಾರಕ ದಿಗ್ಗಜ ಮಾರುತಿ ಸುಜುಕಿ ಮೊಟ್ಟಮೊದಲ ಬಾರಿಗೆ ತನ್ನ ತಿಂಗಳ ಮಾರಾಟ ಶೂನ್ಯಕ್ಕೆ ಕುಸಿದಿದೆ. ಕೊರೋನಾ ವೈರಸ್ ಹರಡುವುದನ್ನು ನಿಗ್ರಹಿಸಲು, ಸರ್ಕಾರ ಜಾರಿಗೊಳಿಸಿರುವ ದೇಶವ್ಯಾಪ್ತಿ ಲಾಕ್ ಡೌನ್ ಕಾರಣದಿಂದ ಒಂದೇ ಒಂದೇ ವಾಹನವೂ  ಮಾರಾಟವಾಗಿಲ್ಲ ಎಂದು ಮಾರುತಿ ಸುಜುಕಿ ಸಂಸ್ಥೆ ತಿಳಿಸಿದೆ.

ಸರ್ಕಾರದ ನಿಬಂಧನೆಗಳಿಗೆ ಅನುಗುಣವಾಗಿ ಮಾರುತಿ ಉತ್ಫಾದನೆ ಸ್ಥಗಿತಗೊಳಿಸುವ ಜೊತೆಗೆ, ಸಂಸ್ಥೆಯ ಷೋರೂಂ ಗಳನ್ನು ಬಂದ್ ಮಾಡಲಾಗಿದೆ. ಮಾರ್ಚ್ 2019ಕ್ಕೆ ಹೋಲಿಸಿದರೆ, ಈ ವರ್ಷದ ಮಾರ್ಚ್ ತಿಂಗಳಲ್ಲಿ ಕಾರುಗಳ ಮಾರಾಟ ತೀವ್ರ ರೀತಿಯ ಕುಸಿತ ಕಂಡು ಬಂದಿತ್ತು. ಈ  ಪರಿಣಾಮಗಳನ್ನು ಸಂಸ್ಥೆ ಮೊದಲೇ ಊಹಿಸಿತ್ತು ಎಂದು ಮೂಲಗಳು ಹೇಳಿವೆ. ದೇಶದಲ್ಲಿ ಕಾರುಗಳ ತಯಾರಿಕೆಯಲ್ಲಿ ಮಾರುತಿ ಸುಜುಕಿ ಅಗ್ರಸ್ಥಾನದಲ್ಲಿದೆ. ಪ್ರತಿವರ್ಷ 1, 50, 000 ಕಾರುಗಳನ್ನು ಉತ್ಪಾದಿಸುವ ಮೂಲಕ ಮಾರುತಿ ದೇಶದಲ್ಲಿಯೇ ಅತಿದೊಡ್ಡ ಕಾರು ತಯಾರಿಕಾ  ಸಂಸ್ಥೆಯಾಗಿ ತನ್ನ ಸ್ಥಾನ ಉಳಿಸಿಕೊಂಡಿದೆ. ಅಲ್ಲದೆ ವಾಹನಗಳ ರಫ್ತಿನಲ್ಲೂ ಸಂಸ್ಥೆ ಮೊದಲ ಸ್ಥಾನದಲ್ಲಿದೆ. ಎಲ್ಲಾ ಭದ್ರತಾ ಪ್ರಮಾಣಗಳನ್ನು ತಯಾರಿಕೆಯಲ್ಲಿ ಅಳವಡಿಸಿಕೊಂಡು ಎಪ್ರಿಲ್ ತಿಂಗಳ ಮುನ್ನ 632 ವಾಹನಗಳನ್ನು ರಪ್ತು ಮಾಡಿದೆ ಎಂದು ಸಂಸ್ಥೆ ಹೇಳಿದೆ.

ಹರಿಯಾಣದ ಮನೆಸಾರ್ ನಲ್ಲಿರುವ ಮಾರುತಿ ಸುಜಕಿ ಕಾರ್ಖಾನೆಯನ್ನು ತೆರೆಯಲು ಏಪ್ರಿಲ್ ತಿಂಗಳ ಕೊನೆಯಲ್ಲಿ ಸಂಸ್ಥೆಗೆ ಅನುಮತಿ ಲಭಿಸಿದೆ. ಆದರೆ, ಪ್ರಸ್ತುತ ಅದನ್ನು ಕೇವಲ ಪ್ರಾಥಮಿಕ ನಿರ್ವಹಣೆಗಾಗಿ ತೆರೆಯಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಕಾರಿಗೆ ಸಂಬಂಧಿಸಿದ ಎಲ್ಲ ಭಾಗಗಳು  ಲಭ್ಯವಾಗದ ಕಾರಣ ಕಾರು ತಯಾರಿಕೆ ಸಾಧ್ಯವಾಗದು. ಕಾರ್ಖಾನೆಯಲ್ಲಿ ತಕ್ಷಣವೇ ಉತ್ಪಾದನೆ ಆರಂಭಿಸಲು ಸಾಧ್ಯವಾಗದು ಎಂದು ಸಂಸ್ಥೆಯ ಅಧ್ಯಕ್ಷ ಆರ್.ಸಿ. ಭಾರ್ಗವ ತಿಳಿಸಿದ್ದಾರೆ. ಜೊತೆಗೆ ಮೇ ತಿಂಗಳಲ್ಲಿ ಮಾರುತಿ ಸುಜುಕಿ ಕಾರ್ಖಾನೆಗಳಲ್ಲಿ ಸೀಮಿತವಾಗಿ ಉತ್ಪತ್ತಿ  ಆರಂಭವಾಗಬಹುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com