ಭಾರತದ ಹಳೆಯ ಮತ್ತು ದೊಡ್ಡ ಹಾರ್ಸ್ ಫಾರ್ಮ್‌ ನಮ್ಮ ರಾಜ್ಯದಲ್ಲೇ ಇದೆ ಗೊತ್ತೇ! ವಿಡಿಯೋ

ನಿಮಗೆ ಗೊತ್ತೇ? ಭಾರತದ ಹಳೆಯ ಮತ್ತು ದೊಡ್ಡ ಹಾರ್ಸ್ ಫಾರ್ಮ್‌ ನಮ್ಮ ರಾಜ್ಯದಲ್ಲೇ ಇದೆ.

Published: 16th December 2020 12:19 PM  |   Last Updated: 16th December 2020 12:22 PM   |  A+A-


Kunigal stud farm

ಕುಣಿಗಲ್ ಸ್ಟಡ್ ಫಾರ್ಮ್

Posted By : Prasad SN
Source : Online Desk

ನಿಮಗೆ ಗೊತ್ತೇ? ಭಾರತದ ಹಳೆಯ ಮತ್ತು ದೊಡ್ಡ ಹಾರ್ಸ್ ಫಾರ್ಮ್‌ ನಮ್ಮ ರಾಜ್ಯದಲ್ಲೇ ಇದೆ.

1790 ರ ದಶಕದಲ್ಲಿ, ಬೆಂಗಳೂರು ನಗರದಿಂದ ಸುಮಾರು 72 ಕಿ.ಮೀ. ದೂರದಲ್ಲಿ, ಟಿಪ್ಪು ಸುಲ್ತಾನ್ ತನ್ನದೇ ಆದ ಕುದುರೆ ಸಂತಾನೋತ್ಪತ್ತಿ ಕೇಂದ್ರವನ್ನು ಸ್ಥಾಪಿಸಿದ. ಇಂದು, ಆ ಮೂಲ ಸಂತಾನೋತ್ಪತ್ತಿ ಕೇಂದ್ರವನ್ನು ಕುಣಿಗಲ್ ಸ್ಟಡ್ ಫಾರ್ಮ್ ಆಗಿ ವಿಸ್ತರಿಸಲಾಗಿದೆ. ಇದು ಆಗ್ನೇಯ ಏಷ್ಯಾದ ಅತಿದೊಡ್ಡ ಮತ್ತು ದೇಶದ ಟಾಪ್ ಐದು ಹಾರ್ಸ್ ಫಾರ್ಮ್‌ ಗಳಲ್ಲಿ ಒಂದಾಗಿದೆ.

ಕುಣಿಗಲ್ ಸ್ಟಡ್ ಫಾರ್ಮ್ ಎಂದೇ ಜನಪ್ರಿಯವಾಗಿರುವ ಇದನ್ನು 1992 ರಲ್ಲಿ ಕರ್ನಾಟಕ ಸರ್ಕಾರವು ಕೈಗಾರಿಕೋದ್ಯಮಿ ವಿಜಯ್ ಮಲ್ಯ ಅವರ ರೇಸ್ ಹಾರ್ಸ್ ವಿಭಾಗಕ್ಕೆ ಗುತ್ತಿಗೆ ನೀಡಿದಾಗ, ಈ ಫಾರ್ಮ್ ಅನ್ನು ಯುನೈಟೆಡ್ ರೇಸಿಂಗ್ ಮತ್ತು ಬ್ಲಡ್‏ಸ್ಟಾಕ್ ಬ್ರೀಡರ್ಸ್ ಅಥವಾ ಯುಆರ್‏ಬಿಬಿ ಎಂದು ಹೆಸರಿಸಲಾಯಿತು. 

ಇದರ ಇತಿಹಾಸವನ್ನು ನೋಡಿದರೆ, 18 ನೇ ಶತಮಾನದಲ್ಲಿ ದಕ್ಷಿಣ ಭಾರತದ ಮೈಸೂರು ಸಾಮ್ರಾಜ್ಯದ ಸುಲ್ತಾನನಾದ ಹೈದರ್ ಅಲಿ ಈ ಫಾರ್ಮ್ ಸ್ಥಾಪಿಸಿದ್ದನು ಎಂದು ನಂಬಲಾಗಿದೆ. ಆದರೆ ಈ ಕುರಿತು ಯಾವುದೇ ದಾಖಲೆಗಳು ಅಸ್ತಿತ್ವದಲ್ಲಿಲ್ಲದ ಕಾರಣ, ಇತಿಹಾಸಕಾರರ ಒಮ್ಮತದ ಅಭಿಪ್ರಾಯವೆಂದರೆ, ಹೈದರ್ ಅಲಿಯ ಮಗ, ಶ್ರೀರಂಗಪಟ್ಟಣದ ಆಡಳಿತಗಾರನಾದ ಟಿಪ್ಪು ಸುಲ್ತಾನ್ ಅವರು ಈ ಫಾರ್ಮ್ ಅನ್ನು ಪ್ರಾರಂಭಿಸಿದರು ಮತ್ತು 1790 ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಅಶ್ವಸೈನ್ಯಕ್ಕಾಗಿ ಕುದುರೆಗಳನ್ನು ಸಾಕಲು ಬಳಸಿದರು.

ಟಿಪ್ಪು ಸುಲ್ತಾನ್ ಸಾವಿನ ನಂತರ, ಬ್ರಿಟಿಷ್ ಸೈನ್ಯವು ಅಧಿಕಾರ ವಹಿಸಿಕೊಂಡಿತು. ತಮ್ಮ ರೆಜಿಮೆಂಟ್‌ಗಳಿಗೆ ಕುದುರೆಗಳನ್ನು ಸಾಕಲು ಈ ಫಾರ್ಮ್ ಅನ್ನು ಬಳಸಲಾಗುತ್ತಿತ್ತು. ತರುವಾಯ, ಕುದುರೆಗಳನ್ನು ರೇಸ್ ಗಾಗಿ ಬೆಳೆಸಲಾಯಿತು.  ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುವ ಕುದುರೆಗಳ ಪ್ರಾಬಲ್ಯಕ್ಕೆ ಈ ಕುದುರೆಗಳು ಸಡ್ಡು ಹೊಡೆಯಲು ಪ್ರಾರಂಭಿಸಿದವು. 

ನಂತರ ಇದನ್ನು 1948 ರಲ್ಲಿ ಮೈಸೂರು ರಾಜ್ಯ ಸರ್ಕಾರಕ್ಕೆ ವರ್ಗಾಯಿಸುವುದಕ್ಕೆ ಮೊದಲು ಮೈಸೂರು ಸಾಮ್ರಾಜ್ಯದ ಮಿಲಿಟರಿ ಇಲಾಖೆಗೆ ವರ್ಗಾಯಿಸಲಾಯಿತು.

"ಟಿಪ್ಪು ಸುಲ್ತಾನ್ ಯಾವ ವೈಜ್ಞಾನಿಕ ವಿಧಾನಗಳನ್ನು ಬಳಸಿದ್ದರೆಂದು ನನಗೆ ತಿಳಿದಿಲ್ಲ, ಆದರೆ ಈ ಮಣ್ಣು ಮತ್ತು ಹುಲ್ಲಿನಲ್ಲಿ ಇರುವ ಏನೋ ವಿಶೇಷತೆಯಿಂದ ಕುದುರೆಗಳು ಇಲ್ಲಿ ಚೆನ್ನಾಗಿ ಬೆಳೆಯುತ್ತವೆ ಎಂದು ತೋರುತ್ತದೆ" ಎಂದು ಸ್ಟಡ್ ಮ್ಯಾನೇಜರ್ ಡಾ. ದಿನೇಶ್ ಹೇಳುತ್ತಾರೆ.

ಫಾರ್ಮ್ ಪ್ರವೇಶಿಸಲು ನಿಮಗೆ ವಿಶೇಷ ಅನುಮತಿ ಬೇಕಾಗುತ್ತದೆ. ನೀವು ಕುದುರೆಗಳನ್ನು ಖರೀದಿಸುವವರು, ಅಥವಾ ಮಾಲೀಕರು ಅಥವಾ ವೆಟ್ಸ್ ಅಥವಾ ಆ ಫಾರ್ಮ್ ನ ಕುದುರೆಯ ತರಬೇತುದಾರರಾಗಿರಬೇಕು. ಸ್ಟಡ್ ಫಾರ್ಮ್‌ಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.

ಮಾಹಿತಿ-ವಿಡಿಯೋ: ಪಿ. ಸುರೇಶ್ ಕುಮಾರ್

Stay up to date on all the latest ಪ್ರವಾಸ-ವಾಹನ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp