ಇ-ಬೈಕ್-ಗೋ ಜೊತೆ ಹಿರೋ ಎಲೆಕ್ಟ್ರಿಕ್ ಪಾಲುದಾರಿಕೆ: ಬೆಂಗಳೂರಿನ ಜನತೆಗೆ ಇದರಿಂದಾಗುವ ಲಾಭವೇನು ಗೊತ್ತೇ?

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸಂಸ್ಥೆ ಹಿರೋ ಎಲೆಕ್ಟ್ರಿಕ್ ಅಮೃತ್ ಸರ ಮೂಲದ ಈಗ ಮುಂಬೈ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ ಅಪ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ.
ಇ-ಬೈಕ್-ಗೋ ಜೊತೆಗೆ ಹಿರೋ ಎಲೆಕ್ಟ್ರಿಕ್  ಪಾಲುದಾರಿಕೆಗೆ: ಬೆಂಗಳೂರಿನ ಜನತೆಗೆ ಇದರಿಂದಾಗುವ ಲಾಭವೇನು ಗೊತ್ತೇ?
ಇ-ಬೈಕ್-ಗೋ ಜೊತೆಗೆ ಹಿರೋ ಎಲೆಕ್ಟ್ರಿಕ್  ಪಾಲುದಾರಿಕೆಗೆ: ಬೆಂಗಳೂರಿನ ಜನತೆಗೆ ಇದರಿಂದಾಗುವ ಲಾಭವೇನು ಗೊತ್ತೇ?

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸಂಸ್ಥೆ ಹಿರೋ ಎಲೆಕ್ಟ್ರಿಕ್ ಅಮೃತ್ ಸರ ಮೂಲದ ಈಗ ಮುಂಬೈ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ ಅಪ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ.
 
ಇವಿ ಟೆಕ್ನಾಲಜಿ ಹಾಗೂ ಐಒಟಿ ಸಕ್ರಿಯ ಕಾರ್ಯಾಚರಣೆಯಲ್ಲಿ ನೈಪುಣ್ಯತೆಯ ಮೂಲಕ ಸರಕು ಸಾಗಣಿಗೆಯನ್ನು ಪೆಟ್ರೋಲ್ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ವರ್ಗಾಯಿಸುವುದಕ್ಕೆ ಈ ಪಾಲುದಾರಿಕೆ ಸಹಕಾರಿಯಾಗಲಿದೆ 

ಹಿರೋ ಎಲೆಕ್ಟ್ರಿಕ್ 1,000 ಬೈಕ್ ಗಳ ಪೈಕಿ ಈಗಾಗಲೇ 120 ವಿದ್ಯುತ್ ಚಾಲಿತ ಬೈಕ್ ಗಳನ್ನು ಪೂರೈಸಿದೆ. ಸರಕು ಸಾಗಾಣಿಗೆ ವಿಭಾಗದಲ್ಲಿ ಅಷ್ಟೇ ಅಲ್ಲದೇ ಮುಂಬೈ, ಬೆಂಗಳೂರು, ದೆಹಲಿ, ಹೈದರಾಬಾದ್ ಅಮೃತ್ ಸರ, ಜೈಪುರಗಳಲ್ಲಿ ಸಾರ್ವಜನಿಕರಿಗೆ ಮಾಸಿಕ ಬಾಡಿಗೆ ಆಧಾರದಲ್ಲಿಯೂ ಹಿರೋ ವಿದ್ಯುತ್ ಚಾಲಿತ ವಾಹನಗಳನ್ನು ಇ ಬೈಕ್ ಗೋ ಸಂಸ್ಥೆ ನಿಯೋಜಿಸುತ್ತಿದೆ. 

ಹಿರೋ ಎಲೆಟ್ರಿಕ್ಸ್ ಇತ್ತೀಚೆಗಷ್ಟೇ ಸಿಟಿ ಸ್ಪೀಡ್ ಆವೃತ್ತಿಯಲ್ಲಿ Nyx-HX ವಾಹನವನ್ನು ಬಿಡುಗಡೆ ಮಾಡಿತ್ತು. ಈ ಮಾದರಿಯ ವಾಹನಗಳು ಕಡಿಮೆ ಖರ್ಚಿನ ನಿರ್ವಹಣೆಯದ್ದಾಗಿದ್ದು, ಹೆಚ್ಚು ಲೋಡ್ ಕೊಂಡೊಯ್ಯುವ ಸಾಮರ್ಥ್ಯವಿದೆ. ಅಷ್ಟೇ ಅಲ್ಲದೇ ಒಂದು ನಗರದಿಂದ ಮತ್ತೊಂದು ನಗರಕ್ಕೆ ಸುಲಭವಾಗಿ ಸಂಚರಿಸುವ ಸಾಮರ್ಥ್ಯ ಮೊದಲಾದ ಹಲವಾರು   ಗ್ರಾಹಕರಿಗೆ ಉಪಯುಕ್ತವಾಗುವ ವೈಶಿಷ್ಟ್ಯಗಳು ಲಭ್ಯವಿದೆ. 

ಇ ಬೈಕ್ ಗೋ ಎಲ್ಒಟಿ ಚಾಲಿತ ಮೊಬಿಲಿಟಿ ಸೊಲ್ಯೂಷನ್ ನ್ನು ನೀಡುತ್ತಿದ್ದು, ಚಂದಾದಾರಿಕೆ ಆಧಾರದಲ್ಲಿ ಮುಂಬೈ, ಬೆಂಗಳೂರು, ದೆಹಲಿ ಅಮೃತ್ ಸರ್ ಹಾಗೂ ಜೈಪುರ್ ಗಳಲ್ಲಿ ಗ್ರಾಹಕರಿಗೆ ಸೌಲಭ್ಯ ಒದಗಿಸುತ್ತಿದೆ. ಎಲ್ಒಟಿ ಚಾಲಿತ ವಾಹನಗಳು ಎರಡು ಗಂಟೆ ಚಾರ್ಜ್ ಮಾಡಿದರೆ ಗಂಟೆಗೆ 55/ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಮಾಲಿನ್ಯ ರಹಿತ ಸಂಚಾರ ಒದಗಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com