ಬೇಸಿಗೆಗೆ ಹಾಕಿ Brake: ನಿಮ್ಮ ಕಾರನ್ನು ಕೂಲ್ ಮಾಡುವ 'Car Cooling Techniques' ಇಲ್ಲಿದೆ!

ದಿನಕಳೆದಂತೆ ಬೇಸಿಗೆ ಬಿಸಿ ತಾರಕಕ್ಕೇರುತ್ತಿದ್ದು, ಪ್ರತೀ ನಿತ್ಯ ಜನರು ಬೇಸಿಗೆ ಧಗೆಯಿಂದ ಹೈರಾಣಾಗುತ್ತಿದ್ದಾರೆ. ನಾವೇ ಈ ಬೇಸಿಗೆಯಿಂದ ತತ್ತರಿಸಿ ಹೋಗುತ್ತಿದ್ದರೆ ನಮ್ಮನ್ನು ನಿತ್ಯ ಹೊತ್ತು ಸಾಗುವ ನಮ್ಮ ಕಾರಿನ ಪರಿಸ್ಥಿತಿ ಏನಾಗಿರಬೇಡ..!
ಕಾರ್ ಕೂಲಿಂಗ್ ಟೆಕ್ನಿಕ್ಸ್
ಕಾರ್ ಕೂಲಿಂಗ್ ಟೆಕ್ನಿಕ್ಸ್

ದಿನಕಳೆದಂತೆ ಬೇಸಿಗೆ ಬಿಸಿ ತಾರಕಕ್ಕೇರುತ್ತಿದ್ದು, ಪ್ರತೀ ನಿತ್ಯ ಜನರು ಬೇಸಿಗೆ ಧಗೆಯಿಂದ ಹೈರಾಣಾಗುತ್ತಿದ್ದಾರೆ. ನಾವೇ ಈ ಬೇಸಿಗೆಯಿಂದ ತತ್ತರಿಸಿ ಹೋಗುತ್ತಿದ್ದರೆ ನಮ್ಮನ್ನು ನಿತ್ಯ ಹೊತ್ತು ಸಾಗುವ ನಮ್ಮ ಕಾರಿನ ಪರಿಸ್ಥಿತಿ ಏನಾಗಿರಬೇಡ..!

ಸೂರ್ಯ ನೆತ್ತಿಗೇರಿರುವ ಸಂದರ್ಭದಲ್ಲಿ ಟ್ರಾಫಿಕ್ ನಲ್ಲಿ ಸಿಲುಕಿ, ಬಿರು ಬಿಸಿಲಿನ ನಡುವೆ ಟ್ರಾಫಿಕ್ ನಲ್ಲಿ ನಿಧಾನವಾಗಿ ಚಲಿಸುತ್ತಿದ್ದರೆ ಕಾರಿನ ಒಳಗಿರುವ ನಮಗೇ ಅದು ಸಹಿಸಲಸಾಧ್ಯ.. ಇನ್ನು ಕಾರಿನ ಸ್ಥಿತಿ ಹೇಗಿರಬೇಡ.. ಖಂಡಿತ ಇದು ಕಾರಿನ ಮೇಲೂ ಪರಿಣಾಮ ಬೀರುತ್ತದೆ.

ಅತಿಯಾದ ತಾಪಮಾನ ಕಾರಿನ ಬಣ್ಣ, ಕಾರಿನೊಳಿಗಿರುವ ಸೂಕ್ಷ್ಮ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅವುಗಳಲ್ಲಿರುವ ಪ್ಲಾಸ್ಟಿಕ್, ರಬ್ಬರ್ ಭಾಗಗಳು ಬಿಸಿಲಿನಿಂದಾಗಿ ಮತ್ತು ಕಾರಿನಿಂದ ಉಂಟಾಗುವ ಉಷ್ಣತೆಯಿಂದಾಗೆ ಕರಗುವ ಅಪಾಯವೂ ಇರುತ್ತದೆ.

ಹಾಗಾದರೆ ಕಾರನ್ನು ಕೂಲ್ ಮಾಡುವ ಉಪಾಯಗಳೇನು? ಇಲ್ಲಿದೆ ಮಾಹಿತಿ...

ಓವರ್ ಹೀಟಿಂಗ್ ಮೇಲೆ ನಿಗಾ ಇಡಿ

ಏರುತ್ತಿರುವ ತಾಪಮಾನವು ಕಾರಿನ ಎಂಜಿನ್ ಅನ್ನು ಹೆಚ್ಚು ಬಿಸಿಮಾಡಬಹುದು. ಬೇಸಿಗೆಯಲ್ಲಿ ಕಾರಿನ ಒಳಗಿನ ವಾತಾವರಣವನ್ನು ತಂಪಾಗಿರಿಸಲು ಇದು ಹೆಚ್ಚುವರಿ ಒತ್ತಡದಲ್ಲಿ ಕೆಲಸ ಮಾಡುತ್ತದೆ ಮತ್ತು ಹೆಚ್ಚೆಚ್ಚು ಹೀಟ್ ಆಗುತ್ತದೆ. ಒಂದು ವೇಳೆ ಕಾರಿನ coolant or radiator fluids ಅಸಹಜವಾಗಿ ಹೆಚ್ಚಿನ ತಾಪಮಾನಕ್ಕೇರಿದರೆ, ಇಂಜಿನ್ ಸಹ ಅಧಿಕ ಬಿಸಿಯಾಗಬಹುದು. ಹೀಗಾಗಿ coolant or radiator fluids ಬಗ್ಗೆ ಸಾಕಷ್ಟು ನಿಗಾ ಇರಿಸಿ. ಅಗತ್ಯವಿದ್ದರೆ ಮೆಕಾನಿಕ್ ಸಲಹೆ ಪಡೆದು radiator fluids ಬದಲಾಯಿಸಿ.

ಕಾರಿನ ಟೈರ್ ಗಳು

ಕಾರುಗಳ ಮೇಲೆ ಪರಿಣಾಮ ಬೀರುವ ಮತ್ತೊಂದು ದೊಡ್ಡ ಸಮಸ್ಯೆಯೆಂದರೆ ಟೈರ್‌ಗಳ ಸಮಸ್ಯೆ. ಹಗಲಿನಲ್ಲಿ ಉಷ್ಣತೆಯ ಒತ್ತಡದಲ್ಲಿ ಕೆಲಸ ಮಾಡುವ ಕಾರಿನ ಟೈರ್ ಗಳು ರಾತ್ರಿ ಸಮಯದಲ್ಲಿ ಕಡಿಮೆ ತಾಪಮಾನದಲ್ಲಿ ಕೆಲಸ ಮಾಡುತ್ತವೆ. ವಾತಾವರಣದಲ್ಲಿನ ಈ ತ್ವರಿತ ಬದಲಾವಣೆಗಳು ಟೈರ್ ಗಳು ಸ್ಫೋಟಗೊಳ್ಳಲು ಕಾರಣವಾಗಬಹುದು. ಹೀಗಾಗಿ ನಿಯಮಿತವಾಗಿ ಟೈರ್ ಗಳಲ್ಲಿನ ಗಾಳಿಯ ಒತ್ತಡವನ್ನು ಪರಿಶೀಲಿಸಬೇಕು. ಟೈರ್ ನಲ್ಲಿನ ಗಾಳಿ ಸಮರ್ಪಕವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಕಾರಿನ ಸುರಕ್ಷತೆ, ಇಂಧನ ದಕ್ಷತೆ ಮತ್ತು ಸರಿಯಾದ ಕಾರ್ಯನಿರ್ವಹಣೆಗೆ ಈ ಕ್ರಮ ಅತ್ಯಗತ್ಯ. ಸಣ್ಣ ಮತ್ತು ಮಧ್ಯಮ ಗಾತ್ರದ ವಾಹನಗಳು ಸಾಮಾನ್ಯವಾಗಿ 30-40PSI ವ್ಯಾಪ್ತಿಯಲ್ಲಿ ಬರುತ್ತವೆ ಮತ್ತು ದೊಡ್ಡ ಟೈರ್‌ಗಳನ್ನು ಹೊಂದಿರುವ ವಾಹನಗಳಿಗೆ ಸಾಮಾನ್ಯವಾಗಿ 40-45PSI ಗಾಳಿ ಪ್ರಮಾಣದ ಅಗತ್ಯವಿರುತ್ತದೆ. ಇದನ್ನು ಬಳಕೆದಾರರ ಕೈಪಿಡಿಯಲ್ಲಿ ಮತ್ತು ಕಾರಿನ ಚಾಲಕನ ಬಾಗಿಲಿನ ಬಳಿ ಅಂಟಿಸಿದ ಸ್ಟಿಕ್ಕರ್‌ನಲ್ಲಿ ಕಾರು ತಯಾರಿಕಾ ಸಂಸ್ಥೆಗಳು ಉಲ್ಲೇಖಿಸಿರುವುದನ್ನು ಕಾಣಬಹುದು.

ಕ್ಯಾಬಿನ್ ಕೂಲಿಂಗ್

ಬೇಸಿಗೆ ಅಥವಾ ಹೆಚ್ಚು ಬಿಸಿಲಿರುವ ಸಂದರ್ಭದಲ್ಲಿ ಕಾರನ್ನು ಯಾವಾಗಲೂ ನೆರಳಿನಲ್ಲಿ ನಿಲ್ಲಿಸಲು ಪ್ರಯತ್ನಿಸಿ. ಅದು ಸಾಧ್ಯವಾಗದಿದ್ದಾಗ, ಸೂರ್ಯನ ಝಳ ನೇರವಾಗಿ ಕಾರಿನ ಮೇಲೆ ಬೀಳದಂತೆ ಅಡ್ಡವಾಗಿ ನಿಲ್ಲಿಸಲು ಪ್ರಯತ್ನಿಸಿ. ಇದರಿಂದ ಸೂರ್ಯನ ಕಿರಣಗಳ ಶಾಖ ಕಾರಿನ ಮೇಲೆ ನೇರವಾಗಿ ಬೀಳುವುದನ್ನು ತಪ್ಪಿಸಬಹುದು. ಕಾರಿನಲ್ಲಿ ತಾಪಮಾನ ಹೆಚ್ಚಾಗದಂತೆ ಗಾಳಿಯ ಓಡಾಟ ಇರುವಂತೆ ಕಾರಿನ ಕಿಟಕಿಗಳನ್ನು ಸ್ವಲ್ಪ ಕೆಳಗೆ ಇರಿಸಿ. ಒಂದು ವೇಳೆ ಬಿಸಿಲಿನಲ್ಲಿ ಪಾರ್ಕ್ ಮಾಡಿದಾಗ, ಕಿಟಕಿಗಳಿಗೆ ಸನ್ ಶೇಡ್ ಹಾಕುವುದು ಅಥವಾ ಪರದೆ ಹಾಕುವುದೂ ಸಹ ಕಾರಿನಲ್ಲಿ ಹೆಚ್ಚಿನ ತಾಪಮಾನ ರಚನೆಯಾಗದಂತೆ ಸಹಾಯ ಮಾಡುತ್ತದೆ.

ತಾಪಮಾನ ಹೆಚ್ಚಿದ್ದಾಗ ಕಾರಿನ ಎಸಿ ಹೆಚ್ಚು ಲೋಡ್ ತೆಗೆದುಕೊಳ್ಳುತ್ತದೆ. ಆದ್ದರಿಂದ ನಿಯಮಿತ ಮಧ್ಯಂತರಗಳಲ್ಲಿ ಕಾರಿನ ಎಸಿ ಕಾರ್ಯನಿರ್ವಹಣೆಯನ್ನು ಪರೀಕ್ಷಿಸಿ. ಆಗಾಗ ಎಸಿ ಚಾಲನೆ ಬಂದ್ ಮಾಡಿ ಅದು ತಣ್ಣಗಾಗಲು ಸಮಯಾವಕಾಶ ನೀಡಿ. ನಿಮ್ಮ AC ಯುನಿಟ್ ಎಷ್ಟೇ ಶಕ್ತಿಯುತವಾಗಿದ್ದರೂ ಅದು ತಣ್ಣಗಾಗಲು ಒಂದಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಮುಖ್ಯವಾಗಿ ಕಾರನ್ನು ನೇರವಾಗಿ ಸೂರ್ಯ ಕಿರಣಗಳು ಬೀಳುವ ಜಾಗದಲ್ಲಿ ನಿಲುಗಡೆ ಮಾಡಿದಾಗ ಎಸಿ ಯುನಿಟ್ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.

ಈ ವೇಳೆ ಕಾರಿನಲ್ಲಿ ಹೆಚ್ಚಿನ ತಾಪಮಾನದ ವಾತ ಸೃಷ್ಟಿಯಾಗುತ್ತದೆ. ಇದನ್ನು ತಪ್ಪಿಸಲು, ಮೊದಲು ಕಿಟಕಿಗಳನ್ನು ಕೆಳಗಿಳಿಸಿ. ಈ ವೇಳೆ ಒಂದಷ್ಟು ಶಾಖವು ಹೊರ ಹೋಗುತ್ತದೆ. ಒಂದೆರಡು ನಿಮಿಷಗಳ ಕಾಲ ಕಾರಿನೊಳಗಿನ ಫ್ಯಾನ್ ಚಾಲನೆ ಮಾಡಿ ಕಾರಿನೊಳಗಿನ ತಾಪಮಾನ ಕಡಿಮೆಯಾದಾಗ ಕಾರಿನ ಕಿಟಿಕಿ ಗಾಜುಗಳನ್ನು ಮೇಲೆತ್ತಿ..

ಬ್ಯಾಟರಿ ಸಮಸ್ಯೆ

ಬಿಸಿ ವಾತಾವರಣದಲ್ಲಿ ಬ್ಯಾಟರಿ ಕೂಡ ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡುತ್ತದೆ. ಇದು ಅದರ ಲೈಫ್ ಟೈಮ್ ಅಥವಾ ಜೀವಿತಾವಧಿ ಮತ್ತು ದಕ್ಷತೆಯನ್ನು ಕಡಿಮೆ ಮಾಡುತ್ತದೆ. ಬ್ಯಾಟರಿ ಉತ್ತಮವಾಗಿದೆಯೇ ಎಂದು ಕಂಡುಹಿಡಿಯಲು ಬ್ಯಾಟರಿಯನ್ನು ಆಗಾಗ ಪರೀಕ್ಷಿಸುತ್ತಿರಿ. ಇಲ್ಲವೇ ಮೆಕಾನಿಕ್ ನಿಂದ ಸಲಹೆ ಪಡೆಯಿರಿ.

ಹೈಡ್ರೇಟೆಡ್ ಆಗಿರಿ

ಕಾರಿನಂತೆಯೇ ಡ್ರೈವರ್ ಕೂಡ ಬೇಸಿಗೆಯಲ್ಲಿ ತಂಪಾಗಿರಬೇಕಾಗುತ್ತದೆ. ನಿರ್ಜಲೀಕರಣ ಅಥವಾ ಡಿ ಹೈಡ್ರೇಟ್ (De-HYDRATE) ಮತ್ತು ಶಾಖದ ಬಳಲಿಕೆಯು ವ್ಯಕ್ತಿಯ ಚಾಲನೆ ಮಾಡುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ನೀವು ಸಾಕಷ್ಟು ನೀರು ಸೇವಿಸಿದರೆ ಉತ್ತಮವಾಗಿ ಕಾರು ಚಾಲನೆ ಮಾಡಬಹುದು. ಇದರಿಂದ ಅಪಘಾತವನ್ನು ತಪ್ಪಿಸಬಹುದು. ಕಾರಿನಲ್ಲಿ ತಂಪಾದ ಸ್ಥಳದಲ್ಲಿ ಕೆಲವು ನೀರಿನ ಬಾಟಲಿಗಳನ್ನು ಇರಿಸಿ. ಇದರಿಂದ ಯಾವಾಗ ದೇಹಕ್ಕೆ ನೀರಿನ ಅವಶ್ಯಕತೆ ಬಿದ್ದಾಗ ಕುಡಿಯಲು ನೆರವಾಗುತ್ತದೆ. ದೇಹವೂ ನಿರ್ಜಲೀಕರಣದಿಂದ ಪಾರಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com