Global NCAP ಸುರಕ್ಷತಾ ಪರೀಕ್ಷೆ: 5-ಸ್ಟಾರ್ ರೇಟಿಂಗ್ ಪಡೆದ ಮೊದಲ Maruti Suzuki ಕಾರು ಯಾವುದು ಗೊತ್ತಾ?

ಈ ಹಿಂದೆ, ಫೈವ್ ಸ್ಟಾರ್ ಸುರಕ್ಷತಾ ರೇಟಿಂಗ್‌ಗಳು ಪ್ರಾಥಮಿಕವಾಗಿ ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಯುರೋಪಿಯನ್ ವಾಹನ ತಯಾರಿಕಾ ಸಂಸ್ಥೆ ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾದ ಮಾದರಿಗೆ ದೊರೆಯುತ್ತಿತ್ತು.
New Dzire becomes Maruti Suzuki’s first 5-star rated car
ಮಾರುತಿ-ಸುಜುಕಿ ನ್ಯೂ ಡಿಜೈರ್ ಕಾರು
Updated on

ನವದೆಹಲಿ: ಖ್ಯಾತ ಕಾರು ತಯಾರಿಕಾ Maruti Suzuki ಸಂಸ್ಥೆಯ ಕಾರೊಂದು ಮೊದಲ ಬಾರಿಗೆ ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆಯಲ್ಲಿ 5-ಸ್ಟಾರ್ ರೇಟಿಂಗ್ ಪಡೆದಿದ್ದು, ಮಾರುಕಟ್ಟೆ ಬಿಡುಗಡೆಗೆ ಸಜ್ಜಾಗಿದೆ.

ಹೌದು.. ಭಾರತದ ಅತೀ ಹೆಚ್ಚು ಕಾರು ಮಾರಾಟ ಸಂಸ್ಥೆ ಎಂದೇ ಖ್ಯಾತಿ ಗಳಿಸಿರುವ Maruti Suzuki ತನ್ನ ಹೊಸ ಕಾಂಪ್ಯಾಕ್ಟ್ ಸೆಡಾನ್ ಮಾದರಿಯ 'ನ್ಯೂ ಡಿಜೈರ್' ಕಾರಿನ ಮೂಲಕ ಮೊದಲ ಬಾರಿಗೆ ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆಯಲ್ಲಿ 5-ಸ್ಟಾರ್ ರೇಟಿಂಗ್ ಪಡೆದಿದ್ದು, ಮಕ್ಕಳ ಸುರಕ್ಷತೆಗಾಗಿ ನಾಲ್ಕು ಸ್ಟಾರ್ ರೇಟಿಂಗ್ ಅನ್ನು ಸಾಧಿಸಿದೆ. ಆ ಮೂಲಕ ಇದೇ ಮೊದಲ ಬಾರಿಗೆ ಭಾರತದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ Maruti Suzuki ಈ ಮೈಲಿಗಲ್ಲನ್ನು ತಲುಪಿದೆ.

ಈ ಹಿಂದೆ, ಫೈವ್ ಸ್ಟಾರ್ ಸುರಕ್ಷತಾ ರೇಟಿಂಗ್‌ಗಳು ಪ್ರಾಥಮಿಕವಾಗಿ ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಯುರೋಪಿಯನ್ ವಾಹನ ತಯಾರಿಕಾ ಸಂಸ್ಥೆ ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾದ ಮಾದರಿಗೆ ದೊರೆಯುತ್ತಿತ್ತು. ಇದೀಗ ಮಾರುತಿ ಸುಜುಕಿ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದು, ಈ ಸಾಧನೆಯು ಭಾರತೀಯ ಮಾರುಕಟ್ಟೆಗೆ ವಿಶೇಷವಾಗಿ ಗಮನಾರ್ಹವಾಗಿದೆ.

New Dzire becomes Maruti Suzuki’s first 5-star rated car
Maruti Suzuki price hike: ಮಾರುತಿ ಸುಜುಕಿ ಸ್ವಿಫ್ಟ್, ಗ್ರ್ಯಾಂಡ್ ವಿಟಾರಾ ಕಾರುಗಳ ಬೆಲೆ ಹೆಚ್ಚಳ

ಭಾರತದಲ್ಲಿ ಡಿಜೈರ್ ಕಾರುಗಳು ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಈ ಹಿಂದೆ ಮಾರುತಿ ಸುಜುಕಿ ತನ್ನ ಕಾರುಗಳ ಪೈಕಿ ಯಾವೊಂದು ಕಾರು ಕೂಡ ಫೈವ್ ಸ್ಟಾರ್ ಸುರಕ್ಷತೆ-ರೇಟೆಡ್ ವಾಹನಗಳ ಕೊರತೆಯ ಬಗ್ಗೆ ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು.

ಅಂದಹಾಗೆ ಮಾರುತು ಸುಜುಕಿ ಸಂಸ್ಥೆಯ ನ್ಯೂ ಡಿಜೈರ್ ಕಾರು ನವೆಂಬರ್ 11 ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ ಹೊಸ ಡಿಜೈರ್ ಕಾರು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ಪಾದಚಾರಿ ರಕ್ಷಣೆಯನ್ನು ಪ್ರಮಾಣಿತ ವೈಶಿಷ್ಟ್ಯಗಳೊಂದಿಗೆ ಹೊಂದಿದೆ.

ಈ ಬಗ್ಗೆ ಮಾತನಾಡಿರುವ ಟುವರ್ಡ್ಸ್ ಜೀರೋ ಫೌಂಡೇಶನ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡೇವಿಡ್ ವಾರ್ಡ್, 'ಹಿಂದಿನ ಆವೃತ್ತಿಗಳು ಮತ್ತು ನಾವು ಪರೀಕ್ಷಿಸಿದ ಇತರ ಮಾರುತಿ ಮಾದರಿಗಳಿಗೆ ಹೋಲಿಸಿದರೆ ಹೊಸ ಡಿಜೈರ್‌ನ ಫೈವ್ ಸ್ಟಾರ್ ರೇಟಿಂಗ್ ಮಾರುತಿ ಸುಜುಕಿಗೆ ಗಮನಾರ್ಹವಾದ ಸುರಕ್ಷತಾ ಮಾನದಂಡವನ್ನು ಹೊಂದಿಸುತ್ತದೆ.

ಮಾರುತಿಯು ತಮ್ಮ ಸಂಪೂರ್ಣ ಮಾದರಿ ಶ್ರೇಣಿಯಲ್ಲಿ ಈ ಉನ್ನತ ಮಟ್ಟದ ಸುರಕ್ಷತೆಯನ್ನು ತಲುಪಲು ಶ್ರಮಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಅವರು ಯಶಸ್ವಿಯಾದರೆ, ಇದು ಭಾರತದಲ್ಲಿ ವಾಹನ ಸುರಕ್ಷತೆಗೆ ಪರಿವರ್ತನೆಯಾಗಬಹುದು ಎಂದು ಹೇಳಿದರು.

ಗ್ಲೋಬಲ್ ಎನ್‌ಸಿಎಪಿಯ ಕ್ರ್ಯಾಶ್ ಟೆಸ್ಟ್ ಪ್ರೋಟೋಕಾಲ್‌ಗಳು ಎಲ್ಲಾ ವಾಹನಗಳಿಗೆ ಮುಂಭಾಗದ ಮತ್ತು ಅಡ್ಡ ಪರಿಣಾಮದ ರಕ್ಷಣೆಯನ್ನು ನಿರ್ಣಯಿಸುತ್ತದೆ. ಜೊತೆಗೆ ವಾಹನಗಳು ಅತ್ಯಧಿಕ ಸ್ಟಾರ್ ರೇಟಿಂಗ್‌ಗಳನ್ನು ಗಳಿಸಲು ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ (ESC), ಪಾದಚಾರಿ ರಕ್ಷಣೆ ಮತ್ತು ಸೈಡ್ ಪೋಲ್ ಇಂಪ್ಯಾಕ್ಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.

ಈ ಪರೀಕ್ಷೆಗಳಲ್ಲಿ, ಹೊಸ ಡಿಜೈರ್‌ನ ರಚನೆ ಮತ್ತು ಫುಟ್‌ವೆಲ್ ಅನ್ನು ಸ್ಥಿರವೆಂದು ರೇಟ್ ಮಾಡಲಾಗಿದೆ. ಇದು ಹೆಚ್ಚುವರಿ ಲೋಡಿಂಗ್ ಅನ್ನು ನಿಭಾಯಿಸಬಲ್ಲದು ಎಂದು ಸೂಚಿಸುತ್ತದೆ. ಡ್ರೈವರ್ ಡಮ್ಮಿ ಮುಂಭಾಗದ ಪರೀಕ್ಷೆಯಲ್ಲಿ ಕನಿಷ್ಠ ಎದೆಯ ರಕ್ಷಣೆಯನ್ನು ತೋರಿಸಿದೆ, ಆದರೆ ಪೋಲ್ ಮತ್ತು ಸೈಡ್ ಇಂಪ್ಯಾಕ್ಟ್ ಪರೀಕ್ಷೆಗಳು ವಯಸ್ಕ ನಿವಾಸಿಗಳಿಗೆ ಸಂಪೂರ್ಣ ತಲೆ ಮತ್ತು ದೇಹದ ರಕ್ಷಣೆಯನ್ನು ಪ್ರದರ್ಶಿಸಿದವು ಎನ್ನಲಾಗಿದೆ.

ಅಂತೆಯೇ ಮಕ್ಕಳ ರಕ್ಷಣೆಯಲ್ಲೂ ಡಮ್ಮಿ ಮಕ್ಕಳ ಬೊಂಬೆಗಳ ಪರೀಕ್ಷೆಯಲ್ಲಿ ಬೊಂಬೆಗಳ ತಲೆ, ಎದೆಗೆ ರಕ್ಷಣೆ ತೋರಿಸಿದೆ. ಮಾರುತಿ ಸ್ವಿಫ್ಟ್ ಡಿಝೈರ್ ಕಾರು ಗ್ಲೋಬಲ್ NCAP ಪರೀಕ್ಷೆಯಲ್ಲಿ ವಯಸ್ಕರ ಪ್ರಯಾಣ ಸುರಕ್ಷತೆಯಲ್ಲಿ 34 ಅಂಕಗಳ ಪೈಕಿ 31.24 ಅಂಕ ಪಡೆದುಕೊಂಡಿದೆ. ಇನ್ನು ಮಕ್ಕಳ ಸುರಕ್ಷತೆಯಲ್ಲಿ 49ರ ಪೈಕಿ 39.20 ಅಂಕ ಪಡೆದುಕೊಂಡಿದೆ. ಈ ಮೂಲಕ ಒಟ್ಟಾರೆ 5 ಸ್ಟಾರ್ ರೇಟಿಂಗ್ ಪಡೆದಿದೆ. ಗ್ಲೋಬಲ್ NCAP ಕ್ರಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಗರಿಷ್ಠ ಸುರಕ್ಷತೆ ರೇಟಿಂಗ್ ಆಗಿದೆ.

New Dzire becomes Maruti Suzuki’s first 5-star rated car
ಸೆಮಿಕಂಡಕ್ಟರ್ ಕೊರತೆಯಿಂದಾಗಿ ಮಾರುತಿ ಸುಜುಕಿ ಉತ್ಪಾದನಾ ಸಾಮರ್ಥ್ಯ ಕುಂಠಿತ

ಕಾರಿನ ವಿಶೇಷತೆಗಳು

ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನಲ್ಲಿ ನ್ಯೂ ಡಿಜೈರ್ ಕಾರು ಲಭ್ಯವಿದೆ. ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆಗಳು ಲಭ್ಯವಿದೆ. 1.2 ಲೀಟರ್ 3 ಸಿಲಿಂಡರ್ ಎಂಜಿನ್ ಹೊಂದಿದೆದೆ. ಪೆಟ್ರೋಲ್ ಕಾರು 82 PS ಪವರ್ ಹಾಗೂ 112 Nm ಟಾರ್ಕ್ ಉತ್ಪಾದಿಸಲಿದೆ. ಇನ್ನು ಸಿಎನ್‌ಜಿ ವೇರಿಯೆಂಟ್ ಕಾರು 70 PS ಪವರ್ ಹಾಗೂ 102 Nm ಟಾರ್ಕ್ ಉತ್ಪಾದಿಸಲಿದೆ. ಪೆಟ್ರೋಲ್ ಮ್ಯಾನ್ಯುಯೆಲ್ ಕಾರು ಒಂದು ಲೀಟರ್‌ಗೆ 24.79 ಕಿ.ಮಿ ಮೈಲೇಜ್ ನೀಡಲಿದೆ ಇನ್ನು ಆಟೋಮ್ಯಾಟಿಕ್ ಕಾರು 25.71 ಕಿ.ಮಿ ಮೈಲೇಜ್ ನೀಡಲಿದೆ. ಇತ್ತ ಸಿಎನ್‌ಜಿ ವೇರಿಯೆಂಟ್ ಕಾರು ಒಂದು ಕೆಜಿಗೆ 33 ಕಿ.ಮಿ ಮೈಲೇಜ್ ನೀಡಲಿದೆ. ಇದರ ಆರಂಭಿಕ ಬೆಲೆ 6.70 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದ್ದು, ಎಲ್ಲಾ ಎಲ್‌ಇಡಿ ಲೈಟ್ಸ್ ನೀಡಲಾಗಿದೆ. 9 ಇಂಚಿನ ಟಚ್‌ಸ್ಕ್ರೀನ್, 15 ಇಂಚಿನ ಅಲೋಯ್ ವ್ಹೀಲ್, ವೈಯರ್‌ಲೆಸ್ ಫೋನ್ ಚಾರ್ಜರ್, ಡ್ರೈವರ್ ಡಿಸ್‌ಪ್ಲೆ, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಲಭ್ಯವಿದೆ. ಇನ್ನು ಸುರಕ್ಷತೆಗೆ ಆದ್ಯತೆ ನೀಡಿರುವ ಮಾರುತಿ, 6 ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ, ಟೈಯರ್ ಪ್ರಶರ್ ಮಾನಿಟರಿಂಗ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com