Christmas 2025: Holiday ಎಂಜಾಯ್ ಮಾಡಬೇಕೇ? ರಜೆ ಕಳೆಯಲು ಇಲ್ಲಿದೆ ಬೆಸ್ಟ್‌ ಪ್ಲ್ಯಾನ್..!

ಇಷ್ಟು ದಿನ ವಿಮಾನಗಳಲ್ಲಿ ಪ್ರಯಾಣಿಸಿ. ವಿದೇಶಗಳಲ್ಲಿ ಹಬ್ಬವನ್ನು ಆಚರಿಸಲು ಇಷ್ಟ ಪಡುತ್ತಿದ್ದವರು ಇದೀಗ ಐಷಾರಾಮಿ ರೈಲುಗಳತ್ತ ಮುಖ ಮಾಡುತ್ತಿದ್ದಾರೆ.
File photo
ಸಂಗ್ರಹ ಚಿತ್ರ

ಕ್ರಿಸ್ಮಸ್‌ ಹಾಗೂ ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಸಾಕಷ್ಟು ಮಂದಿ ರಜಾ ದಿನಗಳನ್ನು ಎಂಜಾಯ್ ಮಾಡಲು ಇಚ್ಛಿಸುತ್ತಾರೆ. ಇಷ್ಟು ದಿನ ವಿಮಾನಗಳಲ್ಲಿ ಪ್ರಯಾಣಿಸಿ. ವಿದೇಶಗಳಲ್ಲಿ ಹಬ್ಬವನ್ನು ಆಚರಿಸಲು ಇಷ್ಟ ಪಡುತ್ತಿದ್ದವರು ಇದೀಗ ಐಷಾರಾಮಿ ರೈಲುಗಳತ್ತ ಮುಖ ಮಾಡುತ್ತಿದ್ದಾರೆ.

ಚಳಿಗಾಲದ ಮೈಕೊರೆಯುವ ಚಳಿ, ಪ್ರಕೃತಿಯ ಸೌಂದರ್ಯ, ರುಚಿಕರವಾದ ಭೋಜನವನ್ನು ಸವಿಯುತ್ತಾ ಐಷಾರಾಮಿ ರೈಲುಗಳಲ್ಲಿ ರಜೆ ಕಳೆಯಲು ಬಯಸುತ್ತಿದ್ದಾರೆ. ನೀವೂ ಕೂಡ ನಿಮ್ಮ ರಜೆಯನ್ನು ಸ್ಮರಣೀಯವಾಗಿಸಿಕೊಳ್ಳಲು ಬಯಸಿತ್ತಿದ್ದೀರಾ...? ಹಾಗಾದರೆ, ಪ್ರಯಾಣದ ವೇಳೆ ಅದ್ಭುತ ಅನುಭವ ನೀಡುವ 5 ಐಷಾರಾಮಿ ರೈಲುಗಳ ಬಗ್ಗೆ ಇಲ್ಲಿದೆ ಮಾಹಿತಿ...

ಬೆಲ್ಮಂಡ್ ಬ್ರಿಟಿಷ್ ಪುಲ್‌ಮನ್ (Belmond British Pullman)

ಲಂಡನ್‌ನ ವಿಕ್ಟೋರಿಯಾದಿಂದ ಪ್ರಾರಂಭವಾಗುವ ಈ ರೈಲಿನ ಪ್ರಯಾಣವು ಅತ್ಯಂತ ಅದ್ಭುತವಾಗಿರುತ್ತದೆ. ಈ ರೈಲು 1920-30ರ ದಶಕದ ಮೂಲ ವಿನ್ಯಾಸವನ್ನು ಹೊಂದಿದ್ದು, ರಾಜಮನೆತನದವರು ಮತ್ತು ಗಣ್ಯರು ಈ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಇಲ್ಲಿನ ಪ್ರತೀಯೊಂದು ಭೋಗಿಯೂ ತನ್ನದೇ ಆದ ವಿಶಿಷ್ಟ ಹೆಸರು ಮತ್ತು ಅಲಂಕಾರವನ್ನು ಹೊಂದಿದೆ.

ಲಂಡನ್‌ನ ವಿಕ್ಟೋರಿಯಾ ನಿಲ್ದಾಣದಿಂದ ಹೊರಡುವ ಈ ರೈಲು, ಇಂಗ್ಲೆಂಡ್‌ನ ಸುಂದರ ಪ್ರಕೃತಿ, ಕೋಟೆಗಳು, ಉದ್ಯಾನಗಳು ಮತ್ತು ಕ್ರೀಡಾ ಕಾರ್ಯಕ್ರಮಗಳ ಕಡೆಗೆ ದಿನದ ಪ್ರವಾಸಗಳನ್ನು ಆಯೋಜಿಸುತ್ತದೆ. ಈ ರೈಲಿನಲ್ಲಿ ಅತ್ಯುತ್ತಮ ಊಟವಿರಲಿದ್ದು, ಷಾಂಪೇನ್ ಮತ್ತು ಕ್ಲಾಸಿಕ್ ಅನುಭವಗಳನ್ನು ನೀಡುತ್ತದೆ.

ಒಟ್ಟಾರೆಯಾಗಿ, ಬೆಲ್ಮಂಡ್ ಬ್ರಿಟಿಷ್ ಪುಲ್‌ಮನ್ ಆಧುನಿಕ ಐಷಾರಾಮಿ ಜೀವನವನ್ನು ಬಯಸುವವರಿಗೆ ಒಂದು ಅನನ್ಯ ಮತ್ತು ಸ್ಮರಣೀಯ ಪ್ರಯಾಣದ ಅನುಭವವನ್ನು ಒದಗಿಸುತ್ತದೆ.

ದಿ ಪೋಲಾರ್ ಎಕ್ಸ್‌ಪ್ರೆಸ್ (The Polar Express Train Ride)

ಮಕ್ಕಳ ಪ್ರಿಯವಾದ 'ಪೋಲಾರ್ ಎಕ್ಸ್‌ಪ್ರೆಸ್' ಕಥೆಯನ್ನೇ ಈ ರೈಲು ಪ್ರಯಾಣವು ಮರುಸೃಷ್ಟಿಸುತ್ತದೆ. ಅಮೆರಿಕ, ಬ್ರಿಟನ್ ಮತ್ತು ಕೆನಡಾದಲ್ಲಿ ಈ ರೈಲು ಲಭ್ಯವಿದ್ದು, ಮ್ಯಾಜಿಕಲ್ ರೈಲು ಪ್ರವಾಸವನ್ನು ಇದು ನೀಡುತ್ತದೆ. ರೈಲಿನಲ್ಲಿ ಮಕ್ಕಳಿಗೆ ಕ್ರಿಸ್‌ಮಸ್‌ನ ನಿಜವಾದ ಅನುಭವ ಸಿಗುವಂತೆ ಮಾಡಲಾಗುತ್ತದೆ. ಪ್ರಯಾಣದ ವೇಳೆ ಮಕ್ಕಳಿಗೆ ಕೋಕೋ ಮತ್ತು ಸಾಂಟಾ ಕ್ಲಾಸ್ ಸಿಗುತ್ತಾರೆ. ಪ್ರತಿ ಮಗುವಿಗೂ ಸಾಂಟಾ ತನ್ನ ಮೊದಲ ಉಡುಗೊರೆಯಾಗಿ ಬೆಳ್ಳಿಯ ಗಂಟೆಯನ್ನು ನೀಡುತ್ತಾನೆ. ಈ ರೈಲು ಪ್ರವಾಸವು ಕ್ರಿಸ್‌ಮಸ್ ಸಮಯದಲ್ಲಿ ಅಮೆರಿಕಾದಲ್ಲಿರುವ ವಿವಿಧ ಐತಿಹಾಸಿಕ ರೈಲು ಮಾರ್ಗಗಳಲ್ಲಿ ನಡೆಯುತ್ತದೆ. ಒಟ್ಟಾರೆ ಪೋಲಾರ್ ಎಕ್ಸ್‌ಪ್ರೆಸ್ ಒಂದು ಮ್ಯಾಜಿಕಲ್ ಕ್ರಿಸ್ಮಸ್ ಅನುಭವವಾಗಿದ್ದು, ಇದು ನಂಬಿಕೆ ಮತ್ತು ಕ್ರಿಸ್ಮಸ್ ಸ್ಫೂರ್ತಿಯನ್ನು ಪುನರುಜ್ಜೀವನಗೊಳಿಸುತ್ತದೆ.

ಸಾಂಟಾ ಕ್ಲಾಸ್ ಎಕ್ಸ್‌ಪ್ರೆಸ್ (Santa Claus Express)

ಫಿನ್‌ಲ್ಯಾಂಡ್‌ನ ಸುಂದರ ಹಿಮದ ಕಾಡುಗಳ ಮೂಲಕ ರೈಲು ಸಾಗಲಿದ್ದು, ರಾತ್ರಿ ಪ್ರಯಾಣವು ನಿಮ್ಮನ್ನು ನೇರವಾಗಿ 'ಸಾಂಟಾ ಕ್ಲಾಸ್'ನ ಗ್ರಾಮವಾದ ರೋವಾನಿಮಿಗೆ ತಲುಪಿಸುತ್ತದೆ. ಉತ್ತರ ಧ್ರುವದ (Arctic Circle) ಅದ್ಭುತ ನೋಟಗಳನ್ನು ಸವಿಯಲು ಇದೊಂದು ಅತ್ಯುತ್ತಮ ಅವಕಾಶವಾಗಿದೆ. 2 ಅಂತಸ್ತಿನ ರೈಲು ಇದಾಗಿದ್ದು, ಅದ್ಭುತ ಅನುಭವ ನೀಡುತ್ತದೆ.

ವೆನಿಸ್ ಸಿಂಪ್ಲಾನ್-ಓರಿಯಂಟ್-ಎಕ್ಸ್‌ಪ್ರೆಸ್ (Venice Simplon-Orient-Express)

ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಮತ್ತು ಐಷಾರಾಮಿ ರೈಲುಗಳಲ್ಲಿ ಒಂದಾಗಿದೆ. ಈ ರೈಲಿನ ಕಲಾತ್ಮಕತೆ ನಿಮ್ಮನ್ನು ಹಳೆಯ ಕಾಲದ ಯುರೋಪ್‌ಗೆ ಕರೆದೊಯ್ಯುತ್ತದೆ. ಲಂಡನ್‌ನಿಂದ ವೆನಿಸ್, ವಿಯೆನ್ನಾ ಅಥವಾ ಬುಡಾಪೆಸ್ಟ್‌ನಂತಹ ನಗರಗಳಿಗೆ ಈ ರೈಲು ನಿಮ್ಮನ್ನು ಕೊಂಡೊಯ್ಯುತ್ತದೆ.

ನಾಪಾ ವ್ಯಾಲಿ ವೈನ್ ಟ್ರೈನ್ (Napa Valley Wine Train)

ಇದು ಕ್ಯಾಲಿಫೋರ್ನಿಯಾದ ನಾಪಾ ಕಣಿವೆಯಲ್ಲಿ ದ್ರಾಕ್ಷಿತೋಟಗಳ ಮೂಲಕ ಸಾಗುವ ಒಂದು ಐಷಾರಾಮಿ, ವಿಂಟೇಜ್ ರೈಲಿನ ಅನುಭವವಾಗಿದೆ, ಕ್ಯಾಲಿಫೋರ್ನಿಯಾದ ಈ ರೈಲು ಪ್ರಯಾಣವು ದ್ರಾಕ್ಷಿ ತೋಟಗಳ ಮಧ್ಯೆ ಸಾಗುತ್ತದೆ. ಇಲ್ಲಿ ಸಾಂಟಾ ಜೊತೆಗಿನ ಫ್ಯಾಮಿಲಿ ಟ್ರಿಪ್‌ಗಳು ಮತ್ತು ಹಿರಿಯರಿಗಾಗಿ ವಿಶೇಷ ವೈನ್ ಮತ್ತು ಅತ್ಯುತ್ತಮ ಭೋಜನದ ವ್ಯವಸ್ಥೆ ಇರುತ್ತದೆ.

ಪ್ರಯಾಣದ ಸಮಯದಲ್ಲಿ ಅತಿಥಿಗಳಿಗೆ ಮಲ್ಟಿ-ಕೋರ್ಸ್ ಗೌರ್ಮೆಟ್ (Gourmet) ಊಟವನ್ನು ನೀಡಲಾಗುತ್ತದೆ. ಇಲ್ಲಿನ ಆಹಾರವನ್ನು ರೈಲಿನಲ್ಲಿರುವ ಕಿಚನ್‌ನಲ್ಲಿಯೇ ತಾಜಾವಾಗಿ ತಯಾರಿಸಲಾಗುತ್ತದೆ. ಅತಿಥಿಗಳಿಗೆ ವೈನ್ ಟೇಸ್ಟಿಂಗ್ ಮಾಡುವ ಅವಕಾಶವೂ ಇರುತ್ತದೆ. ಒಟ್ಟು 6 ಗಂಟೆಗಳ ಸುದೀರ್ಘ ಪ್ರಯಾಣ ಸಿಗಲಿದ್ದು, ಪ್ರಸಿದ್ಧ ವೈನರಿಗಳಿಗೆ ಭೇಟಿ ನೀಡುವ ಅವಕಾಶವನ್ನು ನೀಡಲಾಗುತ್ತದೆ. ಕ್ಯಾಲಿಫೋರ್ನಿಯಾದ ಸುಂದರ ಪರಿಸರದಲ್ಲಿ ಕ್ರಿಸ್‌ಮಸ್ ಆಚರಿಸಲು ಇದು ಸೂಕ್ತ ಆಯ್ಕೆಯಾಗಿದೆ.

ನಿಮ್ಮ ಪ್ರಯಾಣಕ್ಕೆ ಕೆಲವು ಸಲಹೆಗಳು...

  • ಮುಂಚಿತವಾಗಿ ಬುಕ್ ಮಾಡಿ: ಈ ರೈಲುಗಳಲ್ಲಿ ಸೀಟುಗಳು ಒಂದು ವರ್ಷ ಮುಂಚಿತವಾಗಿಯೇ ಭರ್ತಿಯಾಗುತ್ತವೆ.

  • ಉಡುಗೆಯ ನಿಯಮ: ಕೆಲವು ರೈಲುಗಳಲ್ಲಿ (ಉದಾಹರಣೆಗೆ ಓರಿಯಂಟ್ ಎಕ್ಸ್‌ಪ್ರೆಸ್) ಔಪಚಾರಿಕ ಉಡುಗೆ ಕಡ್ಡಾಯವಾಗಿರುತ್ತದೆ.

  • ಹವಾಮಾನ ಗಮನಿಸಿ: ನೀವು ಯುರೋಪ್ ಅಥವಾ ಫಿನ್‌ಲ್ಯಾಂಡ್‌ಗೆ ಹೋಗುತ್ತಿದ್ದರೆ ಇಲ್ಲಿ ಅತೀವ್ರ ಚಳಿ ಇರಲಿದ್ದು, ಅದಕ್ಕೆ ತಕ್ಕಂತೆ ಉಡುಪುಗಳನ್ನು ಕೊಂಡೊಯ್ಯಿರಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com