ಪ್ರಧಾನಿ ಮೋದಿ ಅವರನ್ನು ಸಂಪರ್ಕಿಸುವುದು ಹೇಗೆ?

ಪ್ರಧಾನಿ ಕಾರ್ಯಾಲವಯವನ್ನು ಸಾರ್ವಜನಿಕರು ಸಂಪರ್ಕಿಸಲು ಹಲವು ಮಾರ್ಗಗಳಿದ್ದು, ಪತ್ರ ಮತ್ತು ಫ್ಯಾಕ್ಸ್, ಇ-ಮೇಲ್, ಫೇಸ್ ಬುಕ್, ಟ್ವಿಟ್ಟರ್, ವೆಬ್ ಸೈಟ್, ಮೊಬೈಲ್ ಸಂಖ್ಯೆ ಮೂಲಕ ದೇಶದ ಪ್ರತಿಯೊಬ್ಬ..
ಪ್ರಧಾನ ಮಂತ್ರಿ ಕಾರ್ಯಾಲಯ
ಪ್ರಧಾನ ಮಂತ್ರಿ ಕಾರ್ಯಾಲಯ

ಒಂದು ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ಪ್ರಧಾನಿ ದೇಶದ ಪ್ರತಿಯೊಬ್ಬ ಪ್ರಜೆಗೂ ಲಭ್ಯವಿರ ಬೇಕಾಗುತ್ತದೆ. ಪ್ರಜಾ ಸೇವೆಗೆ ಅಂಕಿತವಾದ ಮೇಲೆ ಹಗಲು ರಾತ್ರಿ ಎನ್ನದೆ  ದುಡಿಯಬೇಕಾಗುತ್ತದೆ. ಇದೇ ಕಾರಣಕ್ಕಾಗಿ ದೇಶದ ಯಾವುದೇ ಸರ್ಕಾರಿ ಕಚೇರಿಗಿಂತಲೂ ಪ್ರಧಾನ ಮಂತ್ರಿ ಕಾರ್ಯಾಲಯ ಅತಿಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ. ಇಂತಹ ಪ್ರಧಾನ  ಮಂತ್ರಿಗಳ ಕಾರ್ಯಾಲಯವನ್ನು ಹಾಗೂ ಪ್ರಧಾನಿಗಳನ್ನು ಸಂಪರ್ಕಿಸುವುದು ಹೇಗೆ ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಬೇಕಾಗುತ್ತದೆ. ತನ್ನ ಸಮಸ್ಯೆ ಹೇಳಿ ಆ ಸಮಸ್ಯೆಯನ್ನು  ಬಗೆ ಹರಿಸಿಕೊಳ್ಳಬೇಕಾದ್ದು ಆತನ ಆದ್ಯ ಕರ್ತವ್ಯ ಹಾಗೂ ಹಕ್ಕು. ಇದೇ ಕಾರಣಕ್ಕಾಗಿ ಪ್ರಧಾನ ಮಂತ್ರಿ ಕಾರ್ಯಾಲಯ ಪರಿಣಾಮಕಾರಿಯಾಗಿ ದೇಶದ ಪ್ರತಿಯೊಬ್ಬ ಪ್ರಜೆಯನ್ನೂ ತಲುಪುವ  ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ.

ಹಾಗಾದರೇ ಪ್ರಧಾನ ಮಂತ್ರಿಗಳನ್ನು ಹಾಗೂ ಪ್ರಧಾನ ಮಂತ್ರಿ ಕಾರ್ಯಾಲಯವನ್ನು ಸಂಪರ್ಕಿಸುವುದು ಹೇಗೆ?
ಪ್ರಧಾನಿ ಕಾರ್ಯಾಲವಯವನ್ನು ಸಾರ್ವಜನಿಕರು ಸಂಪರ್ಕಿಸಲು ಹಲವು ಮಾರ್ಗಗಳಿದ್ದು, ಪತ್ರ ಮತ್ತು ಫ್ಯಾಕ್ಸ್, ಇ-ಮೇಲ್, ಫೇಸ್ ಬುಕ್, ಟ್ವಿಟ್ಟರ್, ವೆಬ್ ಸೈಟ್, ಮೊಬೈಲ್ ಸಂಖ್ಯೆ ಮೂಲಕ  ದೇಶದ ಪ್ರತಿಯೊಬ್ಬ ನಾಗರೀಕನೂ ಪ್ರಧಾನ ಮಂತ್ರಿಗಳನ್ನು ಹಾಗೂ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.

ಸಂಪರ್ಕ ಹೇಗೆ?
1.ಪತ್ರ

ಪತ್ರದ ಮೂಲಕ ಪ್ರಧಾನ ಮಂತ್ರಿಗಳಿಗೆ ಹಾಗೂ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸ ಬಯಸುವವರು ಪ್ರಧಾನ ಮಂತ್ರಿಗಳ ಕಚೇರಿ ಹಾಗೂ ನಿವಾಸದ ವಿಳಾಸಕ್ಕೆ ಪತ್ರ  ಬರೆಯಬಹುದಾಗಿದೆ. ಅಲ್ಲಿನ ಅಧಿಕಾರಿಗಳು ಪತ್ರದ ಪ್ರಾಮುಖ್ಯತೆಗೆ ಅನುಗುಣವಾಗಿ ಅವುಗಳನ್ನು ವಿಲೇವಾರಿ ಮಾಡುತ್ತಾರೆ. ತೀರಾ ಪ್ರಮುಖ ಮತ್ತು ವಿಶೇಷ ಪತ್ರವಾಗಿದ್ದರೆ ಖುದ್ದು ಪ್ರಧಾನ  ಮಂತ್ರಿಗಳಿಗೆ ತಲುಪಿಸುತ್ತಾರೆ. ಇಲ್ಲವಾದರೇ ತಾವೇ ಪತ್ರದಲ್ಲಿ ಸಮಸ್ಯೆ ಪರಿಷ್ಕರಿಸಲು ಪ್ರಯತ್ನಿಸುತ್ತಾರೆ.

ಪ್ರಧಾನಿ ಕಚೇರಿ ವಿಳಾಸ
ಪ್ರಧಾನಿ ಕಾರ್ಯಾಲಯ
ಸೌತ್ ಬ್ಲಾಕ್, ರೈಸೀನಾ ಹಿಲ್
ನವದೆಹಲಿ-110011
ಭಾರತ

ಕಚೇರಿ ದೂರವಾಣಿ ಸಂಖ್ಯೆ: +91-11-23012312

Prime Minister Office
South Block
Raisina Hill, New Delhi-110011
India

Phone Number: +91-11-23012312

2.ಫ್ಯಾಕ್ಸ್
ಫ್ಯಾಕ್ಸ್ ಮೂಲಕ ದೂರು-ದುಮ್ಮಾನ ನೀಡಬಯಸುವವರು ಪ್ರಧಾನಿ ಕಾರ್ಯಾಲಯದ ಫ್ಯಾಕ್ಸ್ ನಂಬರ್ +91-11-23019545, 23016857ಕ್ಕೆ ಫ್ಯಾಕ್ಸ್ ಮಾಡಬಹುದು.

3.ಪ್ರಧಾನಿ ನಿವಾಸದ ವಿಳಾಸ
ಪ್ರಧಾನಿ ಮೋದಿ ನಿವಾಸ
7 ರೇಸ್ ಕೋರ್ಸ್ ರಸ್ತೆ
ನವದೆಹಲಿ

PM Modi Residence
7 Race Course Road
New Delhi

4.ವೆಬ್ ಸೈಟ್
ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತ ಮತ್ತು ವೈಯುಕ್ತಿಕ ವೆಬ್ ತಾಣಗಳೂ ಮುಖಾಂತರವಾಗಿಯೂ ಸಾರ್ವಜನಿಕರಿಗೆ ಲಭ್ಯವಿದ್ದು, ಸರ್ಕಾರೀ ಅಧಿಕೃತ ವೆಬ್ ತಾಣ  http://pmindia.gov.in/en/interact-with-honble-pm/ ಮತ್ತು ವೈಯುಕ್ತಿ  ವೆಬ್ ತಾಣ www.narendramodi.inಕ್ಕೆ ಭೇಟಿ ನೀಡುವ ಮೂಲಕ ಅವರನ್ನು  ಸಂಪರ್ಕಿಸಬಹುದಾಗಿದೆ. ಅಲ್ಲದೆ ನೇರವಾಗಿ ಸರ್ಕಾರದ ವೆಬ್ ತಾಣ http://mygov.nic.in/signup ಕ್ಕೆ ಲಾಗಿನ್ ಆಗುವ ಮೂಲಕ ಅಲ್ಲಿ ಪ್ರಧಾನಿ ಕಾರ್ಯಾಲಯವನ್ನು  ಸಂಪರ್ಕಿಸಬಹುದಾಗಿದೆ.

ಒಂದು ವೇಳೆ ವೆಬ್ ತಾಣದಲ್ಲಿ ತಾಂತ್ರಿಕ ದೋಷಗಳು ಕಂಡುಬಂದರೆ ಆಗ ವೆಬ್ ತಾಣದ ನಿರ್ವಾಹಕರನ್ನು ಸಂಪರ್ಕಿಸಬಹುದಾಗಿದೆ. ಅವರ ವಿಳಾಸ
Web Information Manager
South Block, Raisina Hill
New Delhi-110011
Phone No: +91-11-23012312
Fax: +91-11-23019545, 23016857

5.ಸಾಮಾಜಿಕ ಜಾಲತಾಣಗಳು
ಇನ್ನು ಪ್ರಧಾನಮಂತ್ರಿಗಳು ಸಾಮಾಜಿಕ ಜಾಲತಾಣಗಳ ಮುಖಾಂತರವಾಗಿಯೂ ಸಾರ್ವಜನಿಕರಿಗೆ ಲಭ್ಯವಿದ್ದು, ಪ್ರಧಾನಿಗಳ ಫೇಸ್ ಬುಕ್ ಖಾತೆ ಸರ್ಕಾರಿ ಅಧಿಕೃತ ಫೇಸ್ ಬುಕ್ ಖಾತೆ   http://facebook.com/pmoindia ಮತ್ತು ವೈಯುಕ್ತಿಕ ಫೇಸ್ ಬುಕ್ ಖಾತೆ https://www.facebook.com/narendramodi ಮೂಲಕ ಸಂಪರ್ಕಿಸಬಹುದು. ಇನ್ನು ಟ್ವಿಟರ್  ಮುಖಾಂತರ ಸಂಪರ್ಕಿಸ ಬಯಸುವವರು, ಸರ್ಕಾರಿ ಅಧಿಕೃತ ಟ್ವಿಟರ್ ಖಾತೆ https://twitter.com/PMOIndia ಮತ್ತು ವೈಯುಕ್ತಿಕ ಟ್ವಿಟರ್ ಖಾತೆ  https://twitter.com/Narendramodi ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ.

ಪ್ರಧಾನಿಗಳ ಇತರೆ ಸಾಮಾಜಿಕ ಜಾಲತಾಣಗಳ ವಿವರ ಈ ಕೆಳಗಿನಂತಿವೆ.
https://www.youtube.com/user/narendramodi/about

http://weibo.com/u/5581682776

https://in.linkedin.com/in/narendramodi

https://instagram.com/narendramodi/

ಇ-ಮೇಲ್
ಇನ್ನು ಇ-ಮೇಲ್ ಮೂಲಕ ಪ್ರಧಾನಿಗಳನ್ನು ಸಂಪರ್ಕಿಸಿ ದೂರು ಹೇಳ ಬಯಸುವವರು ಅವರ ಜಿಮೇಲ್ ಖಾತೆ narendramodi1234@gmail.com ಮೂಲಕ  ಸಂಪರ್ಕಿಸಬಹುದಾಗಿದೆ.

ಮಿಸ್ ಕಾಲ್ ನೀಡಿ ಪ್ರಧಾನಿ ಟ್ವೀಟ್ ಅನ್ನು ಎಸ್ ಎಂ ಎಸ್ ಮೂಲಕ ಪಡೆಯಿರಿ
ಸರ್ಕಾರದ ಒಂದು ನಂಬರ್ ಗೆ ಮಿಸ್ ಕಾಲ್ ನೀಡುವ ಮೂಲಕ ಇನ್ನು ಮುಂದೆ ನಾವು ಇಂಟರ್ ನೆಟ್ ನ ನೆರವಿಲ್ಲದೇ ನಮ್ಮ ಮೊಬೈಲ್ ನಲ್ಲಿ ಪ್ರಧಾನಿಗಳ ಟ್ವೀಟ್ ಪಡೆಯಬಹುದು.  ಇಂತಹದೊಂದು ವ್ಯವಸ್ಥೆಯನ್ನು 2015ರಲ್ಲಿ ಜಾರಿಗೆ ತರಲಾಗಿದ್ದು, 011 3006 3006ಕ್ಕೆ ಮಿಸ್ ಕಾಲ್ ನೀಡುವ ಮೂಲಕ ಪ್ರಧಾನಿ ಟ್ವೀಟ್ ಗಳನ್ನುಎಸ್ ಎಂಎಸ್ ಮೂಲಕ ಪಡೆಯಬಹುದಾಗಿದೆ.

ನಮೋ ಆ್ಯಪ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com