ಲಂಗ ದಾವಣಿಯ ಆ ಹುಡುಗಿಯ ಮರೆಯಲೆಂತು?

ಲಂಗ ದಾವಣಿಯ ಆ ಹುಡುಗಿಯ ಮರೆಯಲೆಂತು?

ಸುಮಾರು ವರ್ಷಗಳ ಹಿಂದೆ. ಅಂದ್ರೆ 2007ರಲ್ಲಿ ನಾನು ಐಟಿಐ ನಲ್ಲಿ ಓದುತ್ತಿದ್ದೆ, ಆವಾಗ ನಡೆದದ್ದು. ಪ್ರತಿದಿನ ಬೆಳಗ್ಗೆ ಎದ್ದು 6.45 ರೆಡಿಯಾಗಿ ಬಸ್ ಸ್ಟಾಪ್ಗೆ ಬಂದು ಬಸ್ಗೆ ವೈಟ್ ಮಾಡ್ತಿದ್ದೆ. ನಮ್ ಊರಿನಲ್ಲಿ ಒಬ್ಬಳು ಹುಡುಗಿ ಅವಳು ನೋಡಲು ತುಂಬಾ ಸುಂದರವಾಗಿದ್ದಾಳೆ ಅವಳು. ಅವಳನ್ನು ನೋಡಿದರೆ ಎಂಥವರಿಗೂ ಲವ್ ಮಾಡ್ಬೇಕು ಅನಿಸುತ್ತೆ ಆ ಥರ ಇದ್ದಾಳೆ. ಹೀಗೆ ಪ್ರತಿದಿನ ಬರ್ತಿದ್ದೆ. ಒಂದು ದಿನ ಅವರ ಕಾಲೇಜ್ನಲ್ಲಿ ಏನೋ ಫಂಕ್ಷನ್ ಇತ್ತು ಅಂತಾ ಕಾಣುತ್ತೆ. ಅವತ್ತು ಲಂಗ ದಾವಣಿ ಹಾಕೊಂಡು ಬಂದಿದ್ಲು. ಅವತ್ತು ಅವಳನ್ನು ಮೋಡಿ ನನಗೆ ಲವ್ ಆಯ್ತು. ಹೀಗೆ ದಿನಾ ಬಸ್ನಲ್ಲಿ ಹೋಗ್ತಿದ್ವಿ. ಒಂದು ದಿನ ಎಲ್ಲೂ ಕೂರಲು ಸೀಟ್ ಇರ್ಲಿಲ್ಲ. ನನ್ ಪಕ್ಕ ಬಂದು ಕೂತ್ಕೊಂಡ್ಲು. ನನ್ಗೆ ಫುಲ್ ಖುಷಿ ಆಯ್ತು ಮತ್ತೆ ಜೊತೆಗೆ ಟೆನ್ಶನ್ ಕೂಡಾ  ಆಯ್ತು. ಅವತ್ತೇ ಪ್ರೊಪೋಸ್ ಮಾಡ್ಬೇಕು ಅನ್ಕೊಂಡೆ. ಆದ್ರೆ ಭಯ..ಎಲ್ಲಿ ರಿಜೆಕ್ಟ್ ಮಾಡ್ತಾಳೋ ಅಂತ. ಹಾಗೆ ಕಂಟ್ರೋಲ್ ಮಾಡ್ಕೊಂಡು ಕೂತ್ಕೊಂಡೆ . ಅವಳೂ ನಾನೂ ಒಂದು ಬಸ್ ಸ್ಟಾಪ್ನಲ್ಲಿ ಇಳಿದುಕೊಳ್ಳುತ್ತಿದ್ವಿ. ಅವತ್ತೂ ಹಾಗೇನೇ ಇಳಿದುಕೊಂಡ್ವಿ. ಅವಳು ಕಾಲೇಜು ಹೋದ್ಲು, ಆದ್ರೆ ನನಗೆ ಕಾಲೇಜ್ ಹೋಗೋಕೆ ಯಾಕೋ ಮನಸ್ಸು ಆಗ್ಲಿಲ್ಲ. ಇವತ್ತು ಏನಾದ್ರೂ ಆಗ್ಲಿ ಪ್ರೊಪೋಸ್ ಮಾಡೋಣ ಅಂತ ಅನ್ಕೊಂಡು ಗಿಫ್ಟ್ ಸೆಂಟರ್ಗೆ ಹೋಗಿ ಒಂದು ಗ್ರೀಟಿಂಗ್ಸ್ ತಂದು ಪಾರ್ಕ್ನಲ್ಲಿ ಕೂತ್ಕೊಂಡು ಒಂದು ಕವನ ಬರೆದೆ.

ಪ್ರೀತಿ ಎಂದರೆ ಕಾಮನಬಿಲ್ಲು
ನೋಟಗಳ ನಡುವೆ ಜನಿಸಿ
ಮನಸುಗಳ ನಡುವೆ ಕರಗಿ
ಹೃದಯಕ್ಕೆ ಒಲವಿನ ಕನಸುಗಳ
ಸುರಿಮಳೆ  ಅಮೃತ ಸಿಂಚನ

ಹೀಗೆ ಒಂದು  ಕವನ ಬರೆದು ನನ್ ಲವ್ ಬಗ್ಗೆ  ಫೀಲ್ ಮಾಡ್ತಿದ್ದೆ. ಹೇಗೆ ಪ್ರೊಪೋಸ್ ಮಾಡ್ಬೇಕು ಅಂತ, ಹಾಗೇನೇ ಇನ್ನೊಂದು ಕವನ ನೆನಪಿಗೆ ಬಂತು. ಅದನ್ನೂ ಬರೆದೆ.

ಮನಸು ಬಯಸೋದು ಆನಂದ
ಬಡವ ಬಯಸೋದು ಸುಖ
ಶತ್ರು ಬಯಸೋದು ಸ್ನೇಹ
ಆದ್ರೆ ನಾನು ಬಯಸೋದು
ನಿನ್ನ ಪ್ರೀತಿ...ಪ್ರಿಯತಮೆ

ಹೀಗೆ ಒಂದೊಂದು  ಕವನ ಬರೆದು ಕಾಯ್ತಾ ಇದ್ದೆ. ಸಂಜೆ ಆಯ್ತು ನಾನು ಬಸ್ ಸ್ಟಾಪ್ಗೆ ಬಂದೆ. ಅಷ್ಟೊರೊಳಗೆ ಅವಳು ಬಸ್ ಸ್ಟಾಪ್ಗೆ ಬಂದ್ಳು. ಆದ್ರೆ ನನಗೆ ತುಂಬಾ ಟೆನ್ಶನ್ ಆಯ್ತು. ಹೇಗೆ ಮಾತಾಡ್ಸೋದು ಅಂತ. ಧೈರ್ಯ ಮಾಡಿ ಹತ್ತಿರ ಹೋದೆ. ಅವಳು ನನ್ನೇ ನೋಡಿದ್ಳು . ನಾನು ಹಾಯ್ ಅಂತ ಹೇಳಿದೆ. ಅವಳು ಹಾಯ್ ಅಂತ ಹೇಳಿದ್ಳು.  ಹಾಗೇ ಮಾತಾಡಿದ್ವಿ,  ಏನ್ ಇವತ್ತು ತುಂಬಾ ಚೆನ್ನಾಗಿ ಕಾಣಿಸ್ತಿದ್ದೀಯಾ ಅಂದೆ. ಅದಕ್ಕೆ ಅವಳು ಹಾಗೇನಿಲ್ಲ...ಕಾಲೇಜ್ನಲ್ಲಿ ಫಂಕ್ಷನ್  ಇತ್ತು ಸೋ ...ಅಂತ ಹೇಳಿದ್ಳು...ಹೌದಾ ಸರಿ ಅಂದೆ.

ಆಮೇಲೆ ರೀ..ನಿಮ್ಮತ್ರ ಪರ್ಸನಲ್ ಆಗಿ ಮಾತಾಡ್ಬೇಕು ಅಂದೆ. ಅದಕ್ಕೆ ಅವಳು ನನ್ನತ್ರ ನಾ? ಅಂದ್ಳು. ಹೌದು ಅಂತ ಹೇಳಿದೆ. ಸರಿ ಹೇಳಿ ಅಂತ ಹೇಳಿದ್ಳು. ಅದ್ಕೆ ಇಲ್ಲಿ ಬೇಡ ಅಂದೆ.  ಯಾಕೆ ಅಂತ ಕೇಳಿದ್ಳು. ಜನ ಇದ್ದಾರೆ ಅಂದೆ. ಸ್ವಲ್ಪ ದೂರದಲ್ಲಿ ಪಾರ್ಕ್ ಇತ್ತು. ಅಲ್ಲಿಗೆ ಹೋದ್ವಿ. ಒಂದು  ಕಡೆ ಭಯ ಇನ್ನೊಂದು ಕಡೆ ಟೆನ್ಶನ್ ಆಗಿತ್ತು. ಅವಳು ಹೇಳಿ ಅಂತ ಕೇಳಿದ್ಳು.
ನಾನು ನನ್ನ ಬ್ಯಾಗ್ ನಲ್ಲಿ ಇರೋ ಗ್ರೀಟಿಂಗ್ಸ್ ತಗೊಂಡು ಅವಳಿಗೆ ಕೊಟ್ಟು ಐ ಲವ್ ಯೂ ಅಂತ ಹೇಳ್ದೆ. ಆ ಟೈಮ್ನಲ್ಲಿ ಅನಳಿಗೂ ಶಾಕ್ ಆಯ್ತು.
ಏನ್, ಏನ್ ಹೇಳ್ತಿದ್ದೀರಾ ಅಂತ ಕೇಳಿಬಿಟ್ಲು. ಅದ್ಕೆ ನಾನು  ನೀವು ಅಂದ್ರೆ ನನಗೆ ತುಂಬಾ ಇಷ್ಟ. ಅಂದಕ್ಕೆ ಅಂತ ಹೇಳಿದೆ. ಅದಕ್ಕೆ ಏನೂ ಹೇಳಿಲ್ಲ ಹಾಗೇ ಹೋಗ್ತಿದ್ಳು. ಆಮೇಲೆ ನಿಂತ್ಕೊಂಡು ಮತ್ತೆ ವಾಪಸ್ ಬಂದ್ಳು. ನಾನು ಬಂದಿದ್ದು ನೋಡಿ ಐ ಲವ್ ಯೂ ಅಂತಾ ಹೇಳ್ತಾಳೆ ಅನ್ಕೊಂಡೆ. ಆದ್ರೆ ಅಲ್ಲಿ ಆಗಿದ್ದು ಬೇರೆ. ಅವಳು ಗ್ರೀಟಿಂಗ್ಸ್ನ ವಾಪಸ್ ಕೊಟ್ಟು ಹೇಳಿದ್ಳು . ನಾನು ಒಂದು ಹುಡುಗನ ಲವ್ ಮಾಡ್ತಿದ್ದೀನಿ ಅಂತ. ಆವಾಗ ನಾನು ಏನ್  ಮಾಡ್ಬೇಕು ಅಂತ ಹೊತ್ತು ಆಗ್ಲಿಲ್ಲ. ಹಾಗೇ 5 ಮಿನಿಟ್ಸ್ ನಿಂತ್ಕೊಂಡೆ. ಅವಳು ಸ್ಸಾರಿ ಅಂತ ಹೇಳಿ ಹೊರಟು ಹೋದ್ಳು.

ಹಾಗೆ 2 ದಿನ ಕಾಲೇದು ಹೋಗಿಲ್ಲಯ 2 ದಿನ ಕಳೆದ ಮೇಲೆ ಕಾಲೇಜು ಹೋಗೋಕೆ ಅಂತ ಬಸ್ ಸ್ಟಾಪ್ಗೆ ಬಂದೆ. ಅವಳು ಅಲ್ಲಿಗೆ ಬಂದ್ಳು. ನಾನು ಅವಳ ಹತ್ತಿರ ಹೋಗಿ ಸ್ಸಾರಿ, ನನಗೆ ನೀವು ಲವ್ ಮಾಡ್ತಿರೋ ವಿಷ್ಯ ಗೊತ್ತಿರ್ಲಿಲ್ಲ ಅಂದೆ. ಅದ್ಕೆ ಅವಳು ಪ್ಲೀಸ್ ಈ ವಿಷ್ಯ ಯಾರೂ ಹೇಳ್ಬೇಡಿ ಅಂತ ಹೇಳಿದ್ಳು. ನಾನು ಸರಿ ಅಂತ ಹೇಳಿದೆ. ಅವತ್ತಿನಿಂದ ನಾನು ಅವಳೂ ಫ್ರೆಂಡ್ ಆದ್ವಿ.
ಆದ್ರೆ ನಾನು ಅವಳ ನೋಡಿದಾಗ ಯಾವಾಗಲೂ ನೆನಪು ಆಗೋದು...
ಕನಸನ್ನು ಮರೆಯಬಹುದು, ಕಾಣದ ನೋವನ್ನು ಮರೆಯಬಹುದು
ಆದ್ರೆ ಬದುಕಿನ ಅನುಭವ ತಂದ ಆ ಪ್ರೀತಿ ನಾ  ಹೇಗೆ ಮರೆಯಲಿ ಗೆಳತಿ..


-ಚಿದಾನಂದ ಟಿ. ಎಂ
ಹಾಸನ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com