ನಿನ್ನ ಆಗಮನದ ನಿರೀಕ್ಷೆಯಲ್ಲಿ...

ಮೈ ಕಣ-ಕಣವೆಲ್ಲ ನೋವು, ಹಿ೦ಸೆ, ಯಾತನೆ, ಅದೆ೦ತಹ ಜ್ವರಾನೋ ಏನೋ...? ಕೆಲವು ದಿನಗಳಿಂದ ಹಾಸಿಗೆ...
ನಿನ್ನ ಆಗಮನದ ನಿರೀಕ್ಷೆಯಲ್ಲಿ...

ಎಷ್ಟು ಹೊದ್ದರೂ ಕಡಿಮೆಯಾಗದಿರೋ ಚಳಿ!  ಅಷ್ಟು ಚಳಿಯಾಗುತ್ತಿದ್ದರೂ ಬೆ೦ಕಿಯ೦ತೆ ಸುಡುತ್ತಿರುವ ಮೈ...,

ಮೈ ಕಣ-ಕಣವೆಲ್ಲ ನೋವು, ಹಿ೦ಸೆ, ಯಾತನೆ, ಅದೆ೦ತಹ ಜ್ವರಾನೋ ಏನೋ...? ಕೆಲವು ದಿನಗಳಿಂದ ಹಾಸಿಗೆ ಮೇಲೆ ಹಾಗೆ ಉರುಳಿಕೊಂಡೇ ಇದ್ದೀನಿ. ಬೆಡ್ ಶೀಟ್ಗಳ ಒಳಗೆ ಅಪ್ಪಾ... ಅಮ್ಮಾ... ಅ೦ತ ಹೊರಳಾಡುತ್ತಾ ಇದೀನಿ... ಮೈಯಲ್ಲಿ ಒ೦ದು ತೊಟ್ಟು ಶಕ್ತಿನೂ ಇಲ್ಲವೇನೋ ಎನ್ನುವಷ್ಟು ನಿಶ್ಯಕ್ತಿ...,

ಹೊಟ್ಟೆಯಲ್ಲಿ ಏನೋ ಸ೦ಕಟ, ತಳಮಳ, ಎಷ್ಟು ಬೇಡವೆಂದರೂ ಕಾಡ್ತಾ ಇರೋ ನಿನ್ನ ನೆನಪು,ಎಷ್ಟು ಬೇಡವೆಂದರೂ ಬರುತ್ತಿರುವ ಕಣ್ಣೀರು, ಹೇಳು ಜ್ವರ ಮತ್ತಷ್ಟು ಹೆಚ್ಚಾಗೋಕೆ ಮತ್ತಿನ್ನೇನು ಬೇಕು...?

ಅಷ್ಟಾದರೂ ಜ್ವರ ವಾಸಿಯಾಗಲಿ ಅ೦ತ ನ೦ಗೇನೂ ಅನಸ್ತಿಲ್ಲ, ಜ್ವರ ವಾಸಿಯಾಗೋಕೂ ಮುಂಚೆ" ನೀನು ಬ೦ದು ನನ್ನನ್ನು ನೋಡಬೇಕು...!" " ನಾನು ಪಡ್ತಾ ಇರೋ ಹಿ೦ಸೆ ನಿ೦ಗೆ ಗೊತ್ತಾಗಬೇಕು...!" " ಜ್ವರ ಎಷ್ಟಿದೆ ಅ೦ತ ನೀನು ನನ್ನ ಹಣೆಮುಟ್ಟಿ ನೋಡಬೇಕು...!" " ನನ್ನ ಬಿಸಿ ಕೈಗಳನ್ನು ನಿನ್ನ ತಣ್ಣಗಿನ ಕೈಗಳಿಂದ ಹಿಡ್ಕೊಬೇಕು...!" " ನಿನ್ನ ಎದೆಗೆ ಒರಗಿ ನಾನು ಹಾಗೇ ನಿಟ್ಟುಸಿರು ಬಿಡಬೇಕು...!" ಕಾಫಿ-ತಿ೦ಡಿ ಯಾವುದನ್ನೂ ತೆಗೆದುಕೊಳ್ಳಲಾರದೇ ಮಲಗಿರೋ ನನ್ನನ್ನ ಮಗು ಥರ ಮುದ್ದು ಮಾಡಿ ಬಿಸಿ ಬಿಸಿ ಕಾಫಿಗೆ ಬ್ರೆಡ್ ಅದ್ದಿ ಬಾಯಿಗಿಟ್ಟುಕೊಂಡು ತಿನ್ನಿಸಬೇಕು., ಮುದ್ದು ಮುದ್ದು ಮಾತಾಡಿ ರಮಿಸಿ ಮಾತ್ರೆ ಬಾಯಿಗಿಟ್ಟುಕೊಂಡು ನೀರು ಕುಡಿಸಬೇಕು. ಎಷ್ಟೋ ದಿನದಿಂದ ಬಾಚಣಿಗೆಯಿಂದ ಕಾಣದಿರೋ ತಲೆಯೆಲ್ಲ ನೇವರಿಸಿ ಕ್ರಾಪ್ ಸರಿ ಮಾಡಬೇಕು...

ನೋಡಿದೆಯಾ ಚಿನ್ನ ಜ್ವರದ ಮಧ್ಯೇನೂ ನಿನ್ನ ಬಗ್ಗೆ ಎಷ್ಟೊಂದು ಕನಸು ಕಾಣ್ತಿದಿನಿ ಅ೦ತ... ಬರ್ತಿಯಾ..? ಹೇಳು ಬರ್ತಿಯಾ...? ಬ೦ದು ನನ್ನ ಕನಸೆಲ್ಲ ನನಸು ಮಾಡ್ತೀಯಾ...? ವಿರಹ ವೇದನೆಯಿಂದ ಸುಡ್ತಾ ಇರೋ ನನ್ನ ಹಣೆಗೆ ಹೂ-ಮುತ್ತು ಕೊಡ್ತಿಯಾ...? ನಿನ್ನ ಪ್ರೀತಿಯೆಲ್ಲ ನನಗೆ ತುಂಬೊ ಹಾಗೇ ಗಟ್ಟಿಯಾಗಿ ನನ್ನ ಅಪ್ಪಿಕೊಂಡು ಸ೦ತೈಸುತ್ತಿಯಾ...?

ನಿನ್ನ ಜೊತೆಗಿದ್ದು ನಿನ್ನ ಮುದ್ದಾದ ಮಾತುಗಳನ್ನು ಕೇಳಬೇಕೆನಿಸುತ್ತಿದೆ.., ನನ್ನ ಬೇಜಾರೆಲ್ಲ ಹೋಗೊ ತನಕ ನನ್ನ ಜೊತೆ ಮಾತಾಡ್ತಿಯಾ...? ನಿನ್ನ ಕೈ- ಹಿಡಿದು ತ೦ಪಾದ ಸ೦ಜೆಲಿ ನಾಲ್ಕು ಹೆಜ್ಜೆ ಹಾಕುವ ತನಕ ನನ್ನ ನಿಶ್ಯಕ್ತಿ ಹೋಗಲ್ಲ ಕಣೇ..,

ನಿನ್ನ ತುಂಟತನದ ಮಾತು ಕೇಳಿ ನಾನು ಮನಸು ಬಿಚ್ಚಿ ನಗಿಸಿ ತನಕ ನನ್ನ ಸುಸ್ತು ಕಮ್ಮಿಯಾಗೊಲ್ಲ..! ನಿನ್ನ ಮಡಿಲಿನಲಿ ತಲೆ ಇಟ್ಟು ಮಗು ತರಹ ಮಲಗೋವರೆಗೂ ನ೦ಗೆ ನಿದ್ದೆ ಬರೊಲ್ಲ ಕಣೇ.., ನೊಇನು ಬರಬೇಕು; ಬ೦ದು ನನ್ನ ನೋಡಬೇಕು; ಚ೦ದಗೇ ಪ್ರೀತಿ ಮಾಡಬೇಕು; ತುಂಬಾನೇ ಮಾತಾಡಬೇಕು; ಆಗಲೇ ಈ ನನ್ನ ಜ್ವರ ವಾಸಿಯಾಗೋದು..! ಮರಳಿ ಪ್ರೇಮಿಗಳ ದಿನ ಬ೦ದಿದೆ.., ನಿನ್ನಾಸೆಯ೦ತೆಯೇ ನಾನೀಗ ಕೇ೦ದ್ರ ಸರಕಾರಿ ನೌಕರಿಯಲ್ಲಿದಿನಿ, ಮರಳಿ ಬ೦ದಿರೋ ಪ್ರೇಮಿಗಳ ದಿನದ೦ತೆ ನೀನು ಬರ್ತಿಯಾ ತಾನೇ....?
  ನಿನ್ನ ಆಗಮನದ ನಿರೀಕ್ಷೆಯಲ್ಲಿ...

ವಾಘು.ಎಸ್.ಚವ್ಹಾಣ
ನಾಗರಾಳ ತಾ೦ಡಾ, ಬೀಳಗಿ, ಬಾಗಲಕೋಟ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com