
ಪ್ರೇಮಕ್ಕೆ ಕಣ್ಣಿಲ್ಲ, ಹೌದು ಈ ಮಾತು ಎಷ್ಟು ನಿಜ ಅಲ್ವಾ?
ನಿನ್ನನ್ನು ಪ್ರಥಮ ಬಾರಿ ಭೇಟಿ ಅದಾಗಲೇ ನಾನು ಪ್ರೀತಿಗೆ ಬಿದ್ದಿದ್ದು ನಿಜ! ! ಹೌದು ಅದೇನೋ ಇಂಗ್ಲಿಷ್ನಲ ಹೇಳ್ತಾರಲ್ಲ ಲವ್ ಎಟ್ ಪರ್ಸ್ಟ್ ಸೈಟ್ ಅಂತಾ ಹಾಗೆಂದರೆ ಇದೆ ಇರಬಹುದು ಅಂತಾ ಗೊತ್ತಾಗಿದ್ದು ಆವಾಗಲೆ, ನೀನು ಬೇಕೆಂದು ನಿನಗೆ ದಂಬಾಲು ಬಿದ್ದು ಗೆಳೆಯರ ಜೊತೆ ಹೆಳಿಸಿ ನಿನ್ನನ್ನು ತೆಕ್ಕೆಗೆ ಬಿಳಿಸಿಕೊಂಡಿದ್ದು ನಾನೇ!! ಹಾಗೇ ಬಿಳಿಸಿಕೊಂಡಾಗ ನನಗೇನೂ ಸ್ವರ್ಗಕ್ಕೆ ಮೂರೆ ಗೇಣು.....
ನನಗಿನ್ನು ಪ್ರೇಮವೈಪಲ್ಯದ ಅನುಭವವೆ ಇರಲಿಲ್ಲ ನೋಡು ಆದರೆ ನೀನು ಎಲ್ಲರ ತೆಕ್ಕೆಗೆ ಅಷ್ಟೇ ಸುಲಭವಾಗಿ ಬಿಳುತ್ತಿಯ ಅಂತಾ ಗೊತ್ತಾಗಿದ್ದು ಆಮೇಲೆ... ಆ ದಿನ ನನಗೆ ಜೀವನದ ಕೆಟ್ಟ ದಿನವಾಗಿತ್ತು ಆ ವಿಷಯ ಗೊತ್ತಾದ ಮೇಲು ನನಗೆ ನಿನ್ನ ಮುಖ ನೋಡುವ ಇಚ್ಛೆ ಇರಲಿಲ್ಲ ಹೌದು ನಮ್ಮ ಕೊನೆಯ ಭೇಟಿ ಮಲ್ಲೆಶ್ವರಂನ ಮಂತ್ರಿ ಮಾಲ್ ನಲ್ಲೆ ಆಗಿದ್ದು, ನಮ್ಮ ಪ್ರೇಮಪರ್ವದಲ್ಲಿ ನಾವು ಎಲ್ಲೆಲ್ಲಾ ಸುತ್ತಾಡಿಲ್ಲ, ಎಷ್ಟು ಬಾರಿ ಭೇಟಿ ಆಗಿಲ್ಲ? ಆದರೂ 'ಅಂಜು' ನೀ ನೆನಪಾದಾಗಲೆಲ್ಲ ಗೊಪಾಲನ್ ಆರ್ಕೆಡ್ ನಲ್ಲಿ ನೊಡಿದ ಆ ನಿನ್ನ ಮುಗ್ಧ ಮುಖವೇ ಎದುರು ಬರುತ್ತದೆ!!
- ದೀಪ್ ಶೆಟ್ಟಿ
Advertisement