ಜೀವನ ನೀಡಿದ ಜೀವದ ಗೆಳತಿ

ಅಂದು ಕಾಲೇಜಿನ ಪ್ರಾರಂಭದ ದಿನ... ನಾವು ಹುಡುಗರೆಂದ ಮೇಲೆ ಹುಡುಗಿಯರನ್ನು ನೋಡುವದು ಸಹಜ ನೋಡಿದಾ ಹುಡುಗಿಯರೆಲ್ಲರೂ..
ಜೀವನ ನೀಡಿದ ಜೀವದ ಗೆಳತಿ

ಅಂದು ಕಾಲೇಜಿನ ಪ್ರಾರಂಭದ ದಿನ...... ನಾವು ಹುಡುಗರೆಂದ ಮೇಲೆ ಹುಡುಗಿಯರನ್ನು ನೋಡುವದು ಸಹಜ ನೋಡಿದಾ ಹುಡುಗಿಯರೆಲ್ಲರೂ ಇಷ್ಟ ಆಗಲ್ಲಾ....ಆದರೆ ನನ್ನ ಹೃದಯವನ್ನ ಬೆಚ್ಚಿ ಬೀಳಿಸಿದ ಚೆಲುವೆ ಸುಮ.  ಬೇರೆಯವರು ಏನಂದರೇನು ನನಗೆ ಅವಳೇ ಚೆಲುವೆ.........
ನೋಡಿ ಇಷ್ಟಪಟ್ಟಿದ್ದೇನೊ ಆಯ್ತು.  ಆದರೆ ನನ್ನ ಮನಸಲ್ಲಿರೋದನ್ನ ಅವಳಿಗೆ ಹೇಳಬೇಕಲ್ಲ.....ಬೇರೆ ಯಾವ ಕೆಲಸ ಮಾಡುವಾಗ ಇರುವ ಧೈರ್ಯ ಈ ಪ್ರಪೋಸ್ ಮಾಡುವಾಗ ಎಲ್ಲಿ ಓಡಿ ಹೋಗುತ್ತೋ....... ನಾ ಕಾಣೆ.
ಅಂತೂ..... ಒಂದು  ವರ್ಷ ಸಮಯ ತಗೊಂಡು ಹೇಳೇ ಬಿಟ್ಟೆ.... ಹುಡುಗಿಯರು ಗೊತ್ತಲ್ಲ ಇಷ್ಟ ಇದ್ರು ಸುಮ್ಮನೆ ಆಟ ಆಡಿಸ್ತಾರೆ. ಒಂದು ವಾರದ ನಂತರ ಹೇಳಿದಳು.  ಅದೂ  ನಾನು ಕೇಳಿದ ಮೇಲೆ. ಓಕೆ ನನಗೂ ಇಷ್ಟ ಅಂದ್ಲು. ಆವತ್ತಾದ ಸಂತೋಷಕ್ಕೆ ಪಾರವೇ  ಇರಲಿಲ್ಲ.... ನಾವು ಒಂದು ದಿನವೂ ಮೈಮುಟ್ಟಿ ಮಾತನಾಡಿಲ್ಲ... ಬರಿ ಕಣ್ಣಿನ ಅಳತೆಯ ದೂರದಲ್ಲಿ ನಿಂತು ನಗೂವುದು.... ಸನ್ನೆಮಾಡುವುದು..... ಆಗಾಗ ಫೋನಿನಲ್ಲಿ ಕರೆಸ್ಸಿ ಇದ್ದರೆ ಮತಾಡುವುದು.
ಅಂತೂ ಇಂತೂ ಪ್ರಥಮ ವರ್ಷ ಮುಗಿಸಿ ದ್ವಿತಿಯ ವರ್ಷಕ್ಕೆ ಕಾಲಿರಿಸಿ  ದಿನವನ್ನು ಕ್ಷಣದಂತೆ ಅದನ್ನು ಮುಗಿಸಿದೆವು.... ದ್ವಿತಿಯ ಪಿ.ಯು.ಸಿ ಯಲ್ಲಿ ನಾನು ಫೇಲ್ ಆದೆ ಅವಳು ಪಾಸದಳು.... ಮತ್ತೆ ಪರೀಕ್ಷೆ ಕಟ್ಟಿದರೂ ಉಪಯೋಗವಾಗಲಿಲ್ಲ...
ಆಗ ಅವಳು ಹೇಳಿದ ಮಾತುಗಳು ಪ್ರೀತಿ ಮಾಡಲು ಇನ್ನು ತುಂಬಾ ಸಮಯವಿದೆ. ನೀನು ಫೇಲಾಗಿದಿಯಾ ಅಂದ್ರೆ ಸೋತಿದಿಯಾ ಅಂತಲ್ಲಾ....ಗೆಲುವಿಗೆ ತುಂಬಾ ಅವಕಾಶ ಗಳಿದೆ, ಹೋಗು ಏನಾದ್ರು ಒಂದು ಕೆಲಸ ಹುಡುಕು ಜಿವನದಲ್ಲಿ ಯೆನಾದ್ರು ಸಾಧನೆ ಮಾಡು. ಇಡೀ  ಜಗತು ನಿನ್ನನ್ನ ಗುರುತಿಸುವಂತಾಗಲಿ ಅವಳ ಆ ಒಂದೇ  ಮಾತಿಗೆ ಪ್ರೀತಿಗೆ ಬೆಲೆಕೊಟ್ಟು ನಾನು ಬೆಂಗಳೂರಿಗೆ ಬಂದು ಕೆಲಸ ಮಾಡುತ್ತಿದ್ದೇನೆ....... ಅವಳನ್ನು ನೋಡದೆ ಇವತ್ತಿಗೆ 2 ವರ್ಷ 3 ತಿಂಗಳು 7 ದಿನವಾಗಿದೆ ಆದರೆ ನಾನು ಏನಾದರು ಒಂದು  ಸಾಧಿಸಿಯೇ ಅವಳ ಮುಂದೆ ಹೋಗೆ ನಿಲ್ಲೋದು. ಅವಳು ಕೂಡಾ ನನಗಾಗೀ ಕಾಯುತ್ತಿದ್ದಾಳೆ
 ನಾ ಬೇಗನೆ ಹೋಗಬೇಕು ಅವಳಿಗಾಗೀ...... ಕಾಯುವಿಕೆಗಾಗಿ...  ಪ್ರೀತಿಗಾಗೀ........

-ಪ್ರಶಾಂತ್ ನಾಯ್ಕ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com