
ನಾನು 3 ವರ್ಷದಿಂದ ಲವ್ ಮಾಡಿದೆ. ನಾನು ಪ್ರೀತಿ ಮಾಡಿದ ಹುಡುಗನ ನಾನು ಎಷ್ಟು ನಂಬಿದೆ ಅಂದ್ರೆ ಅವನ್ನ ನಾನು ನಾನು ಲವ್ ಮಾಡಿದ್ದು ಅವನು ಚೆನ್ನಾಗಿದೆ ಅಂತಾ ಆಗ್ಲಿ ಅಥವಾ ಅವನ ಹತ್ತಿರ ಆಸ್ತಿ ಇದೆ ಅಂತಾ ಆಗ್ಲಿ ಅಲ್ಲ. ಅವನಿಗೆ ಹೆಣ್ಣು ಅಂದ್ರೆ ತುಂಬಾ ಗೌರವ. ಅವನು ಎಷ್ಟು ಹೆಣ್ ಮಕ್ಳು ಮುಂದೆ ಇದ್ರೂ ಕೂಡಾ ಅವನು ಅವರನ್ನು ತಲೆ ಎತ್ತಿ ಕೂಡಾ ನೋಡ್ತಾ ಇರ್ಲಿಲ್ಲ, ಅದಕ್ಕೆ ನಾನು ಅನ್ಕೊಂಡೆ ಇಂಥವರೂ ಕೂಡಾ ಭೂಮಿ ಮೇಲೆ ಇದ್ದಾರಾ? ಅಂತ ಖುಷಿ ಆಗಿತ್ತು.
ಎಷ್ಟೋ ಜನ ನನಗೆ ಐಲವ್ ಯೂ ಅಂತ ಹೇಳಿದ್ರೂ ನನಗೆ ಮನಸ್ಸು ಇರ್ಲಿಲ್ಲ. ಆದರೆ ಅವನ ನಡವಳಿಕೆ ನಂಬಿ ನಾನೇ ಐ ಲವ್ ಯೂ ಅಂತಾ ಹೇಳಿದೆ. ಆದ್ರೆ ನಾನು 3 ವರ್ಷ ಪ್ರೀತಿ ಮಾಡಿದ್ರೂ ಕೂಡಾ ಅವನ ಬಗ್ಗೆ ಒಂದು ವಿಷ್ಯದಲ್ಲೂ ಕೆಟ್ಟ ಯೋಚನೆ ಮಾಡಿರ್ಲಿಲ್ಲ. ಆ ಥರ ನಡ್ಕೊಂಡೂ ಇರ್ಲಿಲ್ಲ. . ನಾನು ಅವನ ಮೇಲೆ ಇಟ್ಟಿದ್ದ ನಂಬಿಕೆ, ನನಗೆ ನನ್ನ ಮೇಲೂ ನಂಬಿಕೆ ಇರ್ಲಿಲ್ಲ. ಅಷ್ಟು ನಂಬಿಕೆ ಇಟ್ಟಿದ್ದೆ. ನಾನು ಏನಾದ್ರೂ ತಪ್ಪು ಮಾಡ್ಬಹುದು ಆದ್ರೆ ಅವನು ಮಾಡೋಕೆ ಸಾಧ್ಯನೇ ಇಲ್ಲ.
ಅದರಲ್ಲೂ ಹುಡ್ಗೀರ ವಿಷ್ಯದಲ್ಲಿ ಮಾತ್ರ ಅವನು ಅಪರಂಜಿ ಅನ್ಕೊಂಡು ನನಗೆ ನಾನೇ ಖುಷಿ ಪಡ್ತಾ ಇದ್ದೆ. ನನಗೆ ಧಿಮಾಕು ಕೂಡಾ ಬಂದಿತ್ತು. ಯಾಕೆ ಗೊತ್ತಾ ನನಗೆ ಸಿಕ್ಕಿರುವಂತಹಾ ಹುಡುಗ ಯಾರಿಗೂ ಸಿಗೋದಕ್ಕೆ ಸಾಧ್ಯ ಇಲ್ಲ ಅಂತ. ದೇವರು ಸೃಷ್ಟಿ ಮಾಡಿರೋ ಈ ಪ್ರಪಂಚದಲ್ಲಿ ಹುಡ್ಗೀರ ಬಗ್ಗೆ ಒಳ್ಳೆ ಭಾವನೆ ಇಟ್ಟಿರುವವನು ಇವನೊಬ್ಬನಲ್ಲೇ ಅಂತ..ಆದ್ರೆ ನನ್ನ ಪ್ರೀತಿಯ ಈಗಿನ ಸ್ಥಿತಿ??
ನಾನೇ ಕಡಿದು ಹಾಕಿದ್ದೀನಿ. ಭೂಮಿ ಮೇಲೆ ಗಂಡು ಅನ್ನೋ ಏನ್ ಪ್ರಾಣಿ ಇದೆಯೋ ಆ ಪ್ರಾಣಿ ಯಾವತ್ತೂ ನಂಬೋದಿಲ್ಲ. ಅವನು ನನ್ನ ಜತೆ ಪ್ರೀತಿ ಮಾಡ್ಕೊಂಡು ಬೇರೆ ಹುಡುಗಿ ಜತೆ ಸಂಬಂಧ ಇಟ್ಕೊಂಡಿದ್ದ. ನನಗೆ ಆ ಸತ್ಯ ಗೊತ್ತಾದ ಮೇಲೆ ನಾನು ಅನುಭವಿಸಿರೋ ಕಷ್ಟ ಆ ದೇವರಿಗೇ ಗೊತ್ತು. ನಾನು ಅವನ ಪ್ರೀತಿ ಮಾಡಿದ್ದು ನಂಬಿಕೆಯಿಂದ. ಅದೇ ನಂಬಿಕೆಗೆ ಅರ್ಹನಲ್ಲ ಅವನು. ನಾನು ಅವನಿಂದ ಕಲ್ತಿರೋದು ಅರ್ಥ ಮಾಡಿಕೊಂಡಿರೋದು ತುಂಬಾ ನೇ ಇದೆ. ಪ್ರಪಂಚ ಅನ್ನೋದು ಹೇಗಿದೆ?. ಗಂಡಿನ ಮೋಸ ಎಲ್ಲ ತಿಳಿದುಕೊಂಡಿದ್ದೀನಿ. ಅದ್ಕೆ ನಾನು ನನ್ನ ಜೀವನದಲ್ಲಿ ಮದ್ವೆ ಆಗ್ಬಾರ್ದು. ಯಾಕೆ ಅಂದ್ರೆ ಗಂಡು ಅನ್ನೋ ಪ್ರಾಣಿ ನಂಬಿಕೆಗೆ ಅರ್ಹನಲ್ಲ ಅದಕ್ಕೆ ಅಸಹ್ಯ ನನಗೆ. ಇರೋವರೆಗೂ ನಾನು ನಮ್ಮ ಅಪ್ಪ ಅಮ್ಮನ ಚೆನ್ನಾಗಿ ನೋಡ್ಕೊಂಡು ಅವರು ಸತ್ತದಿನ ನನ್ನ ಜೀವನದ ಅಂತ್ಯ ಅಷ್ಟೇ.
ಪ್ಲೀಸ್ ಫ್ರೆಂಡ್ ಪ್ರೀತಿ ಅನ್ನೋದು ಮಾಡಿ ನಿಮ್ಮ ಜೀವನಾನ ನಿಮ್ಮ ಕೈಯಿಂದನೇ ಹಾಳು ಮಾಡಿಕೊಳ್ಳಬೇಡಿ. ಯಾಕೆಂಂದ್ರೆ ನಾನಗೇನೋ ಮುಂಚೆ ಗೊತ್ತಾಯ್ತು. ಆದ್ರೆ ಎಷ್ಟೋ ಹೆಣ್ಮಕ್ಕಳು ಅವರನ್ನು ನಂಬಿ ಮದ್ವೆ ಆಗ್ತಾರೆ ಈಗ ಸಾಯೋವರೆಗೂ ಅನುಭವಿಸ ಬೇಕಾಗುತ್ತದೆ. ಪ್ರೀತಿ ಅನ್ನೋ ಅಸಹ್ಯ ನಾ ಮಾಡಿ ನಿಮ್ಮ ಜೀವನ ನಿಮ್ಮ ಕೈಯ್ಯಾರೆ ಹಾಳು ಮಾಡ್ಕೋಬೇಡಿ. ಪ್ರೀತಿ ಅನ್ನೋದು ಬರೀ ಮೋಸ. 100 ಶೇ. ಸತ್ಯ
ಕವಿತಾ
Advertisement