ನೀ ಬಂದು ನಿಂತಾಗ... ನಿಂತು ನೀನು ನಕ್ಕಾಗ

ನೀ ಬಂದು ನಿಂತಾಗ... ನಿಂತು ನೀನು ನಕ್ಕಾಗ

ಮುಂಜಾನೆಯ ಮಂಜಲ್ಲಿ, ಮೋಡ ಕವಿದ ವಾತಾವರಣದಲ್ಲಿ , ತಂಗಾಳಿಯಂತೆ ಅವಳು ಬಂದು..
Published on

ಮುಂಜಾನೆಯ ಮಂಜಲ್ಲಿ, ಮೋಡ ಕವಿದ ವಾತಾವರಣದಲ್ಲಿ , ತಂಗಾಳಿಯಂತೆ ಅವಳು ಬಂದು.. 

ಮನವೆಂಬ ಕಿಟಕಿಯಲಿ ಇಣುಕಿ ; ಕೆಣಕಿದಳು ತನ್ನ ಕಣ್ಣೋಟದಲಿ...
ಬಡಪಾಯಿ ನಾನೇನು ಮಾಡಲಿ ; ಬಿದ್ದೆನಾ.. ಮೋಹಪಾಶದಲಿ...
   ಅವಳಂದು ಕಂಡಾಗ ನನ್ನ; ಮರುಭೂಮಿಯಂತಿದ್ದ ಮನದಲ್ಲಿ, ಪ್ರೀತಿ ಗಿಡ ಚಿಗುರಿದ ಅನುಭವ. ಅಷ್ಟ್ ದಿನ ಕಾಲೇಜಿಗೆ ಅಟೆಂಡೆನ್ಸಗಾಗಿ ಹೋಗ್ತಿದ್ದ ನನಗೆ, ಅವಳ್ ಕಾಣೋದೇ ಟೈಮ್ ಟೇಬಲ್ ಆಗೋಯ್ತು. ನಂತ್ರ ಅಂದೊಮ್ಮೆ...

   ನನ್ನ ನೋಡಿ ನಕ್ಕಳು ನಾಚಿದಳು ; ಅವಳೆ ನನ್ನವಳು.., ಬಲಗೆನ್ನೆಯ ಮೇಲೆ ಪುಟ್ಟ ಕಪ್ಪು ಮಚ್ಚೆಯಿರುವವಳು. ಹೆಸರೇನು ಬೇಡ ಹೇಳೋದು. ಈ ತರಹ ಹೇಳದೇ , ಕೇಳದೆ, ಎದುರಿಗೆ ಕಂಡಾಗ ತಲೆ ಎತ್ತಿ ನೋಡದೆ ಪ್ರೇಮಿಸುವ ನನ್ನ ಈ ಪರಿಗೆ,ನಾನಾಗ್ತಿದ್ದೆ ಕಾಮಿಡಿ ಪೀಸು ನನ್ನ ಗೆಳೆಯರಿಗೆ. ಪ್ರತಿದಿನ ಇವತ್ತು ಹೇಳ್ಲೇಬೇಕು ಅಂದು ಕೊಳ್ಳೊದು, ಆಗ್ದೇ ಸುಮ್ಮನಿರೋದೇ ಆಗಿ, ವರ್ಷವೇ ಕಳೆಯಿತು. ಈ ನನ್ನ ಸೈಲೆಂಟು , ಆಗೇಹೋಯ್ತು ತುಂಬಾ ಲೇಟು. ಹಾರಿಯೇ ಹೋಯ್ತು ಆ ಹಕ್ಕಿ ಬಿಟ್ಟು ಹಳೇ ಫೀಲಿಂಗ್ಸು... ಬಂದೇ ಇರ್ಬೇಕಲ್ಲ ನಿಮ್ಗೂ ನನ್ ಮೇಲೆ ಸೆಂಟಿಮೆಂಟು.? 

ಫಸ್ಟ್ ಟೈಮ್ ಹೇಳೇ ಬಿಡ್ತಿನಿ ನನ್ನ ಹಳೆ ಗೆಳತಿಗೆ "ತೊಮಾರಿ ಪೌರುಷೆ ಭಾಲು ಭಾಷಿ.." ಸಿಂಪಲ್ಲಾಗಿ  I love you... ಕಣೆ..

- ಯಕಂಶ (ಶರಣಬಸವ ಬಿ.)

ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ,  ಶಿವಮೊಗ್ಗ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com