
ನನ್ನಲ್ಲಿ ಪ್ರೀತಿ ಶುರುವಾಗಿದ್ದು 3 ವರ್ಷದ ಕೆಳಗೆ. ಅವನ ಭಾಷೆ ನನಗೆ ಬರ್ತಿರ್ಲಿಲ್ಲ, ನನ್ನ ಭಾಷೆ ಅವನಿಗೆ ಅರ್ಥವಾಗಿರ್ತಿಲ್ಲಿಲ್ಲ. ಯಾಕಂತ ಗೊತ್ತಿಲ್ಲ ಆಫೀಸಿನ ಮೊದಲ ದಿನದಿಂದ ಅವನು ತುಂಬಾ ಇಷ್ಟವಾಗಿಬಿಟ್ಟು. ಗೊತ್ತಿಲ್ಲದೇನೇ ಪ್ರೀತಿಸಿಬಿಟ್ಟೆ. ಬಿಟ್ಟಿಲರಾದಷ್ಟು ಆದ್ರೆ ನನ್ನ ಪ್ರೀತಿನಾ ಅವನ ಹತ್ರ ಹೇಳಿಕೊಳ್ಳಲೇ ಇಲ್ಲ. ಎಲ್ಲಿ ನಿರಾಕರಿಸಿಬಿಡ್ತಾನೋ ಅಂಥ . ಅವನ ಜೊತೆಗೆ ಇದ್ರೂ ಅವ್ನ ನಾನು ಸತ್ತೋಗಿರೋವಷ್ಟು ಪ್ರೀತಿಸ್ತಾ ಇದ್ದೀನಿ ಅನ್ನೋದು ಅವನಿಗೆ ಗೊತ್ತಾಗಲೇ ಇಲ್ಲ. ಈ ನಡುವೆ ನಂಗೆ ಮದ್ವೆ ಆಯ್ತು. ನನಗೆ ತಾಳಿ ಕಟ್ಟಿದವರಿಗೆ ನಾನು ಇಷ್ಟ ಇರಲಿಲ್ಲ ಅನ್ನೋದು ಮದ್ವೆ ಆದ 3 ದಿನಕ್ಕೆ ಗೊತ್ತಾಯ್ತು. ಏನು ಹೇಳೋ ಸ್ಥಿತಿಲೀ ನಾನಿರಲಿಲ್ಲ. ನನ್ನವರ ಬಳಿ ನಾನೇನೂ ಕೇಳಲಿಲ್ಲ. ಪ್ರೀತಿಸಿದವನ ನೆನಪಲ್ಲೇ ಅವನ ಜೊತೆ ಕಳೆದ ಮಧುರ ಕ್ಷಣಗಳ ನೆನಪಿನಲ್ಲಿ ನನ್ನೆದೆಯೊಳಗೆ ಬದುಕಿನ ಗುಡಿ ಕಟ್ಟಿ ನನ್ನವನ ಅದರಲ್ಲಿಟ್ಟು ಪೂಜಿಸ್ತಾ , ಪ್ರೀತಿಸ್ತಾ ಇದ್ದೀನಿ. ಪ್ರೀತಿಸ್ತಾನೇ ಇರ್ತೀನಿ ಬದುಕಿನುದ್ದಕ್ಕೂ ...ನನ್ನವನು ರಾಜಕುಮಾರ... ನಾನವನ ರಾಜಕುಮಾರಿ
-ಭಾಗ್ಯ ಬೊಬ್ಲಿ
Advertisement