
ನಿನ್ನ ಒಂದು ಕಿರುನಗೆ ಅಂದು ನನ್ನನ್ನು ಸೆಳೆಯುತ್ತಿತ್ತು. ಅಂತಹ ಅಗಾಧವಾದ ಜನರ ಸದ್ದಿನ ನಡುವೆ, ನಿನ್ನ ನಗುವಿನ ಸದ್ದು ನನಗೆ ಮಾತ್ರ ಕೇಳಿಸುತ್ತಿತ್ತು. ಒಂದು ಕ್ಷಣದಲ್ಲಿ ಏನೋ ಹೇಳಿದಂತಾಯಿತು,ಮನಸ್ಸು ಮತ್ತೇ,ಮತ್ತೇ ಯೋಚನೆಗೆ ಮುಳುಗಿತು.ಮನಸ್ಸಿನ ದಡದಲ್ಲಿ ಅದನ್ನು ನೋಡುತ್ತಿದ್ದೆ,ನಿನ್ನದೇ ನೆನಪುಗಳ ಸಾಲುಗಳು,ಕಣ್ಣ್ಮುಂದೆ ಹರಿದು ಹೋಗ್ತಾ ಇವೆ.
ನಮ್ಮಿಬ್ಬರ ನಡುವಿನ ಈ ಕಣ್ಣುಗಳ ಸಲುಗೆಯಿಂದ.ಇಂದು ಈ ಮನಸ್ಸುಗಳು ತುಂಬ ಸನೀಹವಾಗಿವೆ.ಅಂದು ನೀನು ಕೊಟ್ಟ ಸಂಪೂರ್ಣ ಸ್ವತಂತ್ರದಿಂದ ಇಂದು ನಮ್ಮಲ್ಲಿ ಪರಸ್ಪರ ನಂಬಿಕೆ,ವಿಶ್ವಾಸ ಮನೆಮಾಡಿದೆ.ಮನಸ್ಸು ಶಾಂತವಾಗಿದೆ,ಏನೋ ತ್ಯಾಗ ಮಾಡಿದ ಮನೋಭಾವ.
ನಿನಗೆ ಪ್ರೀತಿಯ ನೀವೇದನೆ,ಮಾಡಿದ ಗಳಿಗೆಯೇ, ಅಂತಹುದು!!!.ಸಮಯ ತುಂಬಾ ಕಡಿಮೆಯಿತ್ತು.ಒಂದು ಸಾರಿ ನಿನಗೆ,ಫೋನ್,ನಾನು ನಿನ್ಹತ್ರ ಮಾತನಾಡಬೇಕು ಅಂದಾಗ,ನೀನು ನನಗೆ URGENT ಕೆಲಸ ಇದೆ,ಏನು ಹೇಳ್ಬೇಕೋ ಅದನ್ನು ಒಂದೇ ಕ್ಷಣದಲ್ಲಿ ಹೇಳಬೇಕುಎಂದಾಗ,ನನಗೆ ಸ್ವಲ್ಪ ಇರುಸು-ಮುರುಸಾಯಿತು.ಕಾರಣ ಅಷ್ಟು ದಿನ,ತಿಂಗಳುಗಳು,ವರುಷಗಳಷ್ಟು ಮಾಡಿದ್ದ ಪ್ರೀತಿಯನ್ನು"ಆ ಒಂದು ಕ್ಷಣದಲ್ಲಿ ಹೇಳಿ ಬಿಡೋದಾ???.ಅದು ಹೇಗೆ ಸಾದ್ಯ??.ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಅಂದ ಮಾತ್ರಕ್ಕೆ,ನನ್ನ ಬಗ್ಗೆ ಎಲ್ಲಾ ಹೇಳಿದ ಹಾಗೆ ಆಯ್ತಾ??.NO,NO.ನಾನು ನನ್ನ ಬಗ್ಗೆ ಎಲ್ಲಾ ಹೇಳಬೇಕು,ಅಂದರೆ ಸಂಪೂರ್ಣವಾಗಿ.ಎಲ್ಲಾ,ಹೇಳಿದ ನಂತರ ಸ್ವಲ್ಪ "ಮೌನ" ನಮ್ಮಿಬ್ಬ್ರರ ನಡುವೆ ಆವರಿಸಬೇಕು.ಆ ಮೌನಕ್ಕೆ ಒಂದು ಭಾಷೆ ಇರಬೇಕು.ಅದಕ್ಕೆ ಪ್ರೀತಿಯನ್ನು ಅರ್ಥ ಮಾಡಿಕೊಳ್ಳ್ಳುವ ಶಕ್ತಿ ಇರಬೇಕು.ಸಂಯಮ,ತಾಳ್ಮೆ,ಎಲ್ಲವೂ ಇರಬೇಕು.ಕೊನೆಯದಾಗಿ ನಮ್ಮ ಪ್ರೀತಿಗೆ "ವಿದಾಯ "ಎಂಬುವುದು ಇರಲೇ ಬಾರದು.
ಅಂದು ನಾನು,ನಿನಗೆ ಪ್ರೀತಿಯ ನಿವೇದನೆ ಮಾಡಿದ, SORRY,ನೀನೇ ನನಗೆ ಪ್ರೀತಿಯ ನಿವೇದನೆಯನ್ನು ಮಾಡಿದ,ದಿನಾಂಕವನ್ನು ನನ್ನ ಮೊಬೈಲಿನ ರಿಮೈಂಡರಿನಲ್ಲಿ ಇಂದು ಹಾಗೇ ನೋಡಿದೆ,ಅದು ಭಾನುವಾರ,ಬೆಳಿಗ್ಗೆ 6:30, 0-04-2004.
ರಾಜು ಬಡಗಿ
Advertisement