559 ಕಾರ್ಗಿಲ್ ವೀರರ ಹೆಸರು ಹಚ್ಚೆ; ಉತ್ತರ ಪ್ರದೇಶ ವ್ಯಕ್ತಿ ವಿಶ್ವ ದಾಖಲೆ

ಉತ್ತರ ಪ್ರದೇಶ ರಾಜ್ಯದ ಹಾಪುರದ ವ್ಯಕ್ತಿ ಅಭಿಷೇಕ್ ಗೌತಮ್ ತನ್ನ ದೇಹದ ಮೇಲೆ 559 ಕಾರ್ಗಿಲ್ ಯುದ್ಧ ವೀರರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಭಾರತದ 11 ಮಹಾನ್ ವ್ಯಕ್ತಿಗಳು ಸೇರಿದಂತೆ ಒಟ್ಟು 631 ಹೆಸರುಗಳು ಅವರ ದೇಹದಲ್ಲಿ ಹಚ್ಚೆಯಾಗಿದೆ.

ನಾನು ಕಾರ್ಗಿಲ್‌ನ ದ್ರಾಸ್‌ಗೆ ಮೊಟ್ಟಮೊದಲ ಬಾರಿಗೆ ಭೇಟಿ ನೀಡಿದಾಗ, ಯುದ್ಧವೀರರಿಗೆ ಗೌರವ ತೋರಿಸಬೇಕೆಂದು ಅನಿಸಿತು. ಆದ್ದರಿಂದ ಅವರು ಈ ವಿಧಾನವನ್ನು ಆರಿಸಿಕೊಂಡೆ ಎಂದು ಗೌತಮ್ ಹೇಳಿದ್ದಾರೆ.

ಕಾರ್ಗಿಲ್‌ನ 559 ಹುತಾತ್ಮರು, ಚಾಣಕ್ಯ, ವಿವೇಕಾನಂದ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಮತ್ತು ಮಹಾತ್ಮ ಗಾಂಧಿ ಸೇರಿದಂತೆ 11 ಮಹಾನ್ ವ್ಯಕ್ತಿಗಳ ಹೆಸರು ನನ್ನ ದೇಹದಲ್ಲಿ ಹಚ್ಚೆಯಾಗಿದೆ.

ನನ್ನ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ನೋಂದಾಯಿಸಲ್ಪಟ್ಟಿದೆ ಮತ್ತು ಶೀಘ್ರದಲ್ಲೇ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಲಿದೆ ಎಂದು ಅಭಿಷೇಕ್ ಗೌತಮ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com