ವಿಡಿಯೋ
ಮಹಾರಾಷ್ಟ್ರ ಮಾದಕವಸ್ತು ವಿರೋಧಿ ಕಾರ್ಯಪಡೆ, ಬೆಂಗಳೂರು ನಗರ ಪೊಲೀಸರು ಮತ್ತು ಮಾದಕವಸ್ತು ನಿಯಂತ್ರಣ ಬ್ಯೂರೋ ಜಂಟಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಪತ್ತೆಹಚ್ಚಿದ್ದಾರೆ.
ಮೆಫೆಡ್ರೋನ್ ಮತ್ತು ಡ್ರಗ್ಸ್ ಸಂಬಂಧಿತ ವಸ್ತುಗಳ ಅಕ್ರಮ ತಯಾರಿಕೆ ಹಾಗೂ ಸಾಗಣೆ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಒಟ್ಟಾರೆಯಾಗಿ, 1.2 ಕೋಟಿ ರೂ. ಮೌಲ್ಯದ 4.2 ಕೆಜಿ ಮೆಫೆಡ್ರೋನ್ ಡ್ರಗ್ ಮತ್ತು 17 ಕೆಜಿ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement