ವಿಡಿಯೋ
Watch | DRI ಭರ್ಜರಿ ಬೇಟೆ: 80 ಕೋಟಿ ರೂ ಮೌಲ್ಯದ ಚಿನ್ನದ ಗಟ್ಟಿ ವಶ
ಗುಜರಾತ್ ಎಟಿಎಸ್ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಹಮದಾಬಾದ್ ನಗರದ ಪಾಲ್ಡಿ ಪ್ರದೇಶದಲ್ಲಿ ಖಾಲಿ ಫ್ಲಾಟ್ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿದೆ.
ಈ ವೇಳೆ ಫ್ಲಾಟ್ ನಲ್ಲಿದ್ದ ಚಿನ್ನದ ಗಟ್ಟಿಗಳನ್ನು ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಸುಮಾರು 90 ಕೆಜಿ ಇದ್ದು ಪ್ರಸ್ತುತ ಮಾರುಕಟ್ಟೆ ಬೆಲೆಯನ್ನು ಆಧರಿಸಿ ಇದರ ಮೌಲ್ಯ 80 ಕೋಟಿ ರೂ. ಗಿಂತ ಹೆಚ್ಚಿರಬಹುದು ಎಂದು ಹೇಳಿದ್ದಾರೆ.
ಗುಜರಾತ್‌ಗೆ ಅಪಾರ ಪ್ರಮಾಣದ ಚಿನ್ನವನ್ನು ಕಳ್ಳಸಾಗಣೆ ಮಾಡಿ ಆವಿಷ್ಕಾರ್ ಅಪಾರ್ಟ್‌ಮೆಂಟ್‌ನಲ್ಲಿರುವ ಮುಚ್ಚಿದ ಫ್ಲಾಟ್‌ನಲ್ಲಿ ಅಡಗಿಸಿಡಲಾಗಿದೆ ಎಂದು ಗುಪ್ತಚರ ಮಾಹಿತಿ ತಿಳಿಸಿತ್ತು. ವಿಡಿಯೋ ಇಲ್ಲಿದೆ ನೋಡಿ.