Watch | ಕೇಜ್ರಿವಾಲ್​ ನಿವಾಸ 'ಶೀಶ್ ಮಹಲ್ 2'- BJP ಟೀಕೆ; ಮಾನನಷ್ಟ ಮೊಕದ್ದಮೆ- AAP ಎಚ್ಚರಿಕೆ

ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದ ನವೀಕರಣದ ಕುರಿತು ಭಾರತೀಯ ಜನತಾ ಪಕ್ಷ ಆರೋಪಗಳನ್ನು ಮಾಡಿದ್ದು, “ಶೀಶ್ ಮಹಲ್ 2” ಎಂದು ಟೀಕಿಸಿದೆ.

ದೆಹಲಿ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಪರ್ವೇಶ್ ವರ್ಮಾ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೇಜ್ರಿವಾಲ್ “ಕಾಮನ್​ ಮ್ಯಾನ್” ಇಮೇಜ್ ಅನ್ನು ತ್ಯಜಿಸಿದ್ದು, ಲೋದಿ ಎಸ್ಟೇಟ್‌ನಲ್ಲಿರುವ ಅವರ ನಿವಾಸವನ್ನು ನಿಯಮಗಳಿಗಿಂತ ಹೆಚ್ಚಾಗಿ ಐಷಾರಾಮಿಯಾಗಿ ನವೀಕರಣ ಮಾಡಲಾಗಿದೆ.

ಇದೇ ವೇಳೆ ಫೋಟೋಗಳನ್ನೂ ಪ್ರದರ್ಶಿಸಿರುವ ಅವರು, ಅವು ಕೇಜ್ರಿವಾಲ್ ನಿವಾಸದ ಒಳಾಂಗಣದ ದೃಶ್ಯಗಳೆಂದು ಹೇಳಿದ್ದಾರೆ. ಜೊತೆಗೆ, ಈ ಮನೆ ಈಗ “ಶೀಶ್ ಮಹಲ್ 2” ಆಗಿದೆ ಎಂದು ಟೀಕೆ ಮಾಡಿದ್ದಾರೆ.

ಈ ಆರೋಪಗಳನ್ನು ಆಮ್ ಆದ್ಮಿ ಪಕ್ಷ ಸಂಪೂರ್ಣವಾಗಿ ತಿರಸ್ಕರಿಸಿದೆ.

ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ಬಿಜೆಪಿ ಪ್ರದರ್ಶಿಸಿದ ಫೋಟೋಗಳು “ನಕಲಿ” ಎಂದು ಹೇಳಿದ್ದು, ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com