Watch | ಹಲವು ದೇಶಗಳು ತಮ್ಮ ಯುವಕರಿಗೆ ತರಬೇತಿ ನೀಡಲು RSS ಸಹಕಾರ ಕೇಳುತ್ತಿವೆ!

ವಿಶ್ವದ ವಿವಿಧ ದೇಶಗಳ ಜನರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯವನ್ನು ಗಮನಿಸುತ್ತಿವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಐದು ಖಂಡಗಳು ತಮ್ಮ ದೇಶಗಳ ಯುವಕರಿಗೆ ತರಬೇತಿ ನೀಡುವ ವಿಧಾನವನ್ನು ಕಲಿಸಿಕೊಡಲು ಸಂಘದ ಸಹಕಾರವನ್ನು ಕೇಳುತ್ತಿವೆ ಎಂದು ಭಾಗವತ್ ತಿಳಿಸಿದರು.

ನಾಗ್ಪುರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಸಂಸ್ಥೆಯನ್ನೂ ಆರ್‌ಎಸ್‌ಎಸ್ ದೂರದಿಂದ ನಿಯಂತ್ರಿಸುತ್ತದೆ ಅಥವಾ ನಡೆಸುತ್ತದೆ ಎಂಬ ಅಭಿಪ್ರಾಯವನ್ನು ತಳ್ಳಿಹಾಕಲು ಪ್ರಯತ್ನಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ರಾಮಮಂದಿರ ದೇಣಿಗೆ 'ಕಳ್ಳತನ'ದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು; ತಮ್ಮ ಕಾರನ್ನು ಹತ್ತುವ ಮೊದಲು 'ರಾಮ್ ರಾಮ್' ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com