ವಿಡಿಯೋ
ನಾನು ಸಿಎಂ ಆಗಿದ್ದಕ್ಕೆ ಕೆಲವರಿಗೆ ನಿದ್ದೆಯೇ ಬರುತ್ತಿಲ್ಲ, ನನ್ನನ್ನು ಜೈಲಿಗೆ ಕಳುಹಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಬಿಡದಿ ಟೌನ್ ಶಿಪ್ ವಿಚಾರವಾಗಿ ವಸ್ತುನಿಷ್ಠ ವಿಚಾರವನ್ನು ಜನತೆಯ ಮುಂದೆ ತಿಳಿಸಬೇಕೆಂದು ಸುದ್ದಿಗೋಷ್ಠಿ ಕರೆದಿದ್ದೇನೆ ಎಂದು ಡಿಕೆಶಿ ಹೇಳಿದರು.
ನಾನು ರೈತನ ಮಗ, ವ್ಯವಸಾಯ ಮಾಡದಿದ್ದರೂ ಹುಟ್ಟಿನಿಂದ ಬೇಸಾಯಗಾರನ ಮಗ, ನನಗೆ ರೈತರ ಕಷ್ಟದ ಬಗ್ಗೆ ಅನುಭವವಿದೆ.
ಹುಟ್ಟುತ್ತಲೇ ನಾನು ಕೃಷಿಕನ ಮಗ, ಹೀಗಿರುವಾಗ ನಾನು ರೈತರ ವಿರುದ್ಧ ನಿರ್ಧಾರ ತೆಗೆದುಕೊಳ್ಳುತ್ತೇನೆಯೇ, ಬಿಡದಿ ಟೌನ್ ಶಿಪ್ ಯೋಜನೆಯ ಪಿತಾಮಹ ನಾನಲ್ಲ ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.